AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs PBKS: 12 ರನ್​ಗೆ ಕ್ಯಾಚ್ ಡ್ರಾಪ್; ಭರ್ಜರಿ ಶತಕ ಚಚ್ಚಿದ ರಾಹುಲ್

KL Rahul's 48-ball century: ಐಪಿಎಲ್ 2026 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಬ್ಬರಿಸಿದ್ದಾರೆ. ರಾಹುಲ್ ಕೇವಲ 47 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ, ತಮ್ಮ ಐಪಿಎಲ್ ವೃತ್ತಿಜೀವನದ 6ನೇ ಶತಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ 2ನೇ ಶತಕ ದಾಖಲಿಸಿದ್ದಾರೆ. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಅವರ ಸ್ಫೋಟಕ ಆಟ ಅಭಿಮಾನಿಗಳನ್ನು ರಂಜಿಸಿತು.

DC vs PBKS: 12 ರನ್​ಗೆ ಕ್ಯಾಚ್ ಡ್ರಾಪ್; ಭರ್ಜರಿ ಶತಕ ಚಚ್ಚಿದ ರಾಹುಲ್
Kl Rahul
ಪೃಥ್ವಿಶಂಕರ
|

Updated on:Apr 25, 2026 | 5:20 PM

Share

ಐಪಿಎಲ್ 2026 (IPL 2026) ರಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ (DC vs PBKS) ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿದರು. ಬ್ಯಾಟಿಂಗ್‌ ಸ್ನೇಹಿ ಪಿಚ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಹರಿಸಿದ ರಾಹುಲ್ ಕೇವಲ 47 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಯಾನ್ಸನ್ ಎಸೆದ 15ನೇ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ 6ನೇ ಶತಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡನೇ ಶತಕವನ್ನು ದಾಖಲಿಸಿದರು.

ರಾಹುಲ್​ಗೆ ಎರಡು ಜೀವದಾನ

ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪಾತುಮ್ ನಿಸ್ಸಾಂಕ ಮತ್ತೆ ನಿರಾಸೆ ಮೂಡಿಸಿದರು. ಇದರ ಜೊತೆಗೆ ರಾಹುಲ್ ಕೂಡ 12 ರನ್​ಗಳಿಗೆ ಸುಲಭ ಕ್ಯಾಚ್ ನೀಡಿದ್ದರು. ಆದರೆ ಪಂಜಾಬ್ ಕಿಂಗ್ಸ್‌ ತಂಡದ ಶಶಾಂಕ್ ಸಿಂಗ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲುವ ಮೂಲಕ ರಾಹುಲ್ ಶತಕಕ್ಕೆ ನೆರವಾದರು. ಇದರ ಜೊತೆಗೆ ರಾಹುಲ್​ಗೆ ಎರಡನೇ ಜೀವದಾನವೂ ಸಿಕ್ಕಿತು. ಇದರ ಸಂಪೂರ್ಣ ಲಾಭವನ್ನು ಬಳಸಿಕೊಳ್ಳುವಲ್ಲಿ ರಾಹುಲ್ ಯಶಸ್ವಿಯಾದರು.

ರಾಣಾ ಜೊತೆಗೆ ಶತಕದ ಜೊತೆಯಾಟ

ಶಶಾಂಕ್ ಸಿಂಗ್ ಸುಲಭ ಕ್ಯಾಚ್ ಅನ್ನು ಕೈಬಿಟ್ಟಾಗ ರಾಹುಲ್ ಕೇವಲ 12 ರನ್‌ಗಳಿಸಿದ್ದರು. ಇದಾದ ನಂತರ ಸ್ಫೋಟಕ ಬ್ಯಾಟಿಂಗ್‌ ಆರಂಭಿಸಿದ ರಾಹುಲ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ರಾಹುಲ್ 51 ರನ್‌ಗಳಲ್ಲಿದ್ದಾಗ, ಮತ್ತೊಂದು ಕ್ಯಾಚ್ ಕೈಬಿಡಲಾಯಿತು. ಈ ಎರಡನೇ ಜೀವದಾನದ ನಂತರ, ರಾಹುಲ್ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿ ಕೇವಲ 47 ಎಸೆತಗಳಲ್ಲಿ 100 ರನ್‌ಗಳ ಗಡಿ ತಲುಪಿದರು. ಈ ಶತಕದ ಇನ್ನಿಂಗ್ಸ್ ಜೊತೆಗೆ ರಾಹುಲ್, ನಿತೀಶ್ ರಾಣಾ ಅವರೊಂದಿಗೆ ಉತ್ತಮ ಪಾಲುದಾರಿಕೆಯನ್ನು ರೂಪಿಸಿದರು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ಫೀಲ್ಡಿಂಗ್ ನಿರಾಶಾದಾಯಕವಾಗಿತ್ತು. ಎರಡು ನಿರ್ಣಾಯಕ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ, ರಾಹುಲ್​ಗೆ ಜೀವದಾನ ನೀಡುವುದರ ಜೊತೆಗೆ, ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಸ್ಕೋರ್ ಗಳಿಸಲು ಅವಕಾಶ ಮಾಡಿಕೊಟ್ಟಿತು.

DC vs PBKS IPL 2026 Live Score: ಶತಕದಂಚಿನಲ್ಲಿ ಎಡವಿದ ರಾಣಾ

ರಾಹುಲ್​ಗೆ ಆರೆಂಜ್ ಕ್ಯಾಪ್

ಈ ಶತಕದೊಂದಿಗೆ, ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ ರಾಹುಲ್ ಎರಡು ಪಂದ್ಯಗಳಲ್ಲಿ ಕೇವಲ 1 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಆ ನಂತರ 92 ರನ್‌ಗಳ ಇನ್ನಿಂಗ್ಸ್‌ ಆಡುವ ಮೂಲಕ ಫಾರ್ಮ್​ ಕಂಡುಕೊಂಡಿದ್ದ ರಾಹುಲ್ ಈಗ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೇರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Sat, 25 April 26

Follow Us
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?