ಇಂಗ್ಲೆಂಡ್ ಎ ವಿರುದ್ಧದ ಸರಣಿಗೆ ಭಾರತ ಎ ತಂಡ ಪ್ರಕಟ: ಐವರು ಕನ್ನಡತಿಯರಿಗೆ ಸ್ಥಾನ
ಭಾರತ ಎ ಮಹಿಳಾ ತಂಡ ನವೆಂಬರ್ 30 ರಿಂದ ಇಂಗ್ಲೆಂಡ್ ಎ ವಿರುದ್ಧ 3 ಟಿ20, 3 ಏಕದಿನ ಮತ್ತು 1 ಬಹುದಿನಗಳ ಸರಣಿ ಆಡಲಿದೆ. ಬಿಸಿಸಿಐ ಘೋಷಿಸಿದ ತಂಡಗಳಲ್ಲಿ ಅನುಷ್ಕಾ ಶರ್ಮಾ ಟಿ20 ಹಾಗೂ ಏಕದಿನ ತಂಡಗಳ ನಾಯಕಿಯಾಗಿದ್ದಾರೆ. ಮಿನ್ನು ಮಣಿ ಬಹುದಿನಗಳ ನಾಯಕಿ. ಕರ್ನಾಟಕದ ವೃಂದಾ ದಿನೇಶ್, ನಿಕ್ಕಿ ಪ್ರಸಾದ್, ಶ್ರೇಯಾಂಕಾ ಪಾಟೀಲ್, ಮೋನಿಕ ಶರ್ಮಾ, ಶುಭ ಸತೀಶ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪುಣೆ, ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ.

ಭಾರತ ಎ ಮಹಿಳಾ ತಂಡ ಇದೇ ನವೆಂಬರ್ 30 ರಿಂದ ಇಂಗ್ಲೆಂಡ್ ಎ ಮಹಿಳಾ ತಂಡದ ವಿರುದ್ಧ ಮೂರು ಮಾದರಿಗಳ ಸರಣಿಯನ್ನು ಆಡಲಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಗಾಗಿ ಬಿಸಿಸಿಐ ಇಂದು ಭಾರತ ಎ ತಂಡವನ್ನು ಪ್ರಕಟಿಸಿದೆ. ಮಹಿಳಾ ಆಯ್ಕೆ ಸಮಿತಿಯು ಮೂರು ಟಿ20, ಮೂರು ಏಕದಿನ ಹಾಗೂ ಒಂದು ಬಹುದಿನಗಳ ಪಂದ್ಯಕ್ಕೆ ಭಾರತ ತಂಡಗಳನ್ನು ಆಯ್ಕೆ ಮಾಡಿದೆ. ಈ ಸರಣಿಯ ಟಿ20 ಪಂದ್ಯಗಳು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಇನ್ನು ಏಕದಿನ ಹಾಗೂ ಬಹುದಿನಗಳ ಪಂದ್ಯಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ.
ಮೂವರು ಕನ್ನಡತಿಯರಿಗೆ ಸ್ಥಾನ
ಅನುಷ್ಕಾ ಶರ್ಮಾ ಟಿ20 ಹಾಗೂ ಏಕದಿನ ತಂಡಗಳ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಿನ್ನು ಮಣಿ ಎರಡೂ ತಂಡಗಳಲ್ಲಿ ಉಪನಾಯಕಿಯಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಬಹುದಿನಗಳ ಪಂದ್ಯದಲ್ಲಿ ಮಿನ್ನು ಮಣಿ ತಂಡವನ್ನು ಮುನ್ನಡೆಸಲಿದ್ದು, ತೇಜಲ್ ಹಸಬ್ನಿಸ್ ಉಪನಾಯಕಿಯಾಗಿದ್ದಾರೆ. ಇದರಲ್ಲಿ ಟಿ20 ಹಾಗೂ ಏಕದಿನ ತಂಡಗಳಲ್ಲಿ ಐವರು ಕರ್ನಾಟಕದ ಆಟಗಾರ್ತಿಯರು ಆಯ್ಕೆಯಾಗಿರುವುದು ವಿಶೇಷವಾಗಿದೆ. ಮೋನಿಕ ಶರ್ಮಾ ಟಿ20 ಸರಣಿ ಹಾಗೂ ಶುಭ ಸತೀಶ್ ಬಹುದಿನಗಳ ಪಂದ್ಯಕ್ಕೆ ಆಯ್ಕೆಯಾಗಿದ್ದರೆ, ವೃಂದಾ ದಿನೇಶ್, ನಿಕ್ಕಿ ಪ್ರಸಾದ್ ಟಿ20 ಹಾಗೂ ಏಕದಿನ ಸರಣಿಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ ಮೂರು ಮಾದರಿಯ ಸರಣಿಗಳಿಗೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
🚨 News 🚨
India A Women’s squads for all-format home series against England A announced.
Details ▶️ https://t.co/j0HicMVnlN
#INDAvENGA https://t.co/ElobCWGt1H
— BCCI Women (@BCCIWomen) November 11, 2026
ಟಿ20 ಸರಣಿಗೆ ಭಾರತ ಎ ತಂಡ: ವೃಂದಾ ದಿನೇಶ್, ತನಿಷಾ ಸಿಂಗ್, ಸನಿಕಾ ಚಾಲ್ಕೆ, ಅನುಷ್ಕಾ ಶರ್ಮಾ (ನಾಯಕಿ), ನಿಕಿ ಪ್ರಸಾದ್, ಜಿ. ಕಮಲಿನಿ (ವಿಕೆಟ್ ಕೀಪರ್), ಶಿಪ್ರಾ ಗಿರಿ (ವಿಕೆಟ್ ಕೀಪರ್), ಮಿನ್ನು ಮಣಿ (ಉಪನಾಯಕಿ), ಅಮನ್‌ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ವೈಷ್ಣವಿ ಶರ್ಮಾ, ಪ್ರೇಮಾ ರಾವತ್, ಸೈಮಾ ಠಾಕೂರ್, ಮೋನಿಕಾ ಪಟೇಲ್, ಕಾಶ್ವಿ ಗೌತಮ್.
ಏಕದಿನ ಸರಣಿಗೆ ಭಾರತ ಎ ತಂಡ: ವೃಂದಾ ದಿನೇಶ್, ತನಿಷಾ ಸಿಂಗ್, ಪ್ರಿಯಾ ಪುನಿಯಾ, ಅನುಷ್ಕಾ ಶರ್ಮಾ (ನಾಯಕಿ), ನಿಕಿ ಪ್ರಸಾದ್, ಜಿ. ಕಮಲಿನಿ (ವಿಕೆಟ್ ಕೀಪರ್), ಶಿಪ್ರಾ ಗಿರಿ (ವಿಕೆಟ್ ಕೀಪರ್), ಮಿನ್ನು ಮಣಿ (ಉಪನಾಯಕಿ), ತೇಜಲ್ ಹಸಬ್ನಿಸ್, ಶ್ರೇಯಾಂಕಾ ಪಾಟೀಲ್, ಅಮಿಷಾ ಬಹುಕಂಡಿ, ಶಬ್ನಮ್ ಶಕೀಲ್, ಸೈಮಾ ಠಾಕೂರ್, ಅಕ್ಷಿತಾ ಭಗತ್, ಕಾಶ್ವಿ ಗೌತಮ್.
ಬಹುದಿನಗಳ ಪಂದ್ಯಕ್ಕೆ ಭಾರತ ಎ ತಂಡ: ಶುಭಾ ಸತೀಶ್, ಪ್ರಿಯಾ ಪುನಿಯಾ, ತನಿಷಾ ಸಿಂಗ್, ಪೂರ್ವಜಾ ವೆರ್ಳೇಕರ್, ಹೆನ್ರಿಯೆಟ್ಟಾ ಪೆರೇರಾ, ತೇಜಲ್ ಹಸಬ್ನಿಸ್ (ಉಪನಾಯಕಿ), ಶಿಪ್ರಾ ಗಿರಿ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ಮಿನ್ನು ಮಣಿ (ನಾಯಕಿ), ಶ್ರೇಯಾಂಕಾ ಪಾಟೀಲ್, ಸೈಮಾ ಠಾಕೂರ್, ಅಕ್ಷಿತಾ ಭಗತ್, ಅಮಿಷಾ ಬಹುಕಂಡಿ, ಹ್ಯಾಪಿ ಕುಮಾರಿ, ಶಬ್ನಮ್ ಶಕೀಲ್.
ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಸ್ಥಳಾಂತರ; ಬಿಸಿಸಿಐಗೆ ಅಧಿಕೃತ ಮನವಿ
ಇಂಗ್ಲೆಂಡ್ ಎ ವಿರುದ್ಧ ಭಾರತದ ಸರಣಿಯ ವೇಳಾಪಟ್ಟಿ
ಟಿ20 ಸರಣಿ
- ನವೆಂಬರ್ 30: ಮೊದಲ ಟಿ20, ಮಧ್ಯಾಹ್ನ 1 ಗಂಟೆ, ಪುಣೆ.
- ಡಿಸೆಂಬರ್ 3: ಎರಡನೇ ಟಿ20, ಸಂಜೆ 6 ಗಂಟೆ, ಪುಣೆ.
- ಡಿಸೆಂಬರ್ 5: ಮೂರನೇ ಟಿ20, ಸಂಜೆ 6 ಗಂಟೆ, ಪುಣೆ.
ಏಕದಿನ ಸರಣಿ
- ಡಿಸೆಂಬರ್ 8: ಮೊದಲ ಏಕದಿನ, ಬೆಳಗ್ಗೆ 9 ಗಂಟೆ, ಮುಂಬೈ.
- ಡಿಸೆಂಬರ್ 11: ಎರಡನೇ ಏಕದಿನ, ಮಧ್ಯಾಹ್ನ 2 ಗಂಟೆ, ಮುಂಬೈ.
- ಡಿಸೆಂಬರ್ 14: ಮೂರನೇ ಏಕದಿನ, ಮಧ್ಯಾಹ್ನ 2 ಗಂಟೆ, ಮುಂಬೈ.
ಬಹುದಿನಗಳ ಪಂದ್ಯ
- ಡಿಸೆಂಬರ್ 19: ಬಹುದಿನಗಳ ಪಂದ್ಯ, ಬೆಳಗ್ಗೆ 9.30, ಮುಂಬೈ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Wed, 11 November 26
