AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs LSG: ಅಪರೂಪಕ್ಕೆ ಸಿಕ್ಕಿತ್ತು ವಿಕೆಟ್; ಬುಮ್ರಾ ಮಾಡಿದ್ರ ಎಡವಟ್ಟು..! ವಿಡಿಯೋ ನೋಡಿ

Jasprit Bumrah's Struggles: 2026ರ ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಕಳಪೆ ಪ್ರದರ್ಶನ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಹೊಡೆತ ನೀಡಿದೆ. 10 ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಪಡೆದಿರುವ ಬುಮ್ರಾ, ಅತಿ ಹೆಚ್ಚು ನೋ-ಬಾಲ್‌ಗಳನ್ನು ಎಸೆದಿದ್ದಾರೆ. ಇತ್ತೀಚಿನ ಲಕ್ನೋ ಪಂದ್ಯದಲ್ಲಿ ಅವರ ನೋ-ಬಾಲ್‌ನಿಂದ ಹಿಮ್ಮತ್ ಸಿಂಗ್‌ಗೆ ಜೀವದಾನ ಸಿಕ್ಕಿ, ಅದು ಮುಂಬೈಗೆ 38 ರನ್‌ಗಳ ದಂಡವಾಗಿ ಪರಿಣಮಿಸಿತು. ಬುಮ್ರಾ ಲಯ ತಪ್ಪಿರುವುದು ಮುಂಬೈ ತಂಡದ ನಿರ್ಣಾಯಕ ಸೋಲಿಗೆ ಕಾರಣವಾಗಿದೆ.

MI vs LSG: ಅಪರೂಪಕ್ಕೆ ಸಿಕ್ಕಿತ್ತು ವಿಕೆಟ್; ಬುಮ್ರಾ ಮಾಡಿದ್ರ ಎಡವಟ್ಟು..! ವಿಡಿಯೋ ನೋಡಿ
Jasprit Bumrah
ಪೃಥ್ವಿಶಂಕರ
|

Updated on:May 04, 2026 | 10:09 PM

Share

2026 ರ ಐಪಿಎಲ್‌ನಲ್ಲಿ (IPL 2026) ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್‌ ವಿಭಾಗದ ಪಾತ್ರ ಎಷ್ಟಿದೆಯೋ, ಬೌಲಿಂಗ್ ವಿಭಾಗದ್ದು ಅಷ್ಟೇ ಕೊಡುಗೆ ಇದೆ. ಅದರಲ್ಲೂ ಮುಂಬೈ ತಂಡದ ಬೌಲಿಂಗ್ ವಿಭಾಗದ ಜೀವಾಳ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಈ ಆವೃತ್ತಿಯಲ್ಲಿ ವಿಕೆಟ್ ಬರ ಎದುರಿಸುತ್ತಿದ್ದಾರೆ. ಇದು ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎನ್ನಬಹುದು. ಇದುವರೆಗೆ ಬುಮ್ರಾ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದಾರೆ. ಈ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.

ನೋ ಬಾಲ್ ಎಸೆದ ಬುಮ್ರಾ

ಇಂದು ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ ಎರಡು ಓವರ್​ಗಳನ್ನು ಬೌಲ್ ಮಾಡಿದ ಬುಮ್ರಾ ದುಬಾರಿಯಾಗಿದ್ದರು. ಇದರ ಜೊತೆಗೆ ವಿಕೆಟ್ ಕೂಡ ಪಡೆದಿರಲಿಲ್ಲ. ಆ ನಂತರ ಡೆತ್ ಓವರ್​ನಲ್ಲಿ ಬೌಲಿಂಗ್​ಗೆ ಬಂದ ಬುಮ್ರಾಗೆ ವಿಕೆಟ್ ಪಡೆಯುವ ಅವಕಾಶ ಸಿಕ್ಕಿತು. ಲಕ್ನೋ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಹಿಮ್ಮತ್ ಸಿಂಗ್, ಬುಮ್ರಾ ಬೌಲ್ ಮಾಡಿದ 14ನೇ ಓವರ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಆದರೆ ದುರಾದೃಷ್ಟವೆಂಬಂತೆ ಬುಮ್ರಾ ಆ ಎಸೆತವನ್ನು ನೋ ಬಾಲ್ ಮಾಡಿದ್ದರು. ಹೀಗಾಗಿ ಹಿಮ್ಮತ್​ಗೆ ಜೀವದಾನ ಸಿಕ್ಕಿತು.

 2 ರನ್​ಗೆ ಸಿಕ್ಕಿತು ಜೀವದಾನ

ಹಿಮ್ಮತ್​ಗೆ ಜೀವದಾನ ಸಿಕ್ಕಾಗ ಅವರು ಕೇವಲ 2 ರನ್ ಮಾತ್ರ ಗಳಿಸಿದ್ದರು. ನೋ ಬಾಲ್ ಎಸೆದು ಎದುರಾಳಿ ಬ್ಯಾಟರ್​ಗೆ ಜೀವದಾನ ಮಾಡಿದ್ದು ಮಾತ್ರವಲ್ಲದೆ ಬುಮ್ರಾ, ಅದೇ ಓವರ್​ನಲ್ಲಿ ಎರಡನೇ ನೋ ಬಾಲ್ ಮಾಡಿದರು. ಒಟ್ಟಾರೆ ಈ ಪಂದ್ಯದಲ್ಲಿ ಬುಮ್ರಾ ಬರೋಬ್ಬರಿ 3 ನೋ ಬಾಲ್​ಗಳನ್ನು ಎಸೆದರು. ಮಾತ್ರವಲ್ಲದೆ ಬುಮ್ರಾ ಈ ಆವೃತ್ತಿಯಲ್ಲಿ ಈಗಾಗಲೇ ಒಂಬತ್ತು ನೋ-ಬಾಲ್‌ಗಳನ್ನು ಎಸೆದಿದ್ದಾರೆ. ಬುಮ್ರಾ ಈ ರೀತಿಯಾಗಿ ಲಯ ತಪ್ಪಿರುವುದನ್ನು ನೋಡುವುದು ತುಂಬಾ ವಿರಳ ಆದರೆ ಪ್ರಸ್ತುತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಬುಮ್ರಾ ಲಯ ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

40 ರನ್ ಬಾರಿಸಿದ ಹಿಮ್ಮತ್

ಇನ್ನು ಬುಮ್ರಾರಿಂದ ಜೀವದಾನ ಪಡೆದ ಹಿಮ್ಮತ್ 31 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 40 ರನ್​ಗಳ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಮಾರ್ಕ್ರಾಮ್ ಅವರೊಂದಿಗೆ 6ನೇ ವಿಕೆಟ್​ಗೆ ಅಜೇಯ ಅರ್ಧಶತಕದ ಜೊತೆಯಾಟವನ್ನು ಕಟ್ಟಿ ಲಕ್ನೋ ತಂಡವನ್ನು 228 ರನ್​ಗಳಿಗೆ ಕೊಂಡೊಯ್ದರು. ಅಂದರೆ ಬುಮ್ರಾ ಮಾಡಿದ ಎಡವಟ್ಟು ಮುಂಬೈ ತಂಡಕ್ಕೆ 38 ರನ್​ಗಳ ದಂಡವಾಗಿ ಪರಿಣಮಿಸಿತು.

MI vs LSG: 6,6,6,6,6,6,6.. 2ನೇ ವೇಗದ ಅರ್ಧಶತಕ ಬಾರಿಸಿದ ಪೂರನ್

ಬುಮ್ರಾಗೆ ವಿಕೆಟ್ ಬರ

ನಿರ್ಣಾಯಕ ವಿಕೆಟ್ ಟೇಕಿಂಗ್ ಪ್ರದರ್ಶನಕ್ಕೆ ಹೆಸರುವಾಸಿಯಾದ ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯಲ್ಲಿ ವಿಕೆಟ್ ಪಡೆಯಲು ಕಷ್ಟಪಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ, 100 ಕ್ಕಿಂತ ಹೆಚ್ಚು ಬೌಲಿಂಗ್ ಸರಾಸರಿ ಹೊಂದಿದ್ದಾರೆ. ತವರು ಮೈದಾನವಾದ ವಾಂಖೆಡೆಯಲ್ಲಿ, ಬುಮ್ರಾ ತಮ್ಮ ಮೊದಲ ಆರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಈ ಆವೃತ್ತಿಯಲ್ಲಿ ಬುಮ್ರಾ ಅವರ ಎಕಾನಮಿ ರೇಟ್​ ಕೂಡ ಪ್ರತಿ ಓವರ್‌ಗೆ ಸುಮಾರು 9 ರನ್‌ಗಳಷ್ಟಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Mon, 4 May 26

Follow Us
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು