ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್: ಮೊದಲ ದಿನದಾಟ ರದ್ದಾದರೆ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದ ಐಸಿಸಿ

ಡಬ್ಲ್ಯೂಟಿಸಿ ಪೈನಲ್ ಪಂದ್ಯಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಫಾಲೋ-ಅನ್ ನಿಯಮ ಕುರಿತು ಸ್ಪಷ್ಟನೆ ನೀಡಿದೆ. ಸದರಿ ಪಂದ್ಯಯ ಮೊದಲ ದಿನದಾಟ ಮಳೆಗಾಹುತಿಯಾದರೆ, ಒಂದು ರಿಸರ್ವ್​ ದಿನವನ್ನು ನಿಗದಿಪಡಿಸಿರುವುದರಿಂದ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದು ಐಸಿಸಿ ಹೇಳಿದೆ

  • Publish Date - 12:41 am, Sun, 13 June 21
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್: ಮೊದಲ ದಿನದಾಟ ರದ್ದಾದರೆ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದ ಐಸಿಸಿ
ರಿವ್ಯೂ ತೆಗೆದುಕೊಳ್ಳುತ್ತಿರುವ ವಿರಾಟ್​ ಕೊಹ್ಲಿ

ಭಾರತ ಮತ್ತು ನ್ಯೂಜಿಲೆಂಡ್​ ನಡೆಯವ ಮೊಟ್ಟ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ (ಡಬ್ಲ್ಯೂಟಿಸಿ) ಫೈನಲ್ ಪಂದ್ಯಕ್ಕೆ ಒಂದು ವಾರಕ್ಕಿಂತ ಕಡಿಮೆ ಅವಧಿ ಉಳಿದಿದೆ. ನ್ಯೂಜಿಲೆಂಡ್​ ತನ್ನ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿಯಲ್ಲೂ ಬರ್ಮಿಂಗ್​ಹ್ಯಾಮ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಎರಡನೇ ಮತ್ತು ಕೊನೆಯ ಟೆಸ್ಸ್​ನಲ್ಲಿ ಅತಿಥೇಯರನ್ನು ಸೋಲಿಸುವ ಅತ್ಯಂತ ಸನಿಹಕ್ಕೆ ಬಂದಿದೆ. ಎರಡನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ಗಳನ್ನು ಕಳೆದುಕೊಂಡಿರುವ ಇಂಗ್ಲಿಷರು ಕೇವಲ 37 ರನ್​ಗಳಿಂದ ಮುಂದಿದ್ದಾರೆ. ಪಂದ್ಯದ ನಾಲ್ಕನೇ ದಿನವಾಗಿರುವ ರವಿವಾರ ಮೊದಲ ಗಂಟೆಯಲ್ಲೇ ಪ್ರವಾಸಿ ತಂಡ ದೊಡ್ಡ ಗೆಲುವು ಸಾಧಿಸಿದರೆ ಆಶ್ಚರ್ಯಪಡಬೇಕಿಲ್ಲ.

ಓಕೆ, ಡಬ್ಲ್ಯೂಟಿಸಿ ಪೈನಲ್ ಪಂದ್ಯಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಫಾಲೋ-ಅನ್ ನಿಯಮ ಕುರಿತು ಸ್ಪಷ್ಟನೆ ನೀಡಿದೆ. ಸದರಿ ಪಂದ್ಯಯ ಮೊದಲ ದಿನದಾಟ ಮಳೆಗಾಹುತಿಯಾದರೆ, ಒಂದು ರಿಸರ್ವ್​ ದಿನವನ್ನು ನಿಗದಿಪಡಿಸಿರುವುದರಿಂದ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದು ಐಸಿಸಿ ಹೇಳಿದೆ. ಬೇರೆ ಯಾವುದೇ ಪಂದ್ಯದ ಮೊದಲ ದಿನ ಮಳೆಯ ಕಾರಣ ನಡೆಯದೇ ಹೋದರೆ ನಿಯಮ ಬದಲಾಗುತಿತ್ತು. ಡಬ್ಲ್ಯೂಟಿಸಿ ಫೈನಲ್ ಪಂದ್ಯ ಸೌತಾಂಪ್ಟನ್​ನ ಏಜಿಸ್ ಬೋಲ್​ನಲ್ಲಿ 18ರಿಂದ 23 ರವರೆಗೆ (ರಿಸರ್ವ್ ದಿನ ಸೇರಿ) ನಡೆಯಲಿದೆ.

ಫಾಲೋ-ಆನ್​ಗೆ ಸಂಬಂಧಿಸಿದ ಸಾಮಾನ್ಯ ನಿಯಮ ಕ್ಲಾಸ್ 14 ಹೀಗೆ ಹೇಳುತ್ತದೆ: ಐದು ದಿನಗಳ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ತಂಡ ಕನಿಷ್ಟ 200 ರನ್​ಗಳ ಲೀಡ್​ ಹೊಂದಿದ್ದರೆ ನಿಯಮ 14.1.1 ಅನ್ವಯ ಎದುರಾಳಿ ತಂಡದ ಮೇಲೆ ಫಾಲೋ-ಆನ್ ಹೇರಬಹುದಾಗಿದೆ. ಐದಕ್ಕಿಂತ ಕಡಿಮೆ ದಿನಗಳ ಪಂದ್ಯದಲ್ಲಿ 14.1.2 ನಿಯಮ ಸೂಚಿಸುವ ಹಾಗೆ; 3 ಅಥವಾ 4 ದಿನಗಳ ಪಂದ್ಯದಲ್ಲಿ 150ಕ್ಕಿಂತ ಹೆಚ್ಚು ರನ್​ಗಳ ಲೀಡ್​, 2ದಿನಗಳ ಪಂದ್ಯದಲ್ಲಿ 100 ರನ್ ಮತ್ತು ಒಂದು ದಿನದ ಪಂದ್ಯದಲ್ಲಿ ಕನಿಷ್ಟ 75ರನ್​ಗಳ ಲೀಡ್​ ಹೊಂದಿರಬೇಕಾಗುತ್ತದೆ.

ಕ್ಲಾಸ್ 14.3 ವ್ಯಾಖ್ಯಾನ ಹೀಗಿದೆ: 5ದಿನಗಳ ಪಂದ್ಯದ ಮೊದಲೆರಡು ದಿನಗಳಲ್ಲಿ ಆಟ ನಡೆಯದೇ ಹೋದರೆ, ಆಟ ಅರಂಭವಾಗುವ ಸಮಯದಿಂದ ಹಿಡಿದು ರಿಸರ್ವ್ ದಿನ ಸೇರಿದಂತೆ ಉಳಿದ ದಿನಗಳ ಆಟಕ್ಕೆ ಕ್ಲಾಸ್ 14.1 ಅನ್ವಯಿಸುತ್ತದೆ. ಈ ಕಾರಣಕ್ಕಾಗಿ ಪಂದ್ಯ ಆರಂಭವಾಗುವ ದಿನವನ್ನು, ಆಟ ಯಾವುದೇ ಸಮಯಕ್ಕೆ ಆರಂಭವಾದರೂ ಅದನ್ನು ಮೊದಲ ದಿನವೆಂದು ಪರಿಗಣಿಸಲಾಗುವುದು.

ಆದರೆ, ಡಬ್ಲ್ಯೂಟಿಸಿ ಫೈನಲ್​ನಲ್ಲಿ ಸೆಣಸಲಿರುವ ಎರಡು ತಂಡಗಳಿಗೆ ಇತ್ತೀಚಿಗೆ ನೀಡಿರುವ ಸೂಚನೆಯಲ್ಲಿ ಐಸಿಸಿ ಹೇಳಿರುವುದೇನೆಂದರೆ, ಪಂದ್ಯದ ನಿಗದಿತ ಮೊದಲ ಮತ್ತು ಎರಡನೇ ದಿನದಾಟ ನಡೆಯದೇ ಹೋದರೆ ಮೊದಲ ಇನ್ನಿಂಗ್ಸ ಲೀಡ್​ ನಿಯಮ 200 ರನ್​ಗಳಿಂದ 150 ರನ್​ಗಳಿಗೆ ತಗ್ಗುವುದರಿಂದ 14.3ನಿಯಮವನ್ನು ತಿದ್ದುಪಡಿ ಮಾಡಲಾಗಿದೆ. ಸಾಮಾನ್ಯವಾಗಿ, ಕೇವಲ ಮೊದಲ ದಿನದ ಆಟ ನಡೆಯದೆ ಹೋದಾಗ ಮಾತ್ರ ಹೀಗೆ ಮಾಡಲಾಗುತ್ತದೆ. ಆದರೆ ಡಬ್ಲ್ಯೂಟಿಸಿ ಫೈನಲ್​ಗೆ ಒಂದು ರಿಸರ್ವ್​ ದಿನವನ್ನು ನಿಗದಿಪಡಿಸಿರುವುದರಿಂದ ಮೊದಲ ದಿನದಾಟ ರದ್ದಾದರೂ ಅದು 5 ದಿನಗಳ ಪಂದ್ಯವಾಗಿರಲಿದೆ.

ಮೇ 27ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಐಸಿಸಿ ಪ್ಲೇಯರ್ ರಿವ್ಯೂ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಿದೆ. ‘ಪ್ಲೇಯರ್ ರಿವ್ಯೂಗೆ ಇದು ಹೊಸ ಸ್ಟ್ಯಾಂಡರ್ಡ್​ ಕಂಡೀಷನ್ ಆಗಿದೆ. ಈ ಹಿಂದೆ, ಆಟಗಾರನೊಬ್ಬ ರಿವ್ಯೂ ತೆಗೆದುಕೊಳ್ಳುವ ಮೊದಲು ಅಂಪೈರ್​ಗೆ ಯಾವುದೇ ಪ್ರಶ್ನೆ ಕೇಳುವಂತಿರಲಿಲ್ಲ. ಒಬ್ಬ ಬ್ಯಾಟ್ಸ್​ಮನ್ ಶಾಟ್​ ಆಡಿರುವನೋ ಇಲ್ಲವೋ ಎನ್ನುವ ಬಗ್ಗೆ ಅವನಲ್ಲಿ ಮತ್ತು ಅಂಪೈರ್​ನಲ್ಲಿ ಬೇರೆ ಬೇರೆ ಅಭಿಪ್ರಾಯ ಇರುತ್ತಿದ್ದರಿಂದ ವಿನಾಕಾರಣ ರಿವ್ಯೂ ವ್ಯರ್ಥವಾಗುತಿತ್ತು.

ಈಗ ಇದನ್ನು ಬದಲಿಸಲಾಗಿದೆ. ರಿವ್ಯೂ ಕೇಳುವ ಮುನ್ನ ಫೀಲ್ಡಿಂಗ್ ತಂಡದ ನಾಯಕ ಅಥವಾ ಔಟಾಗಿರುವ ಬ್ಯಾಟ್ಸ್​ಮನ್; ಬಾಲನ್ನು ಆಡಲು ನೈಜ್ಯ ಪ್ರಯತ್ನ ಮಾಡಲಾಯಿತೇ ಎಂದು ಅಂಪೈರ್​ನನ್ನು ಪ್ರಶ್ನಿಸಿಬಹುದಾಗಿದೆ, ಎಂದು ಐಸಿಸಿ ಹೇಳಿತ್ತು.

ಇದನ್ನೂ ಓದಿ: WTC Final: ಆರಂಭದಲ್ಲಿ ತಾಳ್ಮೆಯಿರಲಿ; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌​ಗೂ ಮುನ್ನ ರೋಹಿತ್​ಗೆ ವೀರೂ ಪಾಠ