ದೇಶಕ್ಕಾಗಿ ಆಡುವ ಉತ್ಸಾಹವೇ ಇಲ್ಲ, ಇದುವೇ ಸೋಲಿಗೆ ಕಾರಣ: ಮದನ್ ಲಾಲ್
ಭಾರತೀಯ ಆಟಗಾರರ ಕಳಪೆ ಫಿಟ್‌ನೆಸ್ ಕೂಡ ಒಂದು ವಿಷಯ. ಎರಡನೇ ಏಕದಿನ ಪಂದ್ಯದ ಸೋಲಿನ ನಂತರ ಸ್ವತಃ ನಾಯಕ ರೋಹಿತ್ ಶರ್ಮಾ ಕೂಡ ಆಟಗಾರರ ಫಿಟ್‌ನೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ಸೋಲನ್ನು ಮರೆಯುವ ಮುನ್ನ ಟೀಮ್ ಇಂಡಿಯಾ (Team India) ಬಾಂಗ್ಲಾದೇಶ್ ವಿರುದ್ಧ ಹೀನಾಯವಾಗಿ ಏಕದಿನ ಸರಣಿ ಸೋತಿದೆ. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ವಿರುದ್ಧ ಭಾರೀ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ತಂಡದಲ್ಲಿ ಸಮತೋಲನ, ಆಟಗಾರರ ಫಿಟ್‌ನೆಸ್ ಬಗ್ಗೆ ಹಲವು ಮಾಜಿ ಆಟಗಾರರು ಪ್ರಶ್ನೆಗಳೆನ್ನೆತ್ತಿದ್ದಾರೆ. ಇವರ ನಡುವೆ ಭಾರತ ತಂಡದ ಮಾಜಿ ಆಟಗಾರ ಮದನ್ ಲಾಲ್ ಟೀಮ್ ಇಂಡಿಯಾ ಆಟಗಾರರ ಮನಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶ್ ವಿರುದ್ಧದ ಟೀಮ್ ಇಂಡಿಯಾದ ಏಕದಿನ ಸರಣಿ ಸೋಲಿನ ಬಗ್ಗೆ ಮಾತನಾಡಿದ ಮದನ್ ಲಾಲ್, ಟೀಮ್ ಇಂಡಿಯಾ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬುದು ಸ್ಪಷ್ಟ. ತಂಡದಲ್ಲಿ ದೇಶಕ್ಕಾಗಿ ಆಡಬೇಕೆಂಬ ಸ್ಪೂರ್ತಿಯಾಗಲಿ, ಉತ್ಸಾಹವಾಗಲಿ ಕಾಣುತ್ತಿಲ್ಲ. ಇದು ಈ ಪಂದ್ಯದಿಂದಲ್ಲ. ಕಳೆದ ಎರಡು ವರ್ಷಗಳಲ್ಲಿ ಟೀಮ್ ಇಂಡಿಯಾ ಆಟಗಾರರಲ್ಲಿ ದೇಶಕ್ಕಾಗಿ ಆಡುತ್ತಿದ್ದೇವೆ ಎಂಬ ಉತ್ಸಾಹವನ್ನೇ ಕಂಡಿಲ್ಲ ಎಂದು ಮದನ್ ಲಾಲ್ ಆರೋಪಿಸಿದ್ದಾರೆ.
ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ ಮಾಜಿ ಸದಸ್ಯರಾಗಿರುವ ಮದನ್ ಲಾಲ್ ಅವರು, ಆಟಗಾರರ ಇಂತಹ ಮನಸ್ಥಿತಿಯಿಂದಾಗಿ ತಂಡಗಳು ಸೋಲುತ್ತವೆ. ಒಂದಾದರೆ ಅವರಲ್ಲಿ ದೇಶಕ್ಕಾಗಿ ಆಡುವ ಉತ್ಸಾಹದ ಕೊರತೆ ಇದೆ. ಇಲ್ಲ ತುಂಬಾ ದಣಿದಿದ್ದಾರೆ. ಇದು ತೀವ್ರ ಕಳವಳಕಾರಿ ವಿಷಯ. ಇದನ್ನು ಆಯ್ಕೆ ಸಮಿತಿಯು ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದ್ದಾರೆ.
ಇದನ್ನೂ ಓದಿ: IPL 2023: ಐಪಿಎಲ್ ಸೀಸನ್ 16 ಗೆ ಡೇಟ್ ಫಿಕ್ಸ್?
ಭಾರತೀಯ ಆಟಗಾರರ ಕಳಪೆ ಫಿಟ್‌ನೆಸ್ ಕೂಡ ಒಂದು ವಿಷಯ. ಎರಡನೇ ಏಕದಿನ ಪಂದ್ಯದ ಸೋಲಿನ ನಂತರ ಸ್ವತಃ ನಾಯಕ ರೋಹಿತ್ ಶರ್ಮಾ ಕೂಡ ಆಟಗಾರರ ಫಿಟ್‌ನೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕನೇ ಈ ರೀತಿ ಹೇಳುತ್ತಿದ್ದರೆ ಎಲ್ಲೋ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟ. ಇದಕ್ಕೆ ಯಾರು ಹೊಣೆ? ತರಬೇತುದಾರರೇ? ಫಿಟ್‌ನೆಸ್ ಇಲ್ಲದಿದ್ದರೂ ಯಾಕೆ ಆಟಗಾರರು ಆಡುತ್ತಿದ್ದಾರೆ? ನೀವು ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೀರಿ..ಹೀಗೆ ಆಡಿದರ ಪರಿಣಾಮವಾಗಿ ಇದೀಗ ಫಲಿತಾಂಶ ನಿಮ್ಮ ಮುಂದಿದೆ ಎಂದು ಮದನ್ ಲಾಲ್ ಹೇಳಿದರು.
ಇದನ್ನೂ ಓದಿ: Shreyas Iyer: ಕೆಎಲ್ ರಾಹುಲ್ ದಾಖಲೆ ಉಡೀಸ್ ಮಾಡಿದ ಶ್ರೇಯಸ್ ಅಯ್ಯರ್
ಮದನ್ ಲಾಲ್ ಅವರು 1983 ರಲ್ಲಿ ಭಾರತ ತಂಡವು ವಿಶ್ವಕಪ್ ತಂಡದ ಭಾಗವಾಗಿದ್ದರು. ಇದೀಗ ನೇರ ನುಡಿಗಳ ಮೂಲಕ ಟೀಮ್ ಇಂಡಿಯಾವನ್ನು ವಿಮರ್ಶಿಸಿದ್ದಾರೆ. ಅಲ್ಲದೆ ಆಟಗಾರರಲ್ಲಿ ದೇಶಕ್ಕಾಗಿ ಆಡುತ್ತಿದ್ದೇವಿ ಎಂಬ ಉತ್ಸಾಹ ಇಲ್ಲದಿದ್ದರೆ ಯಾವುದೇ ಟೂರ್ನಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.