AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH vs RR: ರಾಜಸ್ಥಾನ್ ವಿರುದ್ಧ ಸೋತು ಐಪಿಎಲ್​ನಿಂದ ಹೊರಬಿದ್ದ ಸನ್‌ರೈಸರ್ಸ್

IPL 2026 Eliminator: ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಭರ್ಜರಿ ಜಯ ಸಾಧಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿಯ ಅದ್ಭುತ ಬ್ಯಾಟಿಂಗ್‌ನಿಂದ ರಾಜಸ್ಥಾನ್ 245 ರನ್‌ಗಳ ಬೃಹತ್ ಗುರಿ ನೀಡಿತು. ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಬ್ಯಾಟಿಂಗ್ ವೈಫಲ್ಯದಿಂದ ಪಂದ್ಯದಲ್ಲಿ ಸೋತು ಐಪಿಎಲ್ 2026 ಫೈನಲ್ ರೇಸ್​ನಿಂದ ಹೊರಬಿದ್ದಿತು. ರಾಜಸ್ಥಾನ್ ಈಗ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

SRH vs RR: ರಾಜಸ್ಥಾನ್ ವಿರುದ್ಧ ಸೋತು ಐಪಿಎಲ್​ನಿಂದ ಹೊರಬಿದ್ದ ಸನ್‌ರೈಸರ್ಸ್
SrhImage Credit source: PTI
ಪೃಥ್ವಿಶಂಕರ
| Edited By: |

Updated on:May 29, 2026 | 1:59 PM

Share

ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ (SRH vs RR) ನಡುವೆ ನಡೆಯಿತು. ಈ ಪಂದ್ಯದಲ್ಲಿ ಸೋತ ತಂಡ ಐಪಿಎಲ್​ನಿಂದ ಹೊರಬೀಳುವುದರಿಂದ ಉಭಯ ತಂಡಗಳು ಗೆಲುವಿಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದವು. ಆದಾಗ್ಯೂ 15 ವರ್ಷದ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್‌ ಪ್ರವಾಹಕ್ಕೆ ಕೊಚ್ಚಿ ಹೋದ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 47 ರನ್​ಗಳಿಂದ ಸೋತು ಫೈನಲ್​ ರೇಸ್​ನಿಂದ ಹೊರಬಿದ್ದಿತು. ಇತ್ತ ಸನ್‌ರೈಸರ್ಸ್ ವಿರುದ್ಧ ಗೆದ್ದ ರಾಜಸ್ಥಾನ್, ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 244 ರನ್​ಗಳ ಬೃಹತ್ ಗುರಿ ದಾಖಲಿಸಿತು. ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡ ಬ್ಯಾಟಿಂಗ್‌ ವಿಭಾಗದ ವೈಫಲ್ಯದಿಂದ ಹೀನಾಯವಾಗಿ ಸೋಲನುಭವಿಸಿತು.

ವೈಭವ್ ಸುನಾಮಿಗೆ ಸನ್​ರೈಸರ್ಸ್​ ತತ್ತರ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸುತ್ತಾರೆ ಎಂದು ತೋರುತ್ತಿತ್ತು. ಆದರೆ ಶತಕದಂಚಿನಲ್ಲಿ ಎಡವಿದ ವೈಭವ್ 97 ರನ್‌ಗಳಿಗೆ ತಮ್ಮ ವಿಕೆಟ್ ಕಳೆದುಕೊಂಡರು. ವೈಭವ್ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ಧ್ರುವ್ ಜುರೆಲ್ ಕೇವಲ 21 ಎಸೆತಗಳಲ್ಲಿ 50 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು.

243 ರನ್ ಕಲೆಹಾಕಿದ ರಾಜಸ್ಥಾನ್

ನಾಯಕ ರಿಯಾನ್ ಪರಾಗ್ ಕೂಡ 12 ಎಸೆತಗಳಲ್ಲಿ 2 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳೊಂದಿಗೆ 26 ರನ್ ಗಳಿಸಿದರು. ಈ ಅತ್ಯುತ್ತಮ ಇನ್ನಿಂಗ್ಸ್‌ಗಳ ಹೊರತಾಗಿಯೂ, ರಾಜಸ್ಥಾನ್ 20 ಓವರ್‌ಗಳಲ್ಲಿ 243 ರನ್‌ಗಳಿಸಲಷ್ಟೇ ಶಕ್ತವಾಯಿತು. ಇತ್ತ ಸನ್‌ರೈಸರ್ಸ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಪ್ರಫುಲ್ ಹಿಂಗೆ 3 ವಿಕೆಟ್ ಪಡೆದರೆ, ನಿತೀಶ್ ಹಾಗೂ ಶಿವಾಂಗ್ ತಲಾ 1 ವಿಕೆಟ್ ಪಡೆದರು.

ಸನ್​ರೈಸರ್ಸ್​ಗೆ ಆರಂಭಿಕ ಆಘಾತ

ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಆಸೆಗೆ ಜೋಫ್ರಾ ಆರ್ಚರ್ ಮೊದಲ ಓವರ್​ನಲ್ಲೇ ಬ್ರೇಕ್ ಹಾಕಿದರು. ಆರ್ಚರ್ ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆ ಬಳಿಕ ಬಂದ ಇಶಾನ್ ಕಿಶನ್ 3 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ ಹೈದರಾಬಾದ್ ತಂಡದ ಇನ್ನಿಂಗ್ಸ್​ಗೆ ಚೇತರಿಕೆ ನೀಡಲು ಪ್ರಯತ್ನಿಸಿದರು. ಆದರೆ ಆರ್ಚರ್, ಅವರನ್ನೂ ಕೂಡ 33 ರನ್​ಗಳಿಗೆ ಔಟ್ ಮಾಡಿದರು. ಆ ನಂತರ ಆರ್ಚರ್, ಟ್ರಾವಿಸ್ ಹೆಡ್ ಅವರನ್ನು ಬಲಿಪಡೆದರು.

196 ರನ್​ಗಳಿಗೆ ಸನ್​ರೈಸರ್ಸ್​ ಆಲೌಟ್

ಆ ಬಳಿಕ ದಾಳಿಗಿಳಿದ ನಾಂಡ್ರೆ ಬರ್ಗರ್, ಸ್ಮರಣ್ ರವಿಚಂದ್ರನ್ ಅವರ ವಿಕೆಟ್ ಪಡೆದರೆ, ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಯಶ್ ರಾಜ್ ಪುಂಜಾ ರಾಜಸ್ಥಾನದ ಗೆಲುವನ್ನು ಖಚಿತಪಡಿಸಿದರು. ಮಧ್ಯಮ ಕ್ರಮಾಂಕದಲ್ಲಿ, ನಿತೀಶ್ ಕುಮಾರ್ ರೆಡ್ಡಿ ಮತ್ತು ಸಲೀಲ್ ಅರೋರಾ ಕೆಲವು ಉತ್ತಮ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು, ಆದರೆ ರವೀಂದ್ರ ಜಡೇಜಾ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿ ಹೈದರಾಬಾದ್ ತಂಡದ ಭರವಸೆಯನ್ನು ಹುಸಿಗೊಳಿಸಿದರು.

Published On - 11:24 pm, Wed, 27 May 26

Follow Us
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ