AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs SRH: ಅತ್ಯಧಿಕ ಮೊತ್ತ ಕಲೆಹಾಕಿಯೂ ಸೋತ ಮುಂಬೈ ಇಂಡಿಯನ್ಸ್

MI vs SRH IPL 2026: ಐಪಿಎಲ್ 2026ರ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 244 ರನ್ ಗಳಿಸಿದರೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತು. ಸನ್‌ರೈಸರ್ಸ್ 8 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ಕಳೆದುಕೊಂಡು ಈ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ, ಮುಂಬೈ ವಿರುದ್ಧ ಅತಿದೊಡ್ಡ ರನ್ ಚೇಸ್ ದಾಖಲೆ ಮಾಡಿತು. ಇದು ಮುಂಬೈಗೆ 6ನೇ ಸೋಲು, ಸನ್‌ರೈಸರ್ಸ್‌ಗೆ 6ನೇ ಗೆಲುವು ತಂದುಕೊಟ್ಟಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

MI vs SRH: ಅತ್ಯಧಿಕ ಮೊತ್ತ ಕಲೆಹಾಕಿಯೂ ಸೋತ ಮುಂಬೈ ಇಂಡಿಯನ್ಸ್
Mi Vs Srh
ಪೃಥ್ವಿಶಂಕರ
|

Updated on:Apr 30, 2026 | 12:04 AM

Share

ಐಪಿಎಲ್ 2026 (IPL2026) ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (MI vs SRH) ನಡುವೆ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಈ ಅವೃತ್ತಿಯ ಅತ್ಯಧಿಕ ಮೊತ್ತ ದಾಖಲಿಸಿಯೂ ಹೀನಾಯವಾಗಿ ಸೋಲುಂಡಿತು. ಇದು ಈ ಆವೃತ್ತಿಯಲ್ಲಿ ಮುಂಬೈ ತಂಡದ 6ನೇ ಸೋಲಾದರೆ, ಇತ್ತ ಸನ್‌ರೈಸರ್ಸ್ 6ನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ 244 ರನ್​ಗಳ ಬೃಹತ್ ಮೊತ್ತ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. 244 ರನ್ ಗುರಿ ಬೆನ್ನಟ್ಟುವ ಮೂಲಕ ಸನ್‌ರೈಸರ್ಸ್, ಮುಂಬೈ ವಿರುದ್ಧ ಅತಿದೊಡ್ಡ ಗುರಿ ಬೆನ್ನಟ್ಟಿದ ತಂಡವೆಂಬ ದಾಖಲೆಯನ್ನು ಬರೆಯಿತು.

243 ರನ್ ಕಲೆಹಾಕಿದ ಮುಂಬೈ

ಮುಂಬೈ ಇಂಡಿಯನ್ಸ್ ತಂಡವು ತನ್ನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಇದೀಗ ಆ ಸೋಲುಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ರಿಯಾನ್ ರಿಕಲ್ಟನ್ ಅವರ ದಾಖಲೆಯ ಶತಕದಿಂದಾಗಿ 243 ರನ್ ಗಳಿಸಿತು. ಇದು ಐಪಿಎಲ್‌ನಲ್ಲಿ ರಿಕಲ್ಟನ್ ಅವರ ಮೊದಲ ಶತಕ ಮತ್ತು ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವಾಗಿತ್ತು. ಅವರಲ್ಲದೆ ಇಂದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿಲ್ ಜ್ಯಾಕ್ಸ್ ಕೂಡ 46 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಹಾರ್ದಿಕ್ ಪಾಂಡ್ಯ 31 ರನ್​ಗಳ ಕಾಣಿಕೆ ನೀಡಿದರು.

ಸನ್​ರೈಸರ್ಸ್​ಗೆ ಸ್ಫೋಟಕ ಆರಂಭ

ಈ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಸ್ಫೋಟಕ ಆರಂಭ ಪಡೆದುಕೊಂಡಿತು. ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ ರನ್ ಬರ ಎದುರಿಸುತ್ತಿದ್ದ ಟ್ರಾವಿಸ್ ಹೆಡ್‌ ಕೇವಲ 20 ಎಸೆತಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದರು. ಇದರ ಜೊತೆಗೆ ಅಭಿಷೇಕ್ ಶರ್ಮಾ ಅವರೊಂದಿಗೆ ತಂಡವನ್ನು ಕೇವಲ ಒಂಬತ್ತು ಓವರ್‌ಗಳಲ್ಲಿ 130 ರನ್‌ಗಳ ಗಡಿ ದಾಟಿಸಿದರು. ಈ ಹಂತದಲ್ಲಿ ಮುಂಬೈ ಆರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಮತ್ತೆ ಪಂದ್ಯವನ್ನು ರೋಚಕಗೊಳಿಸಿತು. ಆದರೆ ಹೆನ್ರಿಕ್ ಕ್ಲಾಸೆನ್ ಆ ಭರವಸೆಯನ್ನು ಹುಸಿಗೊಳಿಸಿದರು.

MI vs SRH IPL 2026 Highlights: ಮುಂಬೈ ವಿರುದ್ಧ 6 ವಿಕೆಟ್​​ಗಳಿಂದ ಗೆದ್ದ ಸನ್​ರೈಸರ್ಸ್​

ಬೇಡದ ದಾಖಲೆ  ಬರೆದ ಮುಂಬೈ

ಈ ಆವೃತ್ತಿಯ ಅತ್ಯಂತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕ್ಲಾಸೆನ್, ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಕ್ಲಾಸೆನ್, ಸಲೀಲ್ ಅರೋರಾ ಅವರೊಂದಿಗೆ ತಂಡವನ್ನು ಎಂಟು ಎಸೆತಗಳ ಮೊದಲೇ ಗುರಿ ತಲುಪಿಸಿದರು. ಈ ಮೂಲಕ ವಾಂಖೆಡೆಯಲ್ಲಿ ಅತ್ಯಧಿಕ ಸ್ಕೋರ್ (249) ಮತ್ತು ಅತ್ಯಧಿಕ ರನ್ ಚೇಸ್ ದಾಖಲೆಗಳನ್ನು ನಿರ್ಮಿಸಿದರು. ಇತ್ತ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಂಬೈ 200 ಕ್ಕೂ ಹೆಚ್ಚು ರನ್‌ಗಳ ಸ್ಕೋರ್ ಅನ್ನು ರಕ್ಷಿಸುವಲ್ಲಿ ವಿಫಲವಾದ ಬೇಡದ ದಾಖಲೆಯನ್ನು ಬರೆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:40 pm, Wed, 29 April 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ರೇವತಿ ನಕ್ಷತ್ರಕ್ಕೆ ಶನಿ ಎಂಟ್ರಿ!
ರೇವತಿ ನಕ್ಷತ್ರಕ್ಕೆ ಶನಿ ಎಂಟ್ರಿ!
ಇಂದು ಹನುಮನಿಗೆ ಬೆಲ್ಲದ ದೀಪ ಹಚ್ಚಿದರೆ ಈ ರಾಶಿಯವರಿಗೆ ಭರ್ಜರಿ ಅದೃಷ್ಟ!
ಇಂದು ಹನುಮನಿಗೆ ಬೆಲ್ಲದ ದೀಪ ಹಚ್ಚಿದರೆ ಈ ರಾಶಿಯವರಿಗೆ ಭರ್ಜರಿ ಅದೃಷ್ಟ!
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ