AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಧೋನಿ ಮುಂದಿನ ಸೀಸನ್ ಆಡ್ತಾರಾ? ಅಡ್ಡ ಗೋಡೆ ಮೇಲೆ ದೀಪವಿಟ್ಟ ರುತುರಾಜ್

MS Dhoni future IPL: ಐಪಿಎಲ್ 2026ರಲ್ಲಿ ಸಿಎಸ್‌ಕೆ ಲೀಗ್ ಹಂತದಲ್ಲೇ ಮುಕ್ತಾಯಗೊಂಡಿದ್ದು, ಕಳಪೆ ಪ್ರದರ್ಶನಕ್ಕೆ ಎಂಎಸ್ ಧೋನಿ ಗೈರು ಪ್ರಮುಖ ಕಾರಣ. ಅವರು ಗಾಯದಿಂದಾಗಿ ಇಡೀ ಸೀಸನ್ ಆಡಿಲ್ಲ. ಇದರ ಪರಿಣಾಮವಾಗಿ, ತಂಡವು ಪ್ಲೇಆಫ್ ಪ್ರವೇಶಿಸಲು ವಿಫಲವಾಯಿತು. ಧೋನಿ ಮುಂದಿನ ಸೀಸನ್‌ನಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ನಾಯಕ ರುತುರಾಜ್ ಗಾಯಕ್ವಾಡ್ ಸ್ಪಷ್ಟ ಉತ್ತರ ನೀಡದೆ, ಭವಿಷ್ಯದಲ್ಲಿ ತಿಳಿಯಲಿದೆ ಎಂದಿದ್ದಾರೆ.

IPL 2026: ಧೋನಿ ಮುಂದಿನ ಸೀಸನ್ ಆಡ್ತಾರಾ? ಅಡ್ಡ ಗೋಡೆ ಮೇಲೆ ದೀಪವಿಟ್ಟ ರುತುರಾಜ್
Ms Dhoni
ಪೃಥ್ವಿಶಂಕರ
|

Updated on:May 22, 2026 | 3:11 PM

Share

2026 ರ ಐಪಿಎಲ್‌ನಲ್ಲಿ (IPL 2026) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಸೀಸನ್‌ನಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣಗಳು ಒಂದಲ್ಲ, ಎರಡಲ್ಲ, ಹಲವು. ಆದರೆ ಆ ಕಾರಣಗಳಲ್ಲಿ ಪ್ರಮುಖವಾದದ್ದು, ಎಂಎಸ್ ಧೋನಿ (MS Dhoni) ಇಡೀ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವನ್ನು ಆಡದಿರುವುದು. ಇದೀಗ ಧೋನಿ ಮುಂದಿನ ಸೀಸನ್‌ನಲ್ಲಿ ತಂಡದ ಪರ ಆಡುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಸೋತ ಬಳಿಕ ಈ ಬಗ್ಗೆ ಮಾತನಾಡಿದ ನಾಯಕ ರುತುರಾಜ್ ಗಾಯಕ್ವಾಡ್ ಯಾವುದನ್ನು ಖಚಿತವಾಗಿ ಹೇಳದೆ ಅಡ್ಡ ಗೋಡೆ ಮೇಲೆ ದೀಪವಿಟ್ಟರು.

ಧೋನಿ ಬಗ್ಗೆ ಗಾಯಕ್ವಾಡ್ ಹೇಳಿದ್ದೇನು?

ಪಂದ್ಯದ ನಂತರ, ಪ್ರಸ್ತುತಿ ಸಮಾರಂಭಕ್ಕೂ ಮುನ್ನ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಪ್ರಸಾರಕರು ಮುಂದಿನ ಆವೃತ್ತಿಯಲ್ಲಿ ಧೋನಿಯ ಲಭ್ಯತೆಯ ಪ್ರಶ್ನಿಸಿದರು. ರುತುರಾಜ್ ಗಾಯಕ್ವಾಡ್ ಈ ಪ್ರಶ್ನೆಗೆ ಸ್ಪಷ್ಟವಾಗಿ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಆದರೆ ಪ್ರಸ್ತುತ ತಂಡದಲ್ಲಿರುವ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ. ಧೋನಿ ಮುಂದಿನ ಸೀಸನ್ ಆಡುತ್ತಾರಾ ಅಥವಾ ಇಲ್ಲವಾ ಎಂಬುದು ನಿಮಗೆ ಮುಂದಿನ ವರ್ಷ ತಿಳಿಯಲಿದೆ. ಆದರೆ ಈ ಸೀಸನ್​ನಲ್ಲಿ ನಾವು ಅವರನ್ನು ತುಂಬಾ ಮಿಸ್ ಮಾಡಿಕೊಂಡೆವು. ಕೊನೆಯ ಓವರ್‌ಗಳಲ್ಲಿ ಬಂದು ಕ್ರೀಸ್‌ನಲ್ಲಿ ಉಳಿಯುವ ಮೂಲಕ ಅವರು ಆಟವನ್ನು ಬದಲಾಯಿಸುತ್ತಿದ್ದರು. ಆದರೆ ಮುಂದಿನ ಸೀಸನ್ ಬಗ್ಗೆ ನಾನು ಏನನ್ನೂ ಹೇಳಲಾರೆ ಎಂದಿದ್ದಾರೆ.

ಒಂದು ಪಂದ್ಯವನ್ನು ಆಡದ ಧೋನಿ

ಸೀಸನ್ ಆರಂಭಕ್ಕೆ ಎರಡು ದಿನಗಳ ಮೊದಲು ಧೋನಿ ಗಾಯಗೊಂಡರು, ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು. ಪರಿಣಾಮವಾಗಿ, ಅವರು ತಂಡದೊಂದಿಗೆ ಎಲ್ಲಿಗೂ ಪ್ರಯಾಣಿಸದೆ ಚೆನ್ನೈನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದರು. ಲೀಗ್ ಹಂತ ಮುಗಿಯುವುದಕ್ಕೂ ಮುನ್ನ ಧೋನಿ ಸಿಎಸ್​ಕೆ ತವರು ನೆಲದಲ್ಲಿ ಪಂದ್ಯವನ್ನು ಆಡಲಿದ್ದಾರೆ ಎಂದು ವರದಿಯಾಗಿತ್ತು.

IPL 2026: ಒಂದೇ ಒಂದು ಪಂದ್ಯವನ್ನಾಡದೆ ರಾಂಚಿಗೆ ವಾಪಸ್ಸಾದ ಧೋನಿ

ಆದರೆ ಆ ಪಂದ್ಯಕ್ಕೂ ಮುನ್ನವೇ ಧೋನಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು. ಹೀಗಾಗಿ ಧೋನಿ ಚೆನ್ನೈನ ತವರು ಮೈದಾನದಲ್ಲಿ ನಡೆದ ತಂಡದ ಅಂತಿಮ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಹಾಜರಾದರೂ, ಆ ಪಂದ್ಯದಲ್ಲೂ ಆಡಲು ಸಾಧ್ಯವಾಗಲಿಲ್ಲ. ಇನ್ನು ಗುಜರಾತ್ ವಿರುದ್ಧದ ಸೀಸನ್​ನ ಕೊನೆಯ ಪಂದ್ಯಕ್ಕೂ ಮೊದಲೇ ಧೋನಿ ಮನೆಗೆ ವಾಪಸ್ಸಾಗಿದ್ದರು. ಹೀಗಾಗಿ ಧೋನಿ ಕೊನೆಯ ಲೀಗ್ ಪಂದ್ಯದಲ್ಲೂ ತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Fri, 22 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More