IPL 2025: ದ್ವಿತೀಯ ಪಂದ್ಯಕ್ಕಾಗಿ RCB ಬರೋಬ್ಬರಿ 1383 ಕಿ.ಮೀ ಪಯಣ
IPL 2025 ರ ಮೊದಲ ಪಂದ್ಯದಲ್ಲಿ ಕೆಕೆಆರ್ ನೀಡಿದ 175 ರನ್ಗಳ ಗುರಿಯನ್ನು ಆರ್ಸಿಬಿ 16.2 ಓವರ್ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಅದು ಸಹ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಕಣಕ್ಕಿಳಿಯಲು.

IPL 2025: ಐಪಿಎಲ್ ಸೀಸನ್-18ರ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗಬೇಕಿದೆ. ಅದು ಕೂಡ ತನ್ನ ಸಾಂಪ್ರದಾಯಿಕ ಎದುರಾಳಿ ಚನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲು..!
ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 1383 ಕಿ.ಮೀ ಪ್ರಯಾಣ ಮಾಡಲಿದೆ. ಆರ್ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಿತ್ತು.
ಇದೀಗ ದ್ವಿತೀಯ ಪಂದ್ಯಕ್ಕಾಗಿ ಆರ್ಸಿಬಿ ಪಡೆ ಚೆನ್ನೈನತ್ತ ಮುಖ ಮಾಡಬೇಕಿದೆ. ಇತ್ತ ಕೊಲ್ಕತ್ತಾ-ಚೆನ್ನೈನ ನಡುವಣ ವಿಮಾನಯಾನದ ದೂರ ಬರೋಬ್ಬರಿ 1383 ಕಿ.ಮೀ.
ಈ ಪಯಣದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈನಲ್ಲಿ ಬಂದಿಳಿಯಲಿದೆ. ಈ ದೀರ್ಘಾವಧಿಯ ಪ್ರಯಾಣ ಬಳಿಕ ಆರ್ಸಿಬಿ ಒಂದು ದಿನ ವಿಶ್ರಾಂತಿ ಪಡೆಯುವ ಸಾಧ್ಯತೆಯಿದ್ದು, ಆ ನಂತರ ಅಭ್ಯಾಸವನ್ನು ಶುರು ಮಾಡಲಿದೆ.
ಏಕೆಂದರೆ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಮಾರ್ಚ್ 28 ರಂದು ಆಡಲಿದೆ. ಇತ್ತ ಸಿಎಸ್ಕೆ ತಂಡವು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ಸೋಲುಣಿಸಿದ್ದು, ಅತ್ತ ಆರ್ಸಿಬಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಬಗ್ಗು ಬಡಿದಿದೆ.
ಹೀಗಾಗಿ ಮಾರ್ಚ್ 28 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್ವುಡ್, ರಾಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.
ಇದನ್ನೂ ಓದಿ: VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ವಿಕೆಟ್ ಕೀಪರ್), ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್, ಮಥೀಶ ಪತಿರಾಣ, ಕಮಲೇಶ್ ನಾಗರಕೋಟಿ, ನಾಥನ್ ಎಲ್ಲಿಸ್, ಮುಖೇಶ್ ಚೌಧರಿ, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶೇಕ್ ರಶೀದ್, ಅಂಶುಲ್ ಕಾಂಬೋಜ್, ಶ್ರೇಯಸ್ ಗೋಪಾಲ್, ನೂರ್ ಅಹ್ಮದ್, ಗುರ್ಜಪ್ನೀತ್ ಸಿಂಗ್, ರಾಮಕೃಷ್ಣ ಘೋಷ್, ಆಂಡ್ರೆ ಸಿದ್ದಾರ್ಥ್ ಸಿ, ವಂಶ್ ಬೇಡಿ, ಜೇಮಿ ಓವರ್ಟನ್.
Published On - 11:31 am, Mon, 24 March 25