AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಗೇಲಿ ಮಾಡಿದ್ದ ಕೆಕೆಆರ್​ಗೆ ತಕ್ಕ ತಿರುಗೇಟು ನೀಡುತ್ತಾ ಆರ್​ಸಿಬಿ?

IPL 2026, RCB vs KKR Match 57: ಐಪಿಎಲ್ 2026 ರ 57ನೇ ಪಂದ್ಯದಲ್ಲಿ RCB ಮತ್ತು KKR ಮುಖಾಮುಖಿಯಾಗಲಿವೆ. ಪ್ಲೇ ಆಫ್ ದೃಷ್ಟಿಯಿಂದ ಇದು ಉಭಯ ತಂಡಗಳಿಗೂ ನಿರ್ಣಾಯಕ. ಕೆಕೆಆರ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ಜೀವಂತ. ಇತ್ತ ಆರ್​ಸಿಬಿ, ಕೆಕೆಆರ್ ಫ್ರಾಂಚೈಸಿ ಈ ಹಿಂದೆ ಮಾಡಿದ ಅವಮಾನಕ್ಕೆ ತಕ್ಕ ತಿರುಗೇಟು ನೀಡಲು ಸಜ್ಜಾಗಿದೆ. ಹಳೆಯ ಪಂದ್ಯಗಳ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಆರ್​ಸಿಬಿ ಕಾಯುತ್ತಿದೆ.

IPL 2026: ಗೇಲಿ ಮಾಡಿದ್ದ ಕೆಕೆಆರ್​ಗೆ ತಕ್ಕ ತಿರುಗೇಟು ನೀಡುತ್ತಾ ಆರ್​ಸಿಬಿ?
Rcb Vs Kkr
ಪೃಥ್ವಿಶಂಕರ
|

Updated on:May 11, 2026 | 4:53 PM

Share

ಐಪಿಎಲ್ 2026 (IPL 2026) ರ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR)​ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಅದರಲ್ಲೂ ಆರ್​ಸಿಬಿಗೆ ಹೋಲಿಸಿದರೆ, ಕೆಕೆಆರ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರಷ್ಟೇ ಕೆಕೆಆರ್​ಗೆ ಪ್ಲೇಆಫ್ ಕನಸು ಜೀವಂತ, ಇಲ್ಲದಿದ್ದರೆ ಅದು ಕೂಡ ಲೀಗ್ ಹಂತದಲ್ಲೇ ಹೊರಬೀಳಲಿದೆ. ಹೀಗಾಗಿ ರಹಾನೆ ಪಡೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇತ್ತ ಆರ್​ಸಿಬಿ, ಲೀಗ್ ಆರಂಭಕ್ಕೂ ಮುನ್ನ ಕೆಕೆಆರ್ ಫ್ರಾಂಚೈಸಿ ಮಾಡಿದ್ದ ಅವಮಾನಕ್ಕೆ ತಕ್ಕ ತಿರುಗೇಟು ನೀಡಲು ತಯಾರಾಗಿದೆ.

ಪ್ರೋಮೋದಲ್ಲಿ ಆರ್​ಸಿಬಿಗೆ ಅವಮಾನ

ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ಫ್ರಾಂಚೈಸಿ ತನ್ನ ತಂಡದ ನೂತನ ಜೆರ್ಸಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿತ್ತು. 1:38 ನಿಮಿಷಗಳ ವಿಡಿಯೋದಲ್ಲಿ ಕೆಕೆಆರ್ ತನ್ನ ಕೆಲವು ಐತಿಹಾಸಿಕ ಸಾಧನೆಗಳನ್ನು ನೆನಪು ಮಾಡಲು ಪ್ರಯತ್ನಿಸಿತ್ತು. ಇದರಲ್ಲಿ ಹೆಚ್ಚಿನದಾಗಿ ಆರ್​ಸಿಬಿ ವಿರುದ್ಧ ಕೆಕೆಆರ್ ತಂಡದ ಪಾರುಪತ್ಯ ಹೇಗಿತ್ತು ಎಂಬುದನ್ನು ಹೇಳುವುದರ ಜೊತೆಗೆ ಉದ್ದೇಶಪೂರ್ವಕವಾಗಿಯೇ ಆರ್​​ಸಿಬಿಯನ್ನು ಅಣಕಿಸುವ ಕೆಲಸ ಮಾಡಿತ್ತು.

ಕೆಕೆಆರ್ ಫ್ರಾಂಚೈಸಿ ಬಿಡುಗಡೆ ಮಾಡಿದ್ದ ಆ ವಿಡಿಯೋದಲ್ಲಿ ಮೊದಲಿಗೆ ಟ್ರಾಫಿಕ್ ಸಿಗ್ನಲ್‌ ತೋರಿಸಲಾಗಿದ್ದು, ಆ ಸಿಗ್ನಲ್​ನ ಒಂದು ದೀಪದಲ್ಲಿ 49 ಎಂದು ಬರೆಯಲಾಗಿತ್ತು. ಸಾಮಾನ್ಯವಾಗಿ ಇದು 49 ಸೆಕೆಂಡುಗಳನ್ನು ಅರ್ಥೈಸುತ್ತದೆಯಾದರೂ, ಇಲ್ಲಿ ತನ್ನ ಬುದ್ಧಿ ಬಳಸಿರುವ ಕೆಕೆಆರ್, ಹಾಲಿ ಚಾಂಪಿಯನ್ ಬೆಂಗಳೂರು ತಂಡವನ್ನು 49 ರನ್​ಗಳಿಗೆ ಆಲೌಟ್ ಮಾಡಿದ್ದನ್ನು ನೆನಪಿಸುವ ಕೆಲಸ ಮಾಡಿತ್ತು.

ವಾಸ್ತವವಾಗಿ, 2017 ರ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ಆರ್​ಸಿಬಿ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್ 131 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್ ಆಗಿ, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಮೊದಲ ತಂಡವೆಂಬ ಮುಜುಗರದ ದಾಖಲೆಗೆ ಕೊರಳೊಡ್ಡಿತ್ತು.

158 ರನ್ ನೆನಪಿಸಿದ್ದ ಕೆಕೆಆರ್

ಇದಾದ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ 158ನೇ ಟೇಕ್ ಎಂಬುದನ್ನು ಬಳಸಿರುವ ಕೆಕೆಆರ್ ಮತ್ತೆ ಆರ್​ಸಿಬಿಯನ್ನು ಅಣಕಿಸುವ ಕೆಲಸ ಮಾಡಿತ್ತು. ಐಪಿಎಲ್ ಮೊದಲ ಆವೃತ್ತಿಯಲ್ಲಿ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಪರ ಆಡಿದ್ದ ಬ್ರೆಂಡನ್ ಮೆಕಲಮ್ ಬರೋಬ್ಬರಿ 158 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲೂ ಆರ್​ಸಿಬಿ ಹೀನಾಯವಾಗಿ ಸೋತಿತ್ತು.

IPL 2026: ಆರ್​ಸಿಬಿ ಮುಂದಿನ ಪಂದ್ಯ ಯಾವಾಗ? ಎದುರಾಳಿ ಯಾರು?

ಅದೇ ರೀತಿ, ಒಂದು ಸ್ಥಳದಲ್ಲಿ, 105/0 6 ಓವರ್‌ಗಳು ಎಂದು ಬರೆಯಲಾಗಿತ್ತು. ಇದು 2017 ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದ ಪವರ್‌ಪ್ಲೇನಲ್ಲಿ ಕೆಕೆಆರ್‌ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಈ ಎಲ್ಲಾ ಹಳೆಯ ಘಟನೆಗಳನ್ನು ನೆನಪಿಸುತ್ತಾ ಆರ್​ಸಿಬಿಯನ್ನು ಜರಿಯುವ ಕೆಲಸವನ್ನು ಕೆಕೆಆರ್ ಮಾಡಿತ್ತು. ಇದೀಗ ಆರ್​ಸಿಬಿ, ಕೆಕೆಆರ್​ಗೆ ಸರಿಯಾದ ಪಾಠ ಕಲಿಸಲು ಸಜ್ಜಾಗಿದೆ. ಇತ್ತ ಅಭಿಮಾನಿಗಳು ಕೂಡ ಆರ್​ಸಿಬಿ, ಕೆಕೆಆರ್​ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ನೋಡಲು ಕಾದು ಕುಳಿತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Mon, 11 May 26

Follow Us
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್