6,6,6,6,6,6,6: ರಾಹುಲ್ ಸಿಡಿಲಬ್ಬರ, ಸ್ಫೋಟಕ ಅರ್ಧಶತಕ
ಹಾಂಗ್ ಕಾಂಗ್ನಲ್ಲಿ ನಡೆಯುತ್ತಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಹ್ಯಾಟ್ರಿಕ್ ಸೋಲುಂಡಿದೆ. ಮೊದಲ ಮ್ಯಾಚ್ನಲ್ಲಿ ಪಾಕಿಸ್ತಾನ್ ವಿರುದ್ಧ ಸೋತಿದ್ದ ಟೀಮ್ ಇಂಡಿಯಾ ಇಂದು ಯುಎಇ ವಿರುದ್ಧ 6 ವಿಕೆಟ್ಗಳಿಂದ ಪರಾಜಯಗೊಂಡಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ತಂಡ ಕೂಡ ರೋಚಕ ಜಯ ಸಾಧಿಸಿದೆ.

ಹಾಂಗ್ ಕಾಂಗ್ನಲ್ಲಿ ನಡೆಯುತ್ತಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ದಾಂಡಿಗ ರಾಹುಲ್ ತ್ರಿಪಾಠಿ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್ ಕೇವಲ 12 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
ಮೌಂಗ್ ಕಾಕ್ನ ಮಿಷನ್ ರೋಡ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಕೃನಾಲ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಮಾರ್ಟಿನ್ ಅ್ಯಂಡರ್ಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಮೊದಲ ಓವರ್ನಿಂದಲೇ ಟೀಮ್ ಇಂಡಿಯಾ ಬೌಲರ್ಗಳನ್ನು ದಂಡಿಸಿದ ಮಾರ್ಟಿನ್ ಕೇವಲ 13 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ 51 ರನ್ ಚಚ್ಚಿದರು. ಇನ್ನು ಎಡ್ ಬರ್ನಾಡ್ 14 ಎಸೆತಗಳಲ್ಲಿ 35 ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ ತಂಡ ನಿಗದಿತ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್ ಕಲೆಹಾಕಿತು.
ರಾಹುಲ್ ಸಿಡಿಲಬ್ಬರ:
125 ರನ್ಗಳ ಕಠಿಣ ಗುರಿ ಪಡೆದ ಟೀಮ್ ಇಂಡಿಯಾ ಪರ ರಾಹುಲ್ ತ್ರಿಪಾಠಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮತ್ತೊಂದೆಡೆ ಆರಂಭಿಕನಾಗಿ ಕಣಕ್ಕಿಳಿದ ನಿತೀಶ್ ರಾಣಾ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ತ್ರಿಪಾಠಿ ಸಿಕ್ಸ್-ಫೋರ್ಗಳ ಸುರಿಮಳೆಯೊಂದಿಗೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಕೇವಲ 14 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 56 ರನ್ ಬಾರಿಸಿದರು.
ರಾಹುಲ್ ತ್ರಿಪಾಠಿಗೆ ಉತ್ತಮ ಸಾಥ್ ನೀಡಿದ ಕೃನಾಲ್ ಪಾಂಡ್ಯ 7 ಎಸೆತಗಳಲ್ಲಿ 28 ರನ್ ಚಚ್ಚಿದರು. ಇದಾಗ್ಯೂ ಟೀಮ್ ಇಂಡಿಯಾಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ನಲ್ಲಿ 18 ರನ್ಗಳ ಗುರಿ ಪಡೆದ ಭಾರತ ತಂಡವು 6 ಎಸೆತಗಳಲ್ಲಿ 14 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಮ್ ಇಂಡಿಯಾ 3 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನೊಂದಿಗೆ ಟೀಮ್ ಇಂಡಿಯಾ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಫೈನಲ್ ರೇಸ್ನಿಂದ ಹೊರಬಿದ್ದಿದೆ.
ಭಾರತ ತಂಡ: ಕೃನಾಲ್ ಪಾಂಡ್ಯ (ನಾಯಕ), ರಾಹುಲ್ ತ್ರಿಪಾಠಿ (ವಿಕೆಟ್ ಕೀಪರ್) , ನಿತೀಶ್ ರಾಣಾ , ಶಶಾಂಕ್ ಸಿಂಗ್ , ರಾಹುಲ್ ತೆವಾಟಿಯಾ , ಟಿ ನಟರಾಜನ್, ಕುಲ್ವಂತ್ ಖೇಜ್ರೋಲಿಯಾ.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಕನ್ನಡಿಗ ಔಟ್, ಕಾಶ್ಮೀರಿ ವೇಗಿ ಇನ್!
ಇಂಗ್ಲೆಂಡ್ ತಂಡ: ಮಾರ್ಟಿನ್ ಅ್ಯಂಡರ್ಸನ್ , ಲ್ಯೂಕ್ ಹಾಲ್ಮನ್ , ಜ್ಯಾಕ್ ಕಾರ್ಸನ್ , ಫಿನ್ ಹಡ್ಸನ್-ಪ್ರೆಂಟಿಸ್ , ನಾಥನ್ ಗಿಲ್ಕ್ರಿಸ್ಟ್ , ಜಾನ್ ಸಿಂಪ್ಸನ್ (ನಾಯಕ), ಡಾನ್ ಮೌಸ್ಲಿ , ಎಡ್ ಬರ್ನಾರ್ಡ್.




