AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಿನ ರಾಜ ‘ಸಿಂಹ’ ಕಣ್ರೋ… KKR ಟ್ರೋಲ್​ಗೆ RCB ತಿರುಗೇಟು!

IPL 2026 RCB vs KKR: ಐಪಿಎಲ್​ನ 57ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಕಾಡಿನ ರಾಜ 'ಸಿಂಹ' ಕಣ್ರೋ... KKR ಟ್ರೋಲ್​ಗೆ RCB ತಿರುಗೇಟು!
Rcb Vs Kkr
ಝಾಹಿರ್ ಯೂಸುಫ್
|

Updated on:May 14, 2026 | 10:39 AM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ರೈವಲ್ರಿ ಅತ್ಯಂತ ರೋಚಕವಾದದ್ದು. ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಈ ಎರಡು ತಂಡಗಳ ಅಭಿಮಾನಿಗಳು ಹಾಗೂ ಫ್ರಾಂಚೈಸಿಗಳ ನಡುವೆ ಸದಾ ಯುದ್ಧ ನಡೆಯುತ್ತಲೇ ಇರುತ್ತದೆ. ಅದು ಈ ಬಾರಿ ಕೂಡ ನಡೆದಿದೆ. ಐಪಿಎಲ್​ನ 57ನೇ ಪಂದ್ಯಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡವು ಆರ್‌ಸಿಬಿಯನ್ನು ಕಾಲೆಳೆಯಲು ಹೈ-ಬಜೆಟ್ ‘ಫಾರೆಸ್ಟ್ ಕಿಂಗ್’ ಎಂಬ ಜಂಗಲ್ ಥೀಮ್ ಪ್ರೋಮೋ ಬಿಡುಗಡೆ ಮಾಡಿತ್ತು.

ಈ ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಳ್ಳುವ ಮೂಲಕ ಯಾರು ಏನೇ ಹೇಳಿದರೂ, ಕಾಡಿನ ನಿಜವಾದ ರಾಜ ಯಾರು ಎಂಬುದು ಕಾಡಿಗೆ ಗೊತ್ತು ಎಂದು  ಕೆಕೆಆರ್ ಸ್ಪಷ್ಟ ಸಂದೇಶ ನೀಡಿದ್ದರು. ಇಲ್ಲಿ ಹುಲಿಯನ್ನು ರೂಪಕವಾಗಿ ಬಳಸಿಕೊಂಡಿದ್ದು ಬೆಂಗಾಲ್ ಟೈಗರ್ಸ್​ (ಕೆಕೆಆರ್) ಎಂಬುದಾಗಿ. ಇನ್ನು ಕಾಡಿನ ನಿಜವಾದ ರಾಜ ಹುಲಿ ಎನ್ನಲು ಮುಖ್ಯ ಕಾರಣ ಆರ್​ಸಿಬಿ ಸಿಂಬಲ್ ಸಿಂಹ ಆಗಿರುವುದು.

ಅಷ್ಟೇ ಅಲ್ಲದೆ ಈ ವಿಡಿಯೋದಲ್ಲಿ 49 ಸಂಖ್ಯೆಯನ್ನು ತೋರಿಸುವ ಮೂಲಕ ಆರ್​ಸಿಬಿಯ ಹೀನಾಯ ದಾಖಲೆಯನ್ನು ಹೀಯಾಳಿಸಿದ್ದರು. ಇನ್ನು ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ಅವರ ಅಬ್ಬರಕ್ಕೆ ತಾನು ಹೆದರುವುದಿಲ್ಲ. ಕಾಡಿನ ರಾಜ ಯಾರೆಂಬುದು ಗೊತ್ತಿದೆ. ಈ ಬೇಟೆಯೊಂದಿಗೆ ಪ್ಲೇಆಫ್​ಗೇರುತ್ತೇವೆ ಎಂದು ಪರೋಕ್ಷವಾಗಿ ಆರ್​ಸಿಬಿಗೆ ಸವಾಲು ಹಾಕಿದ್ದರು.

ಆದರೆ ಈ “ಮಾತಿಗೆ ಮಾತಿಗಿಂತ, ಬ್ಯಾಟಿನ ಸೌಂಡೇ ಸೂಕ್ತ ಉತ್ತರ” ಎಂಬಂತೆ, ಆರ್‌ಸಿಬಿಯ ಅಸಲಿ ‘ಕಿಂಗ್’ ವಿರಾಟ್ ಕೊಹ್ಲಿ ಮೈದಾನದಲ್ಲಿ ಅಬ್ಬರಿಸಿ ಕೆಕೆಆರ್ ಅಹಂಕಾರವನ್ನು ಧೂಳೀಪಟ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ನೀಡಿದ 193 ರನ್​ಗಳ ಗುರಿಯನ್ನು ಆರ್​ಸಿಬಿ 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇತ್ತ ಪಂದ್ಯ ಮುಗಿಯುತ್ತಿದ್ದಂತೆ ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಕೆಕೆಆರ್‌ಗೆ ‘ಕರ್ಮ’ದ ಪಾಠ ಕಲಿಸಿದ್ದಾರೆ. “ಕೆಕೆಆರ್ ಮೀಡಿಯಾ ತಂಡ ಪ್ರೋಮೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಆರ್‌ಸಿಬಿ ಪಂದ್ಯ ಗೆಲ್ಲುವುದರಲ್ಲಿ ಬ್ಯುಸಿಯಾಗಿದೆ” ಎಂದು ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಆರ್​ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಸಿಂಹ ನೈಟ್ ರೈಡರ್ಸ್​ ಅನ್ನು ಭೇಟೆಯಾಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಕಾಡಿನ ರಾಜ ಸಿಂಹನೇ ಎಂದು ಕೆಕೆಆರ್ ಕಾಲೆಳೆದಿದ್ದಾರೆ.

ಇದರ ಜೊತೆಗೆ  “ಮುಂದಿನ ವರ್ಷವಾದರೂ ಈ ದಶಕಕ್ಕೆ ಹೊಂದುವಂತಹ ಹೊಸ ಡೈಲಾಗ್ ಅಥವಾ ಮ್ಯಾಟರ್‌ಗಳ ಜೊತೆ ಬನ್ನಿ. ಕೆಕೆಆರ್​ ಇನ್ನು ಹಳೆಯ ಇತಿಹಾಸ ಮತ್ತು ಹಳೇ ಡೈಲಾಗ್‌ಗಳನ್ನೇ ನಂಬಿಕೊಂಡಿದೆ ಎಂದು RCB ಲೇವಡಿ ಮಾಡಿದೆ.

ಒಟ್ಟಿನಲ್ಲಿ ಉಭಯ ತಂಡಗಳ ಪಂದ್ಯಗಳ ಮನರಂಜನೆಯ ಜೊತೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೋಷಿಯಲ್ ಮೀಡಿಯಾ ಫೈಟ್ ಅಭಿಮಾನಿಗಳ ಪಾಲಿಗೆ ಭರಪೂರ ಮನರಂಜನೆ ನೀಡುತ್ತಿದೆ. ಮೈದಾನದ ಒಳಗಿನ ರೋಚಕ ಸಿಕ್ಸರ್-ಬೌಂಡರಿಗಳು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಈ ಡಿಜಿಟಲ್ ಜಿದ್ದಾಜಿದ್ದಿ ಐಪಿಎಲ್ ಕ್ರಿಕೆಟ್ ಹಬ್ಬದ ಮಜಾವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗಲಾರದು.

Published On - 10:38 am, Thu, 14 May 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ