AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಭಾರತ ಫ್ಲಾಪ್; ನ್ಯೂಜಿಲೆಂಡ್‌ಗೆ 87 ರನ್‌ಗಳ ಗೆಲುವು

ನ್ಯೂಜಿಲೆಂಡ್ ತಂಡ 4ನೇ T20 ಪಂದ್ಯದಲ್ಲಿ ಭಾರತವನ್ನು 87 ರನ್‌ಗಳಿಂದ ಸೋಲಿಸಿತು. ಗ್ಲೆನ್ ಫಿಲಿಪ್ಸ್ (107) ಸ್ಫೋಟಕ ಶತಕ ಹಾಗೂ ಮೈಕೆಲ್ ಬ್ರೇಸ್‌ವೆಲ್ (65) ಬ್ಯಾಟಿಂಗ್‌ನಿಂದ ಕಿವೀಸ್ 259 ರನ್ ಕಲೆಹಾಕಿತು. ಜಾಕೋಬ್ ಡಫಿ 4 ವಿಕೆಟ್ ಪಡೆದು ಮಿಂಚಿದರು. ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳು ಸಂಪೂರ್ಣ ವಿಫಲವಾದವು, ಹೀಗಾಗಿ ಟೀಂ ಇಂಡಿಯಾ ಹೀನಾಯ ಸೋಲನುಭವಿಸಿತು.

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಭಾರತ ಫ್ಲಾಪ್; ನ್ಯೂಜಿಲೆಂಡ್‌ಗೆ 87 ರನ್‌ಗಳ ಗೆಲುವು
ಭಾರತ Vs ನ್ಯೂಜಿಲೆಂಡ್
ಪೃಥ್ವಿಶಂಕರ
|

Updated on:Oct 30, 2026 | 5:26 PM

Share

ಗ್ಲೆನ್ ಫಿಲಿಪ್ಸ್ ಹಾಗೂ ಮೈಕೆಲ್ ಬ್ರೇಸ್‌ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಜಾಕೋಬ್ ಡಫಿ ಅವರ ಮಾರಕ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಭಾರತ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ ಬರೋಬ್ಬರಿ 259 ರನ್ ಕಲೆಹಾಕಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ 172 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಕಿವೀಸ್ ಪಡೆ 87 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ನ್ಯೂಜಿಲೆಂಡ್ ಗೆಲುವಿನಲ್ಲಿ ಗ್ಲೆನ್ ಫಿಲಿಪ್ಸ್ ಪ್ರಮುಖ ಪಾತ್ರ ವಹಿಸಿದರು. ಕೇವಲ 49 ಎಸೆತಗಳಲ್ಲಿ 107 ರನ್ ಸಿಡಿಸಿ ಶತಕದ ಸಂಭ್ರಮ ಆಚರಿಸಿದರು. ಮತ್ತೊಂದೆಡೆ ಮೈಕೆಲ್ ಬ್ರೇಸ್‌ವೆಲ್ ಕೂಡ ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದರು. ಕೇವಲ 25 ಎಸೆತಗಳಲ್ಲಿ 65 ರನ್ ಚಚ್ಚಿದರು. ಈ ಇಬ್ಬರು ಬ್ಯಾಟರ್‌ಗಳು ಕೇವಲ 40 ಎಸೆತಗಳಲ್ಲಿ 115 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿದರು. ಇನ್ನು ಬೌಲಿಂಗ್‌ನಲ್ಲೂ ಮಿಂಚಿದ ಜಾಕೋಬ್ ಡಫಿ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಅವರ ಈ ಮಾರಕ ಬೌಲಿಂಗ್ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಭಾರತದ ಬ್ಯಾಟಿಂಗ್ ವಿಫಲ

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಟೀಂ ಇಂಡಿಯಾ ಈ ಪಂದ್ಯದಲ್ಲಿ ಸಂಪೂರ್ಣವಾಗಿ ಎಡವಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಬೇಗನೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ತಂಡಕ್ಕೆ ಮರಳಿದ್ದ ಇಶಾನ್ ಕಿಶನ್ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರು.

ಆರಂಭಿಕ ಆಘಾತದ ಬಳಿಕ ಅಭಿಷೇಕ್ ಶರ್ಮಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರು. ಆದರೆ ಪವರ್‌ಪ್ಲೇ ಮುಗಿಯುವ ಮೊದಲೇ ಇಬ್ಬರೂ ಪೆವಿಲಿಯನ್ ಸೇರಿದರು. ಮ್ಯಾಥ್ಯೂ ಫಿಶರ್ 27 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರು. ಇತ್ತ ಆಡಮ್ ಮಿಲ್ನೆ ನಾಯಕ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದರು. ಅಯ್ಯರ್ 11 ಎಸೆತಗಳಲ್ಲಿ 22 ರನ್ ಗಳಿಸಿ ನಿರ್ಗಮಿಸಿದರು.

ಮಧ್ಯಮ ಕ್ರಮಾಂಕದಲ್ಲೂ ಭಾರತದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಕ್ಷರ್ ಪಟೇಲ್ ಕೇವಲ 7 ರನ್ ಗಳಿಸಿ ಔಟಾದರು. ನಿತೀಶ್ ಕುಮಾರ್ ರೆಡ್ಡಿ 21 ರನ್ ಗಳಿಸಿ ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಮನ್ ಧೀರ್ ಅಬ್ಬರದ ಬ್ಯಾಟಿಂಗ್ ನಡೆಸುವ ಪ್ರಯತ್ನ ಮಾಡಿದರು. ಕೇವಲ 13 ಎಸೆತಗಳಲ್ಲಿ 28 ರನ್ ಸಿಡಿಸಿದ ಅವರು ಜಾಕೋಬ್ ಡಫಿ ಬೌಲಿಂಗ್‌ನಲ್ಲಿ ಔಟಾದರು. ಕೊನೆಯಲ್ಲಿ ಉಪನಾಯಕ ತಿಲಕ್ ವರ್ಮಾ 35 ರನ್ ಗಳಿಸಿ ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಬುಮ್ರಾ, ಭುವಿ ಹಿಂದಿಕ್ಕಿದ ಅರ್ಷದೀಪ್! ಟಿ20ಯಲ್ಲಿ ಐತಿಹಾಸಿಕ ಸಾಧನೆ

ಬೌಲರ್‌ಗಳ ದುಬಾರಿ ಬೌಲಿಂಗ್

ಬ್ಯಾಟರ್‌ಗಳು ವಿಫಲರಾಗುವ ಮುನ್ನವೇ ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟರ್‌ಗಳ ಮುಂದೆ ದುಬಾರಿಯಾಗಿದ್ದರು. ಟೀಂ ಇಂಡಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಕಿವೀಸ್ ಬ್ಯಾಟರ್‌ಗಳು 20 ಓವರ್‌ಗಳಲ್ಲಿ 259 ರನ್ ಕಲೆಹಾಕಿದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡ ಎದುರಾಳಿಗೆ ಬಿಟ್ಟುಕೊಟ್ಟ ಅತ್ಯಂತ ದೊಡ್ಡ ಮೊತ್ತ ಇದಾಗಿದೆ.

ಗ್ಲೆನ್ ಫಿಲಿಪ್ಸ್ ಅವರ ಸ್ಫೋಟಕ ಶತಕ ನ್ಯೂಜಿಲೆಂಡ್ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣವಾಯಿತು. ಅವರು 10 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 49 ಎಸೆತಗಳಲ್ಲಿ 107 ರನ್ ಸಿಡಿಸಿದರು. ಮೈಕೆಲ್ ಬ್ರೇಸ್‌ವೆಲ್ ಕೂಡ 6 ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಾಯದಿಂದ ಕೇವಲ 25 ಎಸೆತಗಳಲ್ಲಿ 65 ರನ್ ಚಚ್ಚಿದರು.

ಭಾರತದ ಪರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಮೂರು ಓವರ್‌ಗಳಲ್ಲಿ 43 ರನ್ ಬಿಟ್ಟುಕೊಟ್ಟರು. ನಿತೀಶ್ ಕುಮಾರ್ ರೆಡ್ಡಿ ನಾಲ್ಕು ಓವರ್‌ಗಳಲ್ಲಿ ಬರೋಬ್ಬರಿ 54 ರನ್ ನೀಡಿದರು. ಪ್ರಿನ್ಸ್ ಯಾದವ್ 49 ರನ್ ಹಾಗೂ ಮಯಾಂಕ್ ಯಾದವ್ 48 ರನ್ ಬಿಟ್ಟುಕೊಟ್ಟರು. ಅರ್ಷದೀಪ್ ಸಿಂಗ್ ನಾಲ್ಕು ಓವರ್‌ಗಳಲ್ಲಿ 38 ರನ್ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Fri, 30 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ
ಸ್ಟಿಂಗ್​​ ಪ್ರಕರಣ ಸಂಬಂಧ ಕುಮಾರಸ್ವಾಮಿ ದೆಹಲಿ ಮನೆ ಮಹಜರು?
ಸ್ಟಿಂಗ್​​ ಪ್ರಕರಣ ಸಂಬಂಧ ಕುಮಾರಸ್ವಾಮಿ ದೆಹಲಿ ಮನೆ ಮಹಜರು?
ಪಟಾಕಿ ಸಿಡಿಸಲು ಸಮಯ ನಿಗದಿ: ಮೀರಿದ್ರೆ ಸೂಕ್ತ ಕ್ರಮದ ಎಚ್ಚರಿಕೆ
ಪಟಾಕಿ ಸಿಡಿಸಲು ಸಮಯ ನಿಗದಿ: ಮೀರಿದ್ರೆ ಸೂಕ್ತ ಕ್ರಮದ ಎಚ್ಚರಿಕೆ
ಟಿವಿ9 ಎಕ್ಸ್​​ಪೋದಲ್ಲಿ ತಪಸ್ವಿನಿ-ಶ್ರೀರಾಮ್; ಪ್ರೇಮದ ಊರಲಿ ಸೆಲೆಬ್ರೇಷನ್
ಟಿವಿ9 ಎಕ್ಸ್​​ಪೋದಲ್ಲಿ ತಪಸ್ವಿನಿ-ಶ್ರೀರಾಮ್; ಪ್ರೇಮದ ಊರಲಿ ಸೆಲೆಬ್ರೇಷನ್
ಸಚಿವ ಯತೀಂದ್ರ ವಿರುದ್ಧ ಮೈಸೂರಲ್ಲಿ ಪೋಸ್ಟ್​​ ಕಾರ್ಡ್ ಅಭಿಯಾನ
ಸಚಿವ ಯತೀಂದ್ರ ವಿರುದ್ಧ ಮೈಸೂರಲ್ಲಿ ಪೋಸ್ಟ್​​ ಕಾರ್ಡ್ ಅಭಿಯಾನ
ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25, VAಯಲ್ಲಿ 151 ಅಂಕ: ಶಂಕರ ಸ್ಪಷ್ಟನೆ
ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25, VAಯಲ್ಲಿ 151 ಅಂಕ: ಶಂಕರ ಸ್ಪಷ್ಟನೆ