AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs MI, IPL 2025: ನಾಯಕ ಬದಲಾದರೂ ಬದಲಾಗದ ಮುಂಬೈ ಹಾದಿ: ಸತತ 13ನೇ ಬಾರಿ ಮೊದಲ ಪಂದ್ಯದಲ್ಲಿ ಸೋಲು

Mumbai Indians: 2013 ರ ನಂತರ ಮುಂಬೈ ಇಂಡಿಯನ್ಸ್ ಯಾವುದೇ ಐಪಿಎಲ್ ಋತುವಿನ ಮೊದಲ ಪಂದ್ಯವನ್ನು ಗೆದ್ದಿಲ್ಲ. ಮುಂಬೈ ಇಂಡಿಯನ್ಸ್ ಕೊನೆಯ ಬಾರಿಗೆ 2012 ರಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿತ್ತಷ್ಟೆ. ಅಂದಿನಿಂದ ಅವರು ಋತುವಿನ ಮೊದಲ ಪಂದ್ಯವನ್ನು ನಿರಂತರವಾಗಿ ಸೋಲುತ್ತಿದ್ದಾರೆ. ಈ ಬಾರಿಯೂ ಕಥೆ ಅದೇ ರೀತಿಯಿಂದ ಪ್ರಾರಂಭವಾಗಿದೆ.

CSK vs MI, IPL 2025: ನಾಯಕ ಬದಲಾದರೂ ಬದಲಾಗದ ಮುಂಬೈ ಹಾದಿ: ಸತತ 13ನೇ ಬಾರಿ ಮೊದಲ ಪಂದ್ಯದಲ್ಲಿ ಸೋಲು
Mumbai Indians
Follow us
Vinay Bhat
| Updated By: ರಾಜೇಶ್ ದುಗ್ಗುಮನೆ

Updated on:Mar 24, 2025 | 7:32 AM

ಬೆಂಗಳೂರು (ಮಾ, 24): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2025) ಅತ್ಯಂತ ಯಶಸ್ವಿ ತಂಡಗಳ ಬಗ್ಗೆ ಮಾತನಾಡುವಾಗಲೆಲ್ಲಾ, ಮುಂಬೈ ಇಂಡಿಯನ್ಸ್ ಹೆಸರು ಮೊದಲು ಬರುತ್ತದೆ. ಮುಂಬೈ ಇಂಡಿಯನ್ಸ್ ಹೆಸರು ಕೇಳಿದ ತಕ್ಷಣ, ಲೀಗ್‌ನಲ್ಲಿ ಗೆದ್ದ 5 ಟ್ರೋಫಿಗಳ ಹೊಳಪು ನಮ್ಮ ಕಣ್ಣ ಮುಂದೆ ಬರುತ್ತದೆ. ಈ ತಂಡವು ಐಪಿಎಲ್‌ನಲ್ಲಿ ತನ್ನ ಬ್ಯಾಟಿಂಗ್- ಬೌಲಿಂಗ್- ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದೆ. ಆದರೆ ಪ್ರತಿ ಋತುವಿನ ಆರಂಭದಲ್ಲಿ ಈ ತಂಡದ ಕೆಟ್ಟ ದಾಖಲೆಯೂ ಒಂದು ಇದೆ. ಐಪಿಎಲ್ 2025 ರ ತನ್ನ ಮೊದಲ ಪಂದ್ಯದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತನ್ನ ವಿಚಿತ್ರ ಸಂಪ್ರದಾಯವನ್ನು ಮುಂದುವರೆಸಿತು.

ಐಪಿಎಲ್‌ನಲ್ಲಿ ಸತತ 13 ನೇ ಬಾರಿಗೆ ಮುಂಬೈ ಸ್ಥಿತಿ ಅದೇ:

2013 ರ ನಂತರ ಮುಂಬೈ ಇಂಡಿಯನ್ಸ್ ಯಾವುದೇ ಐಪಿಎಲ್ ಋತುವಿನ ಮೊದಲ ಪಂದ್ಯವನ್ನು ಗೆದ್ದಿಲ್ಲ. ಮುಂಬೈ ಇಂಡಿಯನ್ಸ್ ಕೊನೆಯ ಬಾರಿಗೆ 2012 ರಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿತ್ತಷ್ಟೆ. ಅಂದಿನಿಂದ ಅವರು ಋತುವಿನ ಮೊದಲ ಪಂದ್ಯವನ್ನು ನಿರಂತರವಾಗಿ ಸೋಲುತ್ತಿದ್ದಾರೆ. ಈ ಬಾರಿಯೂ ಕಥೆ ಅದೇ ರೀತಿಯಿಂದ ಪ್ರಾರಂಭವಾಗಿದೆ. ಈ ಬಾರಿ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದೊಂದಿಗೆ ಋತುವನ್ನು ಆರಂಭಿಸಿತು. ಆದರೆ ಈ ಬಾರಿಯೂ ಎಂಐ ತಂಡ ಸೋಲನ್ನು ಎದುರಿಸಬೇಕಾಯಿತು. ಇದು ಐಪಿಎಲ್‌ನ ಸತತ ಅತಿ ಹೆಚ್ಚು ಋತುಗಳಲ್ಲಿ ಮೊದಲ ಪಂದ್ಯದಲ್ಲೇ ಸೋತ ದಾಖಲೆಯಾಗಿದೆ.

ಈ 13 ಋತುಗಳಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 3 ನಾಯಕರನ್ನು ಬಳಸಿದೆ. ಆದರೆ ಋತುವಿನ ಮೊದಲ ಪಂದ್ಯದಲ್ಲಿ ಅವರನ್ನು ಗೆಲ್ಲಿಸಲು ಯಾರಿಗೂ ಸಾಧ್ಯವಾಗಿಲ್ಲ. 2013 ರಿಂದ ರೋಹಿತ್ ಶರ್ಮಾ ಮುಂಬೈ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ನಂತರ ಕಳೆದ ಋತುವಿನಲ್ಲಿ, ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಋತುವನ್ನು ಪ್ರಾರಂಭಿಸಿತು. ಈ ಬಾರಿ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ತಂಡದ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಕಳೆದ 13 ವರ್ಷಗಳಿಂದ ಮುಂಬೈ ತಂಡವು ಈ ಋತುವಿನ ಮೊದಲ ಪಂದ್ಯವನ್ನು ಗೆದ್ದಿಲ್ಲ. ಆದರೆ ಪಂದ್ಯಾವಳಿ ಮುಂದುವರೆದಂತೆ ಅವರು ತಮ್ಮ ಲಯವನ್ನು ಮರಳಿ ಪಡೆಯುವುದು ವಾಡಿಕೆ. ಮೊದಲ ಪಂದ್ಯವನ್ನು ಸೋತ ಬಳಿಕವೇ ಅವರು ತಮ್ಮ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ
Image
43ನೇ ವಯಸ್ಸಿನಲ್ಲೂ ಧೋನಿಯ ಮಿಂಚಿನ ಸ್ಟಂಪಿಂಗ್; ಪೆವಿಲಿಯನ್ ಸೇರಿದ ಸೂರ್ಯ
Image
ಸೊನ್ನೆ ಸುತ್ತುವುದರಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್ ಶರ್ಮಾ
Image
ಮುಂಬೈ ವಿರುದ್ಧ 4 ವಿಕೆಟ್​ಗಳಿಂದ ಗೆದ್ದ ಚೆನ್ನೈ
Image
ತನ್ನದೇ ದಾಖಲೆ ಮುರಿಯುವುದನ್ನು ಮರೆತ ಹೈದರಾಬಾದ್‌

IPL 2025: ಧೋನಿ ನಿಂಗ್ ವಯಸ್ಸಾಯ್ತು ಎಂದವರಿಗೆ 0.12 ಸೆಕೆಂಡುಗಳಲ್ಲಿ ಉತ್ತರಿಸಿದ ಕ್ಯಾಪ್ಟನ್ ಕೂಲ್

ಮುಂಬೈ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ:

ಚೆನ್ನೈ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಿ ಗೌರವಾನ್ವಿತ ಸ್ಕೋರ್ ಗಳಿಸಲು ಪ್ರಯತ್ನಿಸಿತು, ಆದರೆ ಮಧ್ಯಮ ಕ್ರಮಾಂಕದ ವೈಫಲ್ಯ ಮತ್ತು ಚೆನ್ನೈ ಬೌಲರ್‌ಗಳ ಬಿಗಿಯಾದ ತಂತ್ರ ಸೂರ್ಯ ಪಡೆಗೆ ಹಿನ್ನಡೆಯಾಯಿತು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಈ ಅವಧಿಯಲ್ಲಿ, ನೂರ್ ಅಹ್ಮದ್ ಗರಿಷ್ಠ 4 ವಿಕೆಟ್‌ಗಳನ್ನು ಪಡೆದರು. ಮತ್ತೊಂದೆಡೆ, ರಚಿನ್ ರವೀಂದ್ರ ಅವರ ಅಜೇಯ 65 ರನ್‌ಗಳ ನೆರವಿನಿಂದ ಸಿಎಸ್‌ಕೆ 19.1 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಿತು. ನಾಯಕ ರುತುರಾಜ್ ಗಾಯಕ್ವಾಡ್ ಕೂಡ 26 ಎಸೆತಗಳಲ್ಲಿ 53 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 am, Mon, 24 March 25