AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ನಡೆಯುವ ಟಿ20 ಲೀಗ್​ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್

Rahul Dravid Co-Owner of European T20 League Team: ಟಿ20 ವಿಶ್ವಕಪ್ ನಂತರ ವಿಶ್ರಾಂತಿಯಲ್ಲಿದ್ದ ರಾಹುಲ್ ದ್ರಾವಿಡ್ ಮತ್ತೆ ಕ್ರಿಕೆಟ್‌ಗೆ ಮರಳಿದ್ದಾರೆ. ಅವರು ಐರ್ಲೆಂಡ್‌ನಲ್ಲಿ ನಡೆಯಲಿರುವ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಡಬ್ಲಿನ್ ಗಾರ್ಡಿಯನ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ. ಈ ತಂಡಕ್ಕೆ ಭಾರತದ ಅನುಭವಿ ಆಫ್-ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ದ್ರಾವಿಡ್ ತಮ್ಮ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ವಿದೇಶದಲ್ಲಿ ನಡೆಯುವ ಟಿ20 ಲೀಗ್​ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್
Rahul Dravid
ಪೃಥ್ವಿಶಂಕರ
|

Updated on: May 11, 2026 | 8:59 PM

Share

ತಮ್ಮ ಕೋಚಿಂಗ್​ ಅಡಿಯಲ್ಲಿ ಟೀಂ ಇಂಡಿಯಾವನ್ನು 2024 ರ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ್ದ ಕನ್ನಡಿಗ ರಾಹುಲ್​ ದ್ರಾವಿಡ್ (Rahul Dravid) ಅದಾದ ಬಳಿಕ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದಾದ ನಂತರ ಐಪಿಎಲ್ (IPL) ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ದ್ರಾವಿಡ್ ಆ ಹುದ್ದೆಗೂ ವಿದಾಯ ಹೇಳಿದ್ದರು. ಪ್ರಸ್ತುತ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿರುವ ದ್ರಾವಿಡ್, ತಮ್ಮ ಮಕ್ಕಳಿಗೆ ಕ್ರಿಕೆಟ್ ಪಾಠ ಹೇಳಿಕೊಡುತ್ತಿದ್ದಾರೆ ಎಂಬ ಸುದ್ದಿ ಇದೆ. ಇದೆಲ್ಲದರ ನಡುವೆ ಮತ್ತೆ ಕ್ರಿಕೆಟ್ ಲೋಕದತ್ತ ವಾಲಿರುವ ಗೋಡೆ, ವಿದೇಶದಲ್ಲಿ ನಡೆಯಲ್ಲಿರುವ ಟಿ20 ಲೀಗ್​ನಲ್ಲಿ ತಂಡವೊಂದಕ್ಕೆ ಸಹ ಮಾಲೀಕರಾಗಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ರಾಹುಲ್ ಮಾಲೀಕತ್ವದ ತಂಡಕ್ಕೆ ಆರ್. ಅಶ್ವಿನ್ ನಾಯಕನಾಗಿ ಆಯ್ಕೆಯಾಗಿದ್ದಾರೆ.

ವಾಸ್ತವವಾಗಿ ರಾಹುಲ್ ದ್ರಾವಿಡ್ ಐರ್ಲೆಂಡ್‌ನಲ್ಲಿ ನಡೆಯಲಿರುವ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್​ನಲ್ಲಿ ತಂಡವನ್ನು ಖರೀದಿಸಿದ್ದಾರೆ. ರಾಹುಲ್ ದ್ರಾವಿಡ್ ಡಬ್ಲಿನ್ ಗಾರ್ಡಿಯನ್ಸ್‌ ತಂಡದ ಸಹ-ಮಾಲೀಕರಾಗಿದ್ದು, ಈ ತಂಡದ ಒಡೆತನ ಭಾರತೀಯ ಕಂಪನಿಯ ಕೈಯಲ್ಲಿದೆ. ದ್ರಾವಿಡ್ ಒಡೆತನದ ಈ ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ಭಾರತದ ಮಾಜಿ ಆಫ್-ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಈ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

ರಾಹುಲ್ ದ್ರಾವಿಡ್ ಪ್ರತಿಕ್ರಿಯೆ

ರಾಹುಲ್ ದ್ರಾವಿಡ್ ಭಾರತ ಪರ 164 ಟೆಸ್ಟ್ ಪಂದ್ಯಗಳು ಮತ್ತು 344 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಮಾತ್ರವಲ್ಲದೆ 2021 ರಿಂದ 2024 ರವರೆಗೆ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ಕ್ರಿಕೆಟ್​ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿರುವ ದ್ರಾವಿಡ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್​ನಲ್ಲಿ ಭಾಗಿಯಾಗಿರುವುದು ನಿಜಕ್ಕೂ ಅದ್ಭುತವಾಗಿದೆ. ಯುರೋಪ್‌ನಲ್ಲಿ ಕ್ರಿಕೆಟ್‌ನ ಮೇಲಿನ ಉತ್ಸಾಹವನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಆಟಗಾರರು ಆಟವನ್ನು ಆಡುವ ಉತ್ಸಾಹ ಅದ್ಭುತವಾಗಿದೆ ಎಂದಿದ್ದಾರೆ.

ದ್ರಾವಿಡ್ ತಂಡಕ್ಕೆ ಅಶ್ವಿನ್ ನಾಯಕ

ಭಾರತ ಕ್ರಿಕೆಟ್​ನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವ ರವಿಚಂದ್ರನ್ ಅಶ್ವಿನ್ ಗಾರ್ಡಿಯನ್ಸ್ ತಂಡದ ನಾಯಕರಾಗಿರುತ್ತಾರೆ. ಅಶ್ವಿನ್ ಐಪಿಎಲ್‌ನಿಂದಲೂ ನಿವೃತ್ತರಾಗಿರುವುದರಿಂದ ಅವರಿಗೆ ಪ್ರಪಂಚದಾದ್ಯಂತದ ಲೀಗ್‌ಗಳಲ್ಲಿ ಆಡಲು ಅವಕಾಶವಿದೆ. ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಗಳ ಸಹಯೋಗದೊಂದಿಗೆ ಇಟಿಪಿಎಲ್ ಅನ್ನು ಆಯೋಜಿಸಲಾಗುತ್ತಿದೆ.

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ

ಲೀಗ್‌ನಲ್ಲಿ ಆಮ್ಸ್ಟರ್‌ಡ್ಯಾಮ್, ರೋಟರ್‌ಡ್ಯಾಮ್, ಬೆಲ್‌ಫಾಸ್ಟ್, ಡಬ್ಲಿನ್, ಗ್ಲ್ಯಾಸ್ಗೋ ಮತ್ತು ಎಡಿನ್‌ಬರ್ಗ್‌ ಎಂಬ ಆರು ತಂಡಗಳು ಸೇರಿವೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಈ ಲೀಗ್​ನ ಸೃಷ್ಟಿಕರ್ತರಾಗಿದ್ದು, ಅವರು ಭಾರತೀಯ ಖಾಸಗಿ ಕಂಪನಿಯಾದ ರೂಲ್ಸ್ ಸ್ಪೋರ್ಟ್ ಟೆಕ್ ಸಹಯೋಗದೊಂದಿಗೆ ಈ ಲೀಗ್ ಅನ್ನು ನಡೆಸಲಿದ್ದಾರೆ. ಪಂದ್ಯಾವಳಿಯು ಆಗಸ್ಟ್ 26 ರಿಂದ ಸೆಪ್ಟೆಂಬರ್ 20 ರವರೆಗೆ ನಡೆಯಲಿದ್ದು, ಮೊದಲ ಆವೃತ್ತಿಯ ಪಂದ್ಯಗಳು ದಿ ಹೇಗ್ ಮತ್ತು ಡಬ್ಲಿನ್‌ನಲ್ಲಿ ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ