AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs DC: ನಿಸ್ಸಂಕಾ, ರಾಹುಲ್ ಅರ್ಧಶತಕ; ರಾಜಸ್ಥಾನ್ ವಿರುದ್ಧ ಗೆದ್ದ ಡೆಲ್ಲಿ

DC vs RR Match 43: ಐಪಿಎಲ್ 2026 ರ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಗೆಲುವು ಸಾಧಿಸಿದೆ. ರಾಜಸ್ಥಾನ್ ನೀಡಿದ 225 ರನ್‌ಗಳ ಬೃಹತ್ ಗುರಿಯನ್ನು ಡೆಲ್ಲಿ 3 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ, ರಾಜಸ್ಥಾನ್ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದು ಡೆಲ್ಲಿಗೆ 4ನೇ ಗೆಲುವು.

RR vs DC: ನಿಸ್ಸಂಕಾ, ರಾಹುಲ್ ಅರ್ಧಶತಕ; ರಾಜಸ್ಥಾನ್ ವಿರುದ್ಧ ಗೆದ್ದ ಡೆಲ್ಲಿ
Delhi Capitals
ಪೃಥ್ವಿಶಂಕರ
|

Updated on:May 01, 2026 | 11:39 PM

Share

ಐಪಿಎಲ್ 2026 (IPL 2026) ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RR vs DC) ಪರಸ್ಪರ ಮುಖಾಮುಖಿಯಾಗಿದ್ದವು. ಇದು ರಾಜಸ್ಥಾನಕ್ಕೆ ಹತ್ತನೇ ಪಂದ್ಯ ಮತ್ತು ದೆಹಲಿಗೆ ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯಲ್ಲಿ 4ನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಇತ್ತ 4ನೇ ಸೋಲಿಗೆ ಕೊರಳೊಡ್ಡಿದ ರಾಜಸ್ಥಾನ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್‌ ಮಾಡಿ ದಾಖಲೆಯ 225 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20ನೇ ಓವರ್​ನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಕೈಕೊಟ್ಟ ಜೈಸ್ವಾಲ್, ವೈಭವ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ರಾಯಲ್ಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಯಶಸ್ವಿ ಜೈಸ್ವಾಲ್, ಅದೇ ಓವರ್​ನ ಮೂರನೇ ಎಸೆತದಲ್ಲಿ ಔಟಾದರು. ವೈಭವ್ ಸೂರ್ಯವಂಶಿ (4) ಕೂಡ ಎರಡನೇ ಓವರ್‌ನಲ್ಲಿ ಔಟಾದರು. ನಂತರ ನಾಯಕ ರಿಯಾನ್ ಪರಾಗ್, ಧ್ರುವ್ ಜುರೆಲ್ (42) ಅವರೊಂದಿಗೆ 102 ರನ್‌ಗಳ ಜೊತೆಯಾಟ ಕಟ್ಟುವುದರ ಜೊತೆಗೆ ಈ ಆವೃತ್ತಿಯ ಮೊದಲ ಅರ್ಧಶತಕವನ್ನು ಬಾರಿಸಿದರು.

90 ರನ್ ಬಾರಿಸಿದ ಪರಾಗ್

ಆದಾಗ್ಯೂ ಶತಕದಂಚಿನಲ್ಲಿ ಎಡವಿದ ರಿಯಾನ್ ಪರಾಗ್ 90 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಡೊನೊವನ್ ಫೆರೇರಾ ಕೇವಲ 14 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿ ತಂಡವನ್ನು 225 ರನ್‌ಗಳಿಗೆ ಕೊಂಡೊಯ್ದರು. ದೆಹಲಿ ಪರ ಬೌಲಿಂಗ್‌ನಲ್ಲಿ ಮಿಂಚಿದ ಸ್ಟಾರ್ಕ್​ 40 ರನ್‌ಗಳಿಗೆ ಮೂರು ವಿಕೆಟ್‌ ಕಬಳಿಸಿದರು.

ಡೆಲ್ಲಿಗೆ ಭರ್ಜರಿ ಆರಂಭ

ಈ ಗುರಿ ಬೆನ್ನಟ್ಟಿದ ದೆಹಲಿಗೆ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಅದ್ಭುತ ಆರಂಭಿಕ ಜೊತೆಯಾಟ ಸಿಕ್ಕಿತು. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಪಾತುಮ್ ನಿಸ್ಸಂಕಾ (62) ಈ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಫಾರ್ಮ್‌ನಲ್ಲಿರುವ ರಾಹುಲ್ ಜೊತೆಗೆ ನಿಸ್ಸಂಕಾ 9.3 ಓವರ್‌ಗಳಲ್ಲಿ 110 ರನ್‌ಗಳನ್ನು ಸೇರಿಸಿದರು. ರಾಹುಲ್ (75) ಕೂಡ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ನಿತೀಶ್ ರಾಣಾ (33) ಅವರೊಂದಿಗೆ ತಂಡವನ್ನು 171 ರನ್‌ಗಳ ಗಡಿ ದಾಟಿಸಿದರು.

RR vs DC IPL 2026 Highlights: ಪರಾಗ್ ಹೋರಾಟ ವ್ಯರ್ಥ; ಡೆಲ್ಲಿಗೆ ಸುಲಭ ಜಯ

ಅತಿದೊಡ್ಡ ರನ್ ಬೆನ್ನಟ್ಟಿದ ದಾಖಲೆ

ತಂಡದ ಮೊತ್ತ 177 ರನ್​ಗಳಿದ್ದಾಗ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾದರು. ಆದಾಗ್ಯೂ, ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 18) ಮತ್ತು ಅಶುತೋಷ್ ಶರ್ಮಾ (ಅಜೇಯ 25) ಆ ನಂತರ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ದೊಡ್ಡ ಗೆಲುವಿನತ್ತ ಮುನ್ನಡೆಸಿದರು. ಡೆಲ್ಲಿ 19.1 ಓವರ್‌ಗಳಲ್ಲಿ ಗುರಿಯನ್ನು ತಲುಪಿ, ಐಪಿಎಲ್ ಇತಿಹಾಸದಲ್ಲಿ ಅತಿದೊಡ್ಡ ರನ್ ಬೆನ್ನಟ್ಟಿದ ದಾಖಲೆಯನ್ನು ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 pm, Fri, 1 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More