ಹಾಂಗ್ ಕಾಂಗ್​ ಸಿಕ್ಸಸ್ ಟೂರ್ನಿಗೆ ಭಾರತ ತಂಡ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ

Hong Kong Sixes: ನವೆಂಬರ್ 1 ರಿಂದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು ಶುರುವಾಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ನವೆಂಬರ್ 3 ರಂದು ಜರುಗಲಿದೆ. ಈ ಎಲ್ಲಾ ಪಂದ್ಯಗಳಿಗೆ ಹಾಂಗ್​ ಕಾಂಗ್​ನ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಹಾಂಗ್ ಕಾಂಗ್​ ಸಿಕ್ಸಸ್ ಟೂರ್ನಿಗೆ ಭಾರತ ತಂಡ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ
India squad
Follow us
|

Updated on: Oct 12, 2024 | 12:56 PM

ನವೆಂಬರ್ 1 ರಿಂದ ಶುರುವಾಗಲಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 7 ಆಟಗಾರರನ್ನು ಒಳಗೊಂಡಿರುವ ಈ ತಂಡವನ್ನು ಕನ್ನಡಿಗ ರಾಬಿನ್ ಉತ್ತಪ್ಪ ಮುನ್ನಡೆಸಲಿದ್ದಾರೆ. ಹಾಗೆಯೇ ಈ ತಂಡದಲ್ಲಿ ಕರ್ನಾಟಕದ ಕ್ರಿಕೆಟಿಗರಾದ ಸ್ಟುವರ್ಟ್ ಬಿನ್ನಿ ಹಾಗೂ ಭರತ್ ಚಿಪ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ಕೇದಾರ್ ಜಾಧವ್, ಮನೋಜ್ ತಿವಾರಿ, ಶಹಬಾಝ್ ನದೀಮ್ ಹಾಗೂ ಶ್ರೀವತ್ಸ್ ಗೋಸ್ವಾಮಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಆಟಗಾರರನ್ನು ಈ ಟೂರ್ನಿಗೆ ಬಿಸಿಸಿಐಗೆ ಹೆಸರಿಸಿದೆ.

ಏನಿದು ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿ?

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು 6 ಆಟಗಾರರನ್ನು ಒಳಗೊಂಡಿರುವ ಪಂದ್ಯಾವಳಿ. ಅಲ್ಲದೆ ಈ ಟೂರ್ನಿಯ ಪ್ರತಿ ಇನಿಂಗ್ಸ್​ನಲ್ಲಿ ಕೇವಲ 5 ಓವರ್​ಗಳನ್ನು ಮಾತ್ರ ಆಡಲಾಗುತ್ತದೆ. ಈ ಪಂದ್ಯಾವಳಿಯ ನಿಯಮಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. ಒಂದು ತಂಡದ ಆಡುವ ಬಳಗದಲ್ಲಿ ಕೇವಲ 6 ಆಟಗಾರರಿಗೆ ಮಾತ್ರ ಅವಕಾಶ.
  2. ಪ್ರತಿ ಪಂದ್ಯದ ಇನಿಂಗ್ಸ್​ವೊಂದರಲ್ಲಿ 5 ಓವರ್​ಗಳನ್ನು ಆಡಲಾಗುತ್ತದೆ.
  3. ಪ್ರತಿ ಓವರ್​ನಲ್ಲಿ 8 ಎಸೆತಗಳು ಇರಲಿದೆ. ಸಾಮಾನ್ಯ ಪಂದ್ಯಗಳಲ್ಲಿ ಒಂದು ಓವರ್​ಗೆ 6 ಬಾಲ್​ಗಳು ಮಾತ್ರ ಇರುತ್ತವೆ.
  4. ವೈಡ್ ಮತ್ತು ನೋಬಾಲ್​ಗೆ 2 ರನ್​ಗಳನ್ನು ನೀಡಲಾಗುತ್ತದೆ.
  5. ವಿಕೆಟ್-ಕೀಪರ್ ಹೊರತುಪಡಿಸಿ, ಫೀಲ್ಡಿಂಗ್ ತಂಡದ ಪ್ರತಿಯೊಬ್ಬ ಸದಸ್ಯರು ಬೌಲಿಂಗ್ ಮಾಡಬೇಕು.
  6. ನಿಗದಿತ 5 ಓವರ್‌ಗಳು ಮುಗಿಯುವ ಮುನ್ನ 5 ವಿಕೆಟ್‌ಗಳು ಪತನವಾದರೆ, ಕೊನೆಯ ಬ್ಯಾಟರ್ ಸಿಂಗಲ್ ಆಗಿ ಬ್ಯಾಟಿಂಗ್ ಮಾಡಬಹುದು.
  7. ಸಿಂಗಲ್ ಬ್ಯಾಟ್ಸ್​ಮನ್​ ಜೊತೆ ಮತ್ತೋರ್ವ ಆಟಗಾರ ರನ್ನರ್ ಆಗಿ ನಾನ್​ ಸ್ಟ್ರೈಕ್​ನಲ್ಲಿರಬೇಕು. ಆದರೆ ಆತನಿಗೆ ಬ್ಯಾಟಿಂಗ್ ಅವಕಾಶವಿರುವುದಿಲ್ಲ.
  8. ಬ್ಯಾಟ್ಸ್‌ಮನ್‌ 31 ರನ್​ಗಳಿಸಿದರೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಮರಳಬೇಕು. ಇದಾದ ಬಳಿಕ ಇತರೆ ಬ್ಯಾಟ್ಸ್‌ಮನ್‌ಗಳು ಔಟಾದರೆ, ನಿವೃತ್ತರಾದ ಬ್ಯಾಟರ್​ ಮತ್ತೆ ಬ್ಯಾಟಿಂಗ್ ಮಾಡಬಹುದು.

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಕಣಕ್ಕಿಳಿಯುವ ತಂಡಗಳು:

  • ಭಾರತ
  • ಪಾಕಿಸ್ತಾನ್
  • ಆಸ್ಟ್ರೇಲಿಯಾ
  • ಬಾಂಗ್ಲಾದೇಶ್
  • ಹಾಂಗ್​ ಕಾಂಗ್
  • ಇಂಗ್ಲೆಂಡ್
  • ನೇಪಾಳ
  • ನ್ಯೂಝಿಲೆಂಡ್
  • ಒಮಾನ್
  • ಸೌತ್ ಆಫ್ರಿಕಾ
  • ಶ್ರೀಲಂಕಾ
  • ಯುಎಇ

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸ್ವರೂಪವೇನು?

ಈ 12 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಇದರಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆಲ್ಲುವ ಅಗ್ರ ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸುತ್ತದೆ. ದ್ವಿತೀಯ ಸುತ್ತಿನಲ್ಲಿ ಸೆಮಿಫೈನಲ್ ಇರಲಿದ್ದು, ಇದಾದ ಬಳಿಕ ಫೈನಲ್ ಮ್ಯಾಚ್ ನಡೆಯಲಿದೆ.

ಇದನ್ನೂ ಓದಿ: ಸಿರಾಜ್ ಈಗ ಡಿಎಸ್​ಪಿ: ಟೀಮ್ ಇಂಡಿಯಾಗೆ ಹೇಳ್ತಾರಾ ಗುಡ್ ಬೈ?

ಭಾರತ ತಂಡ: ರಾಬಿನ್ ಉತ್ತಪ್ಪ (ನಾಯಕ), ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ, ಶಹಬಾಜ್ ನದೀಮ್, ಭರತ್ ಚಿಪ್ಲಿ, ಶ್ರೀವತ್ಸ್ ಗೋಸ್ವಾಮಿ (ವಿಕೆಟ್ ಕೀಪರ್).

ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ