AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾಗೆ 4 ಆಟಗಾರರ ಎಂಟ್ರಿ?

India vs Afghanistan: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ವಿರುದ್ಧ ಸರಣಿ ಆಡಲಿದೆ. ಈ ಸರಣಿಯಲ್ಲಿ ಒಟ್ಟು 4 ಪಂದ್ಯಗಳನ್ನಾಡಲಿದೆ. ಮೊದಲಿಗೆ ಏಕೈಕ ಟೆಸ್ಟ್ ಪಂದ್ಯವಾಡಲಿದ್ದು, ಇದಾದ ಬಳಿಕ ಮೂರು ಮ್ಯಾಚ್​ಗಳ ಏಕದಿನ ಸರಣಿ ಆಡಲಿದೆ.

ಟೀಮ್ ಇಂಡಿಯಾಗೆ 4 ಆಟಗಾರರ ಎಂಟ್ರಿ?
Team India
ಝಾಹಿರ್ ಯೂಸುಫ್
|

Updated on: Apr 21, 2026 | 4:30 PM

Share

ಐಪಿಎಲ್ 2026ರ ಬೆನ್ನಲ್ಲೇ ನಡೆಯಲಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಹೊಸ ಮುಖಗಳಿಗೆ ಅವಕಾಶ ನೀಡಲು ಬಿಸಿಸಿಐ (BCCI) ಚಿಂತಿಸುತ್ತಿದೆ. ಅದರಂತೆ ಅಫ್ಘಾನ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ನಾಲ್ವರು ಹೊಸ ಮುಖಗಳು ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆ ಐವರು ಆಟಗಾರರ ಹೆಸರು ಈ ಕೆಳಗಿನಂತಿದೆ…

  • ಹರ್ಷ್ ದುಬೆ (ವಿದರ್ಭ)
  • ಮಾನವ್ ಸುತಾರ್ (ರಾಜಸ್ಥಾನ್)
  • ಆಖಿಬ್ ನಬಿ (ಜಮ್ಮು-ಕಾಶ್ಮೀರ)
  • ಗುರ್ನೂರ್ ಬ್ರಾರ್ (ಪಂಜಾಬ್)

ಪಡಿಕ್ಕಲ್ ಕಂಬ್ಯಾಕ್:

ಕರ್ನಾಟಕದ ಪ್ರತಿಭಾನ್ವಿತ ಬ್ಯಾಟರ್ ದೇವದತ್ ಪಡಿಕ್ಕಲ್ ಟೆಸ್ಟ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ. 2024ರ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಪಡಿಕ್ಕಲ್,  ತಮ್ಮ ಚೊಚ್ಚಲ ಪಂದ್ಯದಲ್ಲೇ ಆಕರ್ಷಕ 65 ರನ್ ಗಳಿಸಿದ್ದರು. ಅಲ್ಲದೆ ಈವರೆಗೆ 2 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 3 ಇನಿಂಗ್ಸ್‌ಗಳಿಂದ ಅವರು ಒಟ್ಟು 90 ರನ್ ಗಳಿಸಿದ್ದಾರೆ. ಇದೀಗ ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಸ್ಟಾರ್ ಆಟಗಾರರಿಗೆ ವಿಶ್ರಾಂತಿ:

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರ ಪ್ಲೇಆಫ್​ನಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಭಾರತ ಟೆಸ್ಟ್ ತಂಡದ ನಾಯಕ ಶುಭ್​​ಮನ್ ಗಿಲ್, ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಸೇರಿದಂತೆ ಟೆಸ್ಟ್ ತಂಡದ ಸ್ಟಾರ್ ಆಟಗಾರರು ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ರಾಂತಿ ನೀಡಲು ಕಾರಣವೇನು?

ಐಪಿಎಲ್ ಫೈನಲ್ ಮುಗಿದ ಕೇವಲ 6 ದಿನಗಳಲ್ಲಿ ಈ ಟೆಸ್ಟ್ ಆರಂಭವಾಗುತ್ತಿರುವುದರಿಂದ ಆಟಗಾರರ ಕೆಲಸದ ಹೊರೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಈ ಪಂದ್ಯದ ಫಲಿತಾಂಶವು WTC ಪಾಯಿಂಟ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.

ಅಫ್ಘಾನಿಸ್ತಾನ್ ಸರಣಿ ಯಾವಾಗ?

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಸರಣಿಯು ಜೂನ್ 6 ರಿಂದ ಶುರುವಾಗಲಿದೆ. ನ್ಯೂ ಚಂಡೀಗಢ್​ನ ಮಹಾರಾಜ ಯಾದವಿಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಬಳಿಕ ಉಭಯ ತಂಡಗಳ ನಡುವೆ 3 ಮ್ಯಾಚ್​ಗಳ ಏಕದಿನ ಸರಣಿ ನಡೆಯಲಿದೆ.

ಇದನ್ನೂ ಓದಿ: ತಿಲಕ್ ವರ್ಮಾ ಮೇಲೆ ಪಾಂಡ್ಯ ಗರಂ? ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ!

ಭಾರತ vs ಅಫ್ಘಾನಿಸ್ತಾನ್ ಸರಣಿ ವೇಳಾಪಟ್ಟಿ:

  • ಜೂನ್ 6 – 10: ಏಕೈಕ ಟೆಸ್ಟ್ (ಮುಲ್ಲನ್‌ಪುರ)
  • ಜೂನ್ 14: ಮೊದಲ ಏಕದಿನ ಪಂದ್ಯ (ಧರ್ಮಶಾಲಾ)
  • ಜೂನ್ 17: ಎರಡನೇ ಏಕದಿನ ಪಂದ್ಯ (ಲಕ್ನೋ)
  • ಜೂನ್ 20: ಮೂರನೇ ಏಕದಿನ ಪಂದ್ಯ (ಚೆನ್ನೈ)

Follow Us
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ