AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​ನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದವ ಈಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿಗೆ ಅಧ್ಯಕ್ಷ

Aryaman Vikram Birla RCB chairman: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದಾಖಲೆಯ ₹16,600 ಕೋಟಿಗೆ ಹೊಸ ಮಾಲೀಕರ ಪಾಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಇದನ್ನು ಸ್ವಾಧೀನಪಡಿಸಿಕೊಂಡಿದೆ. ಅಚ್ಚರಿ ಎಂದರೆ, ಹಿಂದೆ ಕೇವಲ ₹30 ಲಕ್ಷಕ್ಕೆ ಐಪಿಎಲ್ ಹರಾಜಾಗಿದ್ದ ಕುಮಾರ್ ಮಂಗಲಂ ಬಿರ್ಲಾ ಪುತ್ರ ಆರ್ಯಮಾನ್ ವಿಕ್ರಮ್ ಬಿರ್ಲಾ, ಇದೀಗ ಆರ್‌ಸಿಬಿಯ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಇದು ಅತಿ ದೊಡ್ಡ ಮಾರಾಟವಾಗಿದೆ.

ಐಪಿಎಲ್​ನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದವ ಈಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿಗೆ ಅಧ್ಯಕ್ಷ
Aryaman Vikram Birla
ಪೃಥ್ವಿಶಂಕರ
|

Updated on:Mar 25, 2026 | 3:57 PM

Share

2026 ರ ಐಪಿಎಲ್ (IPL 2026) ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಹೊಸ ಮಾಲೀಕರ ಕೈಸೇರಿದೆ. 2008 ರಿಂದ ಐಪಿಎಲ್‌ನಲ್ಲಿ ಆಡುತ್ತ ಬಂದಿರುವ ಆರ್​ಸಿಬಿ ಇದುವರೆಗೆ ಒಮ್ಮೆ ಮಾತ್ರ ಚಾಂಪಿಯನ್ ಆಗಿದೆ, ಅದು ಕಳೆದ ಆವೃತ್ತಿಯಲ್ಲಿ. ಅಂದರೆ ಸತತ 18 ವರ್ಷಗಳ ಕಾಯುವಿಕೆಯ ಬಳಿಕ ಏಕೈಕ ಟ್ರೋಫಿ ಗೆದ್ದಿರುವ ಆರ್​ಸಿಬಿ, ಇದೀಗ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ ಒಂದು ಕಾಲದಲ್ಲಿ ಇದೇ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿ ಕೇವಲ 30 ಲಕ್ಷ ರೂ. ಮೂಲ ಬೆಲೆಗೆ ಮಾರಾಟವಾಗಿದ್ದ ಆಟಗಾರನೊಬ್ಬ ಇದೀಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿ ತಂಡಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ.

4 ಕಂಪನಿಗಳ ಪಾಲಾದ ಆರ್​ಸಿಬಿ

ಮೇಲೆ ಹೇಳಿದಂತೆ ಕಳೆದ ವರ್ಷ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾರಾಟದ ಬಗ್ಗೆಗಿನ ಸುದ್ದಿ ಕಳೆದ ವರ್ಷವೇ ಹೊರಬಿದ್ದಿತ್ತು. ಅದರಂತೆ ಮಾರ್ಚ್​ 24, 2026 ರಂದು ಆರ್​ಸಿಬಿ ಅಧಿಕೃತವಾಗಿ ಹೊಸ ಮಾಲೀಕರ ಪಾಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ಜಂಟಿಯಾಗಿ 16,600 ಕೋಟಿಗೆ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿವೆ.

ಆರ್‌ಸಿಬಿಯ ಹೊಸ ಅಧ್ಯಕ್ಷ ಯಾರು?

ಆದರೆ ಈ ನಾಲ್ಕು ಕಂಪನಿಗಳಲ್ಲಿ ಯಾವ ತಂಡ ಆರ್​ಸಿಬಿಯಲ್ಲಿ ಹೆಚ್ಚಿನ ಪಾಲು ಹೊಂದಿದೆ? ಅಥವಾ ಈ ತಂಡದಲ್ಲಿ 4 ಕಂಪನಿಗಳ ಪಾಲು ಎಷ್ಟೇಷ್ಟು ಎಂಬುದು ಇನ್ನು ಖಚಿತವಾಗಿಲ್ಲ. ಆದಾಗ್ಯೂ ಆದಿತ್ಯ ಬಿರ್ಲಾ ಗ್ರೂಪ್ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರನ್ನು ಆರ್‌ಸಿಬಿಯ ಹೊಸ ಅಧ್ಯಕ್ಷನಾಗಿ ಘೋಷಿಸಲಾಗಿದೆ. ಅಷ್ಟಕ್ಕೂ ಈ ಆರ್ಯಮಾನ್ ವಿಕ್ರಮ್ ಬಿರ್ಲಾ ಯಾರು ಎಂಬುದನ್ನು ನೋಡುವುದಾದರೆ.. ಬಿರ್ಲಾ ಗ್ರೂಪ್‌ನ ಮಾಲೀಕರಾದ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ. ಕೇವಲ 28 ವರ್ಷ ವಯಸ್ಸಿನಲ್ಲಿಯೇ ಐಪಿಎಲ್‌ನ ಅತ್ಯಂತ ದುಬಾರಿ ತಂಡದ ಮಾಲೀಕರಾಗಿರುವ ಆರ್ಯಮಾನ್ ವಿಕ್ರಮ್ ಬಿರ್ಲಾ, ಈ ಹಿಂದೆ ಇದೇ ಐಪಿಎಲ್‌ನಲ್ಲಿ ತಂಡವೊಂದರ ಸದಸ್ಯರಾಗಿದ್ದರು. ಆದಾಗ್ಯೂ ಆರ್ಯಮಾನ್​ಗೆ ಆಟಗಾರನಾಗಿ ಐಪಿಎಲ್​ಗೆ ಪಾದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ. ಅಂದರೆ ಆರ್ಯಮಾನ್ ಹರಾಜಿನಲ್ಲಿ ಖರೀದಿಯಾದರೂ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ.

ಐಪಿಎಲ್​ನಲ್ಲಿ 30 ಲಕ್ಷಕ್ಕೆ ಹರಾಜು

ಆರ್ಯಮಾನ್ ವಿಕ್ರಮ್ ಬಿರ್ಲಾ ಉದ್ಯಮಿಯಾಗಿ ಹೆಸರು ಮಾಡುವುದಕ್ಕೂ ಮೊದಲು ಒಬ್ಬ ಕ್ರಿಕೆಟಿಗರಾಗಿದ್ದರು. ಮಧ್ಯಪ್ರದೇಶದ ಪರ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿರುವ ಅವರು 13 ಪಂದ್ಯಗಳಲ್ಲಿ 450 ರನ್ ಕಲೆಹಾಕಿದ್ದಾರೆ. ಇದಾದ ನಂತರ 2018 ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ, ಆರ್ಯಮಾನ್ ಅವರನ್ನು 30 ಲಕ್ಷಕ್ಕೆ ಖರೀದಿಸಿತು. ಆ ಸಮಯದಲ್ಲಿ ಅವರಿಗೆ ಕೇವಲ 20 ವರ್ಷ ವಯಸ್ಸಾಗಿತ್ತು, ಆದರೆ ಆ ಇಡೀ ಆವೃತ್ತಿಯಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.

456 ಕೋಟಿಯಿಂದ 16,600 ಕೋಟಿವರೆಗೆ; 18 ವರ್ಷಗಳಲ್ಲಿ ಆರ್​ಸಿಬಿಯನ್ನು ಆಳಿದವರಿವರು

ಇದಾದ ಒಂದು ವರ್ಷದ ನಂತರ ಅಂದರೆ 2019 ರಲ್ಲಿ ತಮ್ಮ ಕೊನೆಯ ದೇಶೀಯ ಪಂದ್ಯವನ್ನು ಆಡಿದ ಆರ್ಯಮಾನ್ ವಿಕ್ರಮ್ ಬಿರ್ಲಾ, ಆ ಬಳಿಕ ತಮ್ಮ ತಂದೆಯ ಜೊತೆ ಕುಟುಂಬ ವ್ಯವಹಾರದಲ್ಲಿ ಸೇರಿಕೊಂಡರು. ಇದೀಗ ಎಂಟು ವರ್ಷಗಳ ನಂತರ, ಆರ್ಯಮಾನ್ ಬಿರ್ಲಾ ಐಪಿಎಲ್‌ನ ಅತ್ಯಂತ ದುಬಾರಿ ತಂಡದ ಮಾಲೀಕರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಕಾಕತಾಳೀಯವಾಗಿ, ರಾಜಸ್ಥಾನ ರಾಯಲ್ಸ್‌ನ ಮಾರಾಟವನ್ನು ಘೋಷಿಸಿದ ಅದೇ ದಿನದಂದು ಅವರನ್ನು ಆರ್‌ಸಿಬಿಯ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಒಂದೆಡೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಮೆರಿಕದ ಒಕ್ಕೂಟವು 15,300 ಕೋಟಿಗೆ ಖರೀದಿಸಿದರೆ, ಇತ್ತ ಬಿರ್ಲಾ ಗ್ರೂಪ್ ಒಕ್ಕೂಟವು ಆರ್‌ಸಿಬಿಯನ್ನು 16,600 ಕೋಟಿಗೆ ಖರೀದಿಸುವ ಮೂಲಕ ಅತ್ಯಂತ ದುಬಾರಿ ತಂಡದ ಮಾಲೀಕ ಎನಿಸಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Wed, 25 March 26

Follow Us
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಆಟೋದಲ್ಲಿ ಮಕ್ಕಳ ಅಪಹರಿಸಲು ಯತ್ನ, ಚಲಿಸುತ್ತಿರುವ ವಾಹನದಿಂದ ಹಾರಿದ ಮಕ್ಕಳು
ಆಟೋದಲ್ಲಿ ಮಕ್ಕಳ ಅಪಹರಿಸಲು ಯತ್ನ, ಚಲಿಸುತ್ತಿರುವ ವಾಹನದಿಂದ ಹಾರಿದ ಮಕ್ಕಳು