IND vs BAN 2nd test: ಭಾರತ-ಬಾಂಗ್ಲಾದೇಶ ದ್ವಿತೀಯ ಟೆಸ್ಟ್ ಯಾವಾಗ?: ತಂಡದಲ್ಲಿ ಯಾರಿಗೆ ಸ್ಥಾನ?, ಇಲ್ಲಿದೆ ಮಾಹಿತಿ
India vs Bangladesh 2nd Test: ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ ಡಿಸೆಂಬರ್ 26ರ ವರೆಗೆ ನಡೆಯಲಿದೆ. ಇದನ್ನು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ (India vs Bangladesh) ಏಕದಿನ ಸರಣಿಯನ್ನು ಕಳೆದುಕೊಂಡ ಬಳಿಕ ಟೆಸ್ಟ್ ಸರಣಿಯಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಚಟ್ಟೋಗ್ರಾಮ್ನ ಝಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 188 ರನ್ಗಳ ಅಮೋಘ ಜಯ ಸಾಧಿಸಿದ ಟೀಮ್ ಇಂಡಿಯಾ (Team India) ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಇದೀಗ ದ್ವಿತೀಯ ಹಾಗೂ ಅಂತಿಮ ಟೆಸ್ಟ್ಗೆ ಉಭಯ ತಂಡಗಳು ಸಜ್ಜಾಗುತ್ತಿದೆ. ಭಾರತ ಹಾಗೂ ಬಾಂಗ್ಲಾ ಎರಡೂ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಸರಣಿ ವಶಪಡಿಸಿಕೊಳ್ಳಬೇಕಾದರೆ ರಾಹುಲ್ (KL Rahul) ಪಡೆಗೆ ಈ ಮ್ಯಾಚ್ ಗೆಲ್ಲಲೇ ಬೇಕು. ಇತ್ತ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಶಕಿಬ್ ಪಡೆ ಸಮಬಲಕ್ಕೆ ಹೋರಾಟ ನಡೆಸಬೇಕಿದೆ. ಹಾಗಾದರೆ, ಭಾರತ ಬಾಂಗ್ಲಾ ದ್ವಿತೀಯ ಟೆಸ್ಟ್ ಯಾವಾಗ?.
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ ಡಿಸೆಂಬರ್ 26ರ ವರೆಗೆ ನಡೆಯಲಿದೆ. ಇದನ್ನು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 9 ಗಂಟೆಗೆ ಶುರುವಾಗಲಿದೆ. 8:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಸೋನಿ ಲಿವ್ನಲ್ಲಿ ಲೈವ್ ಸ್ಟ್ರೀಮ್ ಕಾಣಲಿದೆ.
IPL Auction 2023: ಮಿನಿ ಹರಾಜಿಗೆ ದಿನಗಣನೆ; ಆಟಗಾರರ ಮೂಲ ಬೆಲೆ, ಯಾವ ಚಾನೆಲ್ನಲ್ಲಿ, ಎಷ್ಟು ಗಂಟೆಗೆ ನೇರ ಪ್ರಸಾರ?
ರೋಹಿತ್ ಶರ್ಮಾ ಅಲಭ್ಯ:
ಬಾಂಗ್ಲಾ ಪ್ರವಾಸದ ಎರಡನೇ ಏಕದಿನ ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದ ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಹೆಬ್ಬೆರಳು ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಹೀಗಾಗಿ ಮೊದಲ ಟೆಸ್ಟ್ ಬಳಿಕ ಇದೀಗ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂಬ ಸುದ್ದು ಹೊರಬಿದ್ದಿದೆ. ಭಾರತ ತಂಡದ ಮುಂದಿರುವ ಪ್ರಮುಖ ಸರಣಿಗಳನ್ನು ಪರಿಗಣಿಸಿ, ಬಿಸಿಸಿಐ ಆಯ್ಕೆ ಸಮಿತಿ ಮತ್ತು ತಂಡದ ಆಡಳಿತವು ಈ ಹಂತದಲ್ಲಿ ಅವರನ್ನು ಆಡಿಸದಿರಲು ಯೋಜಿಸಿದೆ. ಪ್ರಸ್ತುತ ಮುಂಬೈನಲ್ಲಿರುವ ರೋಹಿತ್ ಟೆಸ್ಟ್ ಮೂಲಕ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದರು ಆದರೆ ಫೀಲ್ಡಿಂಗ್ ಮಾಡುವಾಗ ಉಂಟಾಗುವ ಅಪಾಯದ ಬಗ್ಗೆ ಕಳವಳಗಳಿವೆ ಎಂದು ವರದಿಯಾಗಿದೆ. ಜನವರಿ ಮೂರರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಸರಣಿ ವೇಳೆ ರೋಹಿತ್ ತಂಡ ಸೇರಿಕೊಳ್ಳಲಿದ್ದಾರೆ.
ಬಾಂಗ್ಲಾಕ್ಕೆ ಶಾಕ್:
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದ್ವಿತೀಯ ಟೆಸ್ಟ್ಗೆ ತಂಡವನ್ನು ಪ್ರಕಟ ಮಾಡಿದೆ. ಆದರೆ, ಮೊದಲ ಟೆಸ್ಟ್ ಸೋಲಿನಲ್ಲಿರುವ ಬಾಂಗ್ಲಾದೇಶಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಇಂಜುರಿ ಕಾರಣದಿಂದ ಮೊದಲ ಟೆಸ್ಟ್ಗೆ ಅಲಭ್ಯರಾಗಿದ್ದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಅಷ್ಟೆ ಅಲ್ಲ, ವೇಗಿ ಹುಸೈನ್ ಕೂಡ ಇಂಜುರಿಗೆ ಒಳಗಾಗಿದ್ದು ಢಾಕಾ ಟೆಸ್ಟ್ನಿಂದ ಔಟ್ ಆಗಿದ್ದಾರೆ. ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಶ್ರೇಯಸ್ ಅಯ್ಯರ್ ಅವರ ಪ್ರಮುಖ ವಿಕೆಟ್ ಪಡೆದಿದ್ದ ಇಬಾದತ್, ಭಾರತೀಯ ಬ್ಯಾಟ್ಸ್ಮನ್ಗಳಿಗೆ ಸಾಕಷ್ಟು ತೊಂದರೆ ನೀಡಿದ್ದರು. ಇನ್ನು ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ಶೋರಿಫುಲ್ ಇಸ್ಲಾಮ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಅವರ ಸ್ಥಾನಕ್ಕೆ ಮೊಮಿನುಲ್ ಹಕ್ ಅವರನ್ನು ಕರೆತರಲಾಗಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್.
ಬಾಂಗ್ಲಾದೇಶ ತಂಡ: ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ನಸುಮ್ ಅಹ್ಮದ್, ಮಹ್ಮುದುಲ್ ಹಸನ್ ಪ್ಲೆಷರ್, ಮೊಮಿನುಲ್ ಹಕ್, ರೆಹಮಾನ್ ರಾಜಾ, ತಸ್ಕಿನ್ ಅಹ್ಮದ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 am, Tue, 20 December 22