AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಐಪಿಎಲ್​ನಲ್ಲಿ ‘ಬಾಡಿ ಕಂಟ್ರೋಲ್’ ನಿಯಮ ಜಾರಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಗೆ ಇಂದು (ಮಾ.28) ಚಾಲನೆ ಸಿಗಲಿದೆ. 10 ತಂಡಗಳ ನಡುವಣ ಈ ಟೂರ್ನಿಯ ಮೊದಲ ಮ್ಯಾಚ್​ನಲ್ಲಿ ಮುಖಾಮುಖಿಯಾಗುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್. ಇನ್ನು ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

IPL 2026: ಐಪಿಎಲ್​ನಲ್ಲಿ 'ಬಾಡಿ ಕಂಟ್ರೋಲ್' ನಿಯಮ ಜಾರಿ
Virat Kohli
ಝಾಹಿರ್ ಯೂಸುಫ್
|

Updated on: Mar 28, 2026 | 9:52 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಪಂದ್ಯದ ಮೂಲಕ ‘ಬಾಡಿ ಕಂಟ್ರೋಲ್’ ನಿಯಮವನ್ನು ಪರಿಚಯಿಸಲಾಗುತ್ತಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB ಮತ್ತು SRH ನಡುವಣ ಪಂದ್ಯದ ಮೂಲಕ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಈ ನಿಯಮವು ಫೀಲ್ಡರ್​ಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಏನಿದು ಬಾಡಿ ಕಂಟ್ರೋಲ್ ನಿಯಮ?

ಬಾಡಿ ಕಂಟ್ರೋಲ್ ಎಂಬುದು ದೇಹದ ಮೇಲಿನ ನಿಯಂತ್ರಣ. ಅಂದರೆ ಇಲ್ಲಿ ಈ ನಿಯಮವನ್ನು ಫೀಲ್ಡರ್​ಗಳಿಗಾಗಿ ಪರಿಚಯಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕ್ಯಾಚ್ ಹಿಡಿದಾಗ ಈ ನಿಯಮ ಅನ್ವಯವಾಗಲಿದೆ.

ಕ್ಯಾಚ್ ಹಿಡಿಯುವಾಗ ಫೀಲ್ಡರ್ ಚೆಂಡಿನ ಮೇಲೆ ಮತ್ತು ತಮ್ಮ ದೇಹದ ಸಮತೋಲನದ ಮೇಲೆ ಎಷ್ಟು ನಿಯಂತ್ರಣ ಹೊಂದಿರಬೇಕು ಎಂಬುದರ ಕುರಿತು ಈಗಾಗಲೇ 10 ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಅದರಂತೆ ಈ ಬಾರಿಯ ಐಪಿಎಲ್​ನ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ.

ಐಪಿಎಲ್ ಕ್ಯಾಚ್ ನಿಯಮಗಳು:

  • ಸಂಪೂರ್ಣ ನಿಯಂತ್ರಣ: ಐಪಿಎಲ್ ನಿಯಮ 33.3ರ ಪ್ರಕಾರ, ಫೀಲ್ಡರ್ ಚೆಂಡನ್ನು ಹಿಡಿದ ನಂತರ ತನ್ನ ದೇಹದ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವವರೆಗೆ ಕ್ಯಾಚ್ ಪೂರ್ಣಗೊಳ್ಳುವುದಿಲ್ಲ.
  • ಸಂಭ್ರಮಾಚರಣೆ ಮತ್ತು ಸ್ಥಿರತೆ: ಫೀಲ್ಡರ್ ಕ್ಯಾಚ್ ಹಿಡಿದ ತಕ್ಷಣ ಸಂಭ್ರಮಿಸಲು ಶುರುಮಾಡಿ ಆ ಸಂದರ್ಭದಲ್ಲಿ ಚೆಂಡು ಕೈಜಾರಿದರೆ ಅಥವಾ ಅವರು ಸಮತೋಲನ ತಪ್ಪಿ ಬೌಂಡರಿ ಲೈನ್ ಮುಟ್ಟಿದರೆ ಅದನ್ನು ‘ನಾಟ್ ಔಟ್’ ಎಂದು ಪರಿಗಣಿಸಲಾಗುತ್ತದೆ.
  • ದೇಹದ ನಿಯಂತ್ರಣ: ಕ್ಯಾಚ್ ಹಿಡಿದ ಬಳಿಕ ದೇಹದ ಚಲನೆಯು ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಸಂಭ್ರಮಿಸಬೇಕು. ಕ್ಯಾಚ್ ಹಿಡಿದ ತಕ್ಷಣವೇ ಚೆಂಡನ್ನು ಎಸೆಯುವಂತಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಸಂಭ್ರಮದ ವೇಳೆ ಚೆಂಡು ಕೈ ಜಾರಿದರೆ ಅದನ್ನು ಕ್ಯಾಚ್ ಎಂದು ಪರಿಗಣಿಸಲಾಗುವುದಿಲ್ಲ. ಇದನ್ನೇ ಕ್ರಿಕೆಟ್​ನಲ್ಲಿ ಫೀಲ್ಡರ್​ಗಳ ಬಾಡಿ ಕಂಟ್ರೋಲ್ ಎಂದು ಕರೆಯಲಾಗುತ್ತದೆ.
  • ಬೌಂಡರಿ ಲೈನ್ ನಿಯಮ: ಫೀಲ್ಡರ್ ಬೌಂಡರಿ ಲೈನ್ ಒಳಗಿನಿಂದಲೇ ಜಿಗಿದು ಚೆಂಡನ್ನು ಹಿಡಿಯಬೇಕು. ಗಾಳಿಯಲ್ಲಿರುವಾಗ ಚೆಂಡನ್ನು ಒಳಕ್ಕೆ ತಳ್ಳಿ ನಂತರ ಮೈದಾನದ ಒಳಗೆ ಬಂದು ಕ್ಯಾಚ್ ಪೂರ್ಣಗೊಳಿಸಬೇಕು.
  • ರಿಲೇ ಕ್ಯಾಚ್: ಒಬ್ಬ ಫೀಲ್ಡರ್ ಬೌಂಡರಿ ಹೊರಗಿನಿಂದ ಪದೇ ಪದೇ ಜಿಗಿಯುತ್ತಾ (Bunny Hop) ಚೆಂಡನ್ನು ಒಳಕ್ಕೆ ತಳ್ಳುವುದು ಈಗ ಅಮಾನ್ಯ ಎಂದು ಪರಿಗಣಿಸಲಾಗುತ್ತದೆ.
  • ಒಂದೇ ಅವಕಾಶ: ಫೀಲ್ಡರ್ ಬೌಂಡರಿ ಲೈನ್ ಒಳಗಿಂದ ಜಿಗಿದು ಒಮ್ಮೆ ಚೆಂಡನ್ನು ಒಳಗೆ ತಳ್ಳಲು ಪ್ರಯತ್ನಿಸಿ, ಬೌಂಡರಿ ದಾಟಿದ ಬಳಿಕ ಹೊರಗಿನಿಂದ ಜಿಗಿದು ಮತ್ತೆ ಹೊರ ತಳ್ಳಲು ಅವಕಾಶವಿಲ್ಲ. ಅಂದರೆ ಬೌಂಡರಿ ಲೈನ್​ ಒಳಗೆ ನಿಂತು ಗಾಳಿಯಲ್ಲಿ ಹಾರಿ ಚೆಂಡನ್ನು ಮತ್ತೊಮ್ಮೆ ಹೊರಹಾಕಿದರೆ ಅದನ್ನು ಸಿಕ್ಸ್ ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: IPL 2026: RCB ಪರ ಇಬ್ಬರು ಪಾದಾರ್ಪಣೆ ಸಾಧ್ಯತೆ

ಈ ನಿಯಮಗಳು ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ಮೂಲಕವೇ ಜಾರಿಗೆ ಬರಲಿದೆ ಎಂದು ಐಪಿಎಲ್ ಗರ್ವನರ್ ಕೌನ್ಸಿಲ್ ತಿಳಿಸಿದೆ.

Follow Us
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್‌ಗೆ ಗಂಭೀರ ಗಾಯ
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್‌ಗೆ ಗಂಭೀರ ಗಾಯ
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ