AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ಮಾದರಿಯ ಕ್ಯಾಚ್ ಅಂದು ನಾಟ್​​ ಔಟ್, ಇಂದು ಔಟ್; ಇದೆಂತಹ ನ್ಯಾಯ?

ಗುಜರಾತ್ ಟೈಟನ್ಸ್ vs ಆರ್‌ಸಿಬಿ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರ ವಿವಾದಿತ ಕ್ಯಾಚ್ ಚರ್ಚೆಯ ಕೇಂದ್ರಬಿಂದುವಾಗಿದೆ. ಇದೇ ರೀತಿಯ ಮಿಚೆಲ್ ಸ್ಟಾರ್ಕ್ ಕ್ಯಾಚ್ ಅನ್ನು ಹಿಂದೆ ನಾಟೌಟ್ ಎಂದು ಘೋಷಿಸಲಾಗಿತ್ತು. ಆದರೆ, ಈಗ ಪಟಿದಾರ್‌ಗೆ ಔಟ್ ತೀರ್ಪು ನೀಡಲಾಗಿದೆ. ಕ್ರಿಕೆಟ್ ನಿಯಮ 33.2.1 ಅನ್ವಯ, ಚೆಂಡು ಮತ್ತು ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ ಅದು ಔಟ್. ಅಂಪೈರ್‌ಗಳ ವಿಭಿನ್ನ ತೀರ್ಪುಗಳು ಗೊಂದಲ ಮೂಡಿಸಿವೆ.

ಇದೇ ಮಾದರಿಯ ಕ್ಯಾಚ್ ಅಂದು ನಾಟ್​​ ಔಟ್, ಇಂದು ಔಟ್; ಇದೆಂತಹ ನ್ಯಾಯ?
ವಿವಾದತ್ಮಕ ಕ್ಯಾಚ್
ರಾಜೇಶ್ ದುಗ್ಗುಮನೆ
|

Updated on:May 01, 2026 | 11:13 AM

Share

ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್​​​ಸಿಬಿ ಕ್ಯಾಪ್ಟನ್ ರಜತ್ ಪಟಿದಾರ್ ಅವರ ಕ್ಯಾಚ್ ಈಗ ಚರ್ಚೆಯ ಕೇಂದ್ರ ಬಿಂದು ಆಗಿದೆ. ಕೆಲವರು ಇದನ್ನು ನಾಟೌಟ್​ ಎಂದರೆ ಇನ್ನೂ ಕೆಲವರು ಔಟ್ ಎನ್ನುತ್ತಿದ್ದಾರೆ. ಹೀಗಿರುವಾಗಲೇ ಈ ಮೊದಲು ಮಿಚೆಲ್ ಸ್ಟಾರ್ಕ್​ ಅವರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇದೇ ಮಾದರಿಯ ಕ್ಯಾಚ್ ಹಿಡಿದಿದ್ದರು. ಇದನ್ನು ನಾಟೌಟ್ ಎಂದು ಕೊಡಲಾಗಿತ್ತು. ಆದರೆ, ಇದೇ ಮಾದರಿಯ ಕ್ಯಾಚ್​​ ಅನ್ನು ಔಟ್ ಎಂದು ಕೊಡಲಾಗಿದೆ.

ರಜತ್ ಪಟಿದಾರ್ ಅವರು ಸಿಕ್ಸ್ ಹೊಡೆಯುವ ಪ್ರಯತ್ನ ಮಾಡಿದರು. ಆದರೆ, ಬಾಲ್ ಬೌಂಡರಿ ಗಡಿ ದಾಟಲು ವಿಫಲವಾಯಿತು. ಈ ವೇಳೆ ಓಡೋಡಿ ಬಂದ ಹೋಲ್ಡರ್ ಅವರು, ಕ್ಯಾಚ್​​​ಅನ್ನು ಹಿಡಿದೇ ಬಿಟ್ಟರು. ಬಾಲ್ ಅವರ ಕೈಯಲ್ಲಿ ಕುಳಿತಿತ್ತು ನಿಜ, ಆದರೆ, ನಂತರ ಬಾಲ್ ನೆಲಕ್ಕೆ ತಿಕ್ಕಿತ್ತು. ಆದಾಗ್ಯೂ ಥರ್ಡ್​ ಅಂಪೈರ್ ಔಟ್ ಎಂದರು ಕೊಟ್ಟರು.

ಮಿಚೆಲ್ ಸ್ಟಾರ್ಕ್ 2023ರ ಆಶಸ್ ಸರಣಿಯಲ್ಲಿ ಬೆನ್ ಡಕೆಟ್ ಅವರ ಕ್ಯಾಚ್ ಹಿಡಿದಿದ್ದರು. ಅಲ್ಲಿ ಸ್ಟಾರ್ಕ್ ಚೆಂಡನ್ನು ಹಿಡಿದ ನಂತರ ನೆಲಕ್ಕೆ ಉಜ್ಜುತ್ತಾ ಹೋದರು. ಆದರೆ ಅವರು ಚೆಂಡಿನ ಮೇಲೆ ‘ಸಂಪೂರ್ಣ ನಿಯಂತ್ರಣ’ (Complete Control) ಹೊಂದಿಲ್ಲ ಎಂದು ನಿರ್ಧರಿಸಿ ಅಂಪೈರ್ ಅದನ್ನು ‘ನಾಟ್ ಔಟ್’ ನೀಡಿದ್ದರು. ಈಗ ಅದನ್ನು ಔಟ್ ಎಂದು ಕೊಡಲಾಗಿದೆ. ಈ ಬಗ್ಗೆ ಒಬ್ಬರು ಒಂದೊಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ.

ಕ್ರಿಕೆಟ್‌ನಲ್ಲಿ ಇದು ಸದಾ ವಿವಾದಕ್ಕೆ ಗುರಿಯಾಗುವ ವಿಷಯ. ಅಂಪೈರ್ ದೃಷ್ಟಿಯಲ್ಲಿ ಫೀಲ್ಡರ್ ಚೆಂಡನ್ನು ಹಿಡಿದು ‘ನಿಯಂತ್ರಣ’ ಸಾಧಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಜಡ್ಜ್‌ಮೆಂಟ್ ಮೇಲೆ ಇದು ನಿರ್ಧಾರವಾಗುತ್ತದೆ. ಸ್ಟಾರ್ಕ್ ಪ್ರಕರಣದಲ್ಲಿ ಅವರು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಮೊದಲೇ ನೆಲಕ್ಕೆ ತಗುಲಿತ್ತು ಎಂಬುದು ಅಂಪೈರ್ ವಾದವಾಗಿತ್ತು.

ನಿಯಮ ಏನು ಹೇಳುತ್ತದೆ?

ಎಂಸಿಸಿ (ಮೆರಿಲಿಬೋನ್ ಕ್ರಿಕೆಟ್ ಕ್ಲಬ್) ನಿಯಮ 33.2.1 ರ ಪ್ರಕಾರ, ಒಬ್ಬ ಫೀಲ್ಡರ್ ಕ್ಯಾಚ್ ಹಿಡಿದಾಗ ಆತ ತನ್ನ ಶರೀರದ ಚಲನೆ ಮತ್ತು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ, ಆನಂತರ ಚೆಂಡು ನೆಲಕ್ಕೆ ತಗುಲಿದರೂ ಅದನ್ನು ‘ಔಟ್’ ಎಂದೇ ಪರಿಗಣಿಸಲಾಗುತ್ತದೆ ಎಂದಿದೆ. ಈ ನಿಯಮದ ಅಡಿ ಔಟ್ ಕೊಟ್ಟಿರಬಹುದು ಎನ್ನಲಾಗಿದೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ..

Published On - 7:47 am, Fri, 1 May 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ