AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

152820324000 ರೂಗೆ ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿದ ಉದ್ಯಮಿ ಕಾಲ್ ಸೊಮಾನಿ ಯಾರು? ಐಪಿಎಲ್​ಗೂ ಅವರಿಗೂ ಏನು ಸಂಬಂಧ?

Know who is Kal Somani, the businessman and the new owner of IPL Franchise Rajasthan Royals: ಐಪಿಎಲ್ ಫ್ರಾಂಚೈಸಿಗಳಿಗೆ ಭಾರೀ ಬೇಡಿಕೆ ಇದ್ದಂತಿದೆ. ಆರ್​ಸಿಬಿ ಸೇಲ್ ಆಗುವ ಮುನ್ನವೇ ರಾಜಸ್ಥಾನ್ ರಾಯಲ್ಸ್ ಮಾರಾಟವಾಗಿದೆ. ಭಾರತ ಮೂಲದ ಅಮೆರಿಕನ್ ಉದ್ಯಮಿ ಕಾಲ್ ಸೊಮಾನಿ ಅವರು ರಾಯಲ್ಸ್ ತಂಡಕ್ಕೆ ನೂತನ ಮಾಲೀಕರಾಗಿದ್ದಾರೆ. ಇವರ ನೇತೃತ್ವದ ಕನ್ಸಾರ್ಟಿಯಂನಿಂದ ರಾಯಲ್ಸ್​ನ ಖರೀದಿಯಾಗಿದೆ. 15.28 ಸಾವಿರ ಕೋಟಿ ರೂಗೆ ಡೀಲ್ ಆಗಿರುವುದು ತಿಳಿದುಬಂದಿದೆ.

152820324000 ರೂಗೆ ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿದ ಉದ್ಯಮಿ ಕಾಲ್ ಸೊಮಾನಿ ಯಾರು? ಐಪಿಎಲ್​ಗೂ ಅವರಿಗೂ ಏನು ಸಂಬಂಧ?
ರಾಜಸ್ಥಾನ್ ರಾಯಲ್ಸ್ ತಂಡImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 24, 2026 | 6:20 PM

Share

ನವದೆಹಲಿ, ಮಾರ್ಚ್ 24: ಸೇಲ್​ಗೆ ಇಡಲಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಮಾರಾಟವಾಗುವ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ (Rajasthan Royals) ಬಿಕರಿಯಾಗಿದೆ. ಐಪಿಎಲ್​ನ ಮೂಲ ಎಂಟು ಫ್ರಾಂಚೈಸಿಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್ ಅನ್ನು ಕಾಲ್ ಸೊಮಾನಿ (Kal Somani) ಅವರ ನೇತೃತ್ವದ ಕನ್ಸಾರ್ಟಿಯಂ 1.63 ಬಿಲಿಯನ್ ಡಾಲರ್​ಗೆ ಖರೀದಿ ಮಾಡಿದೆ. 1.63 ಬಿಲಿಯನ್ ಡಾಲರ್ ಎಂದರೆ ಸುಮಾರು 152820324000 ರೂ (15.28 ಸಾವಿರ ಕೋಟಿ ರೂ) ಆಗುತ್ತದೆ.

ಅಮೆರಿಕದ ರೀಟೇಲ್ ಕಿಂಗ್ ಎನಿಸಿದ ವಾಲ್ಮಾರ್ಟ್ ಮೊದಲಾದ ಹಲವು ಸಂಸ್ಥೆಗಳು ಸೇರಿ ಮಾಡಿಕೊಳ್ಳಲಾದ ಕನ್ಸಾರ್ಟಿಯಂ, ಅಥವಾ ಗುಂಪು ರಾಯಲ್ಸ್ ಫ್ರಾಂಚೈಸಿಯ ಚುಕ್ಕಾಣಿ ಹಿಡಿದಿದೆ. ಕನ್ಸಾರ್ಟಿಯಂ ನೇತೃತ್ವ ವಹಿಸಿರುವ ಕಾಲ್ ಸೋಮಾನಿ ಅವರು ಭಾರತ ಮೂಲದ ಅಮೆರಿಕನ್ ಉದ್ಯಮಿ.

ಸದ್ಯ, ರಾಜಸ್ಥಾನ್ ರಾಯಲ್ಸ್ ಮಾರಾಟವಾಗಿರುವ ಸುದ್ದಿ ಅಧಿಕೃತವಾಗಿ ಘೋಷಿಸಲಾಗಿಲ್ಲ. ಮಾಧ್ಯಮಗಳಿಗೆ ಮೂಲಗಳಿಂದ ಸಿಕ್ಕಿರುವ ಮಾಹಿತಿ. ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಬಹುದು.

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದಾಖಲೆ: 15,286 ಕೋಟಿ ರೂ.ಗೆ ಮಾರಾಟವಾಯ್ತು ರಾಜಸ್ಥಾನ ರಾಯಲ್ಸ್!

ಮುಂಚಿನ ಆರ್​ಆರ್ ಮಾಲೀಕರು ಯಾರು?

ರಾಜಸ್ಥಾನ್ ರಾಯಲ್ಸ್ ತಂಡದ ಮುಂಚಿನ ಮಾಲೀಕರು ಮನೋಜ್ ಬಡಲೆ (Manoj Badale). ಬ್ರಿಟನ್ ಮೂಲದ ಮನೋಜ್ ಬಡಲೆ ಅವರು ಎಮರ್ಜಿಂಗ್ ಮೀಡಿಯಾದ ಮುಖ್ಯಸ್ಥರು. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಿ ಇವರು ಶೇ. 65ರಷ್ಟು ಪಾಲು ಹೊಂದಿದ್ದರು. ರಾಯಲ್ಸ್​ನ ಮೊದಲ ಮಾಲೀಕರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ. ಬೆಟ್ಟಿಂಗ್ ಹಗರಣಕ್ಕೆ (Betting scandal) ಸಿಲುಕಿ ಅವರು ಫ್ರಾಂಚೈಸಿ ಕಳೆದುಕೊಳ್ಳಬೇಕಾಯಿತು. ಆ ಬಳಿಕ ಮನೋಜ್ ಬಡಲೆ ಅವರು ಮಾಲಕತ್ವ ಪಡೆದರು.

ಕಾಲ್ ಸೊಮಾನಿ ಅವರು ಈ ಮುಂಚೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಪ್ರಮುಖ ಷೇರುದಾರರಲ್ಲಿ ಒಬ್ಬರಾಗಿದ್ದರು. ಇದೀಗ ಅವರ ಸಂಸ್ಥೆಯು ರಾಯಲ್ಸ್ ತಂಡದ ಪೂರ್ಣ ಷೇರುಗಳನ್ನು ಖರೀದಿ ಮಾಡಿದೆ. ಈ ಮಾರಾಟ ಅಥವಾ ಖರೀದಿಯು ಅಧಿಕೃತವಾಗಿ ಘೋಷಣೆ ಆಗಬೇಕು. ಹಾಗೆಯೇ, ಬಿಸಿಸಿಐನಿಂದ ಅನುಮೋದನೆ ಕೂಡ ಆಗಬೇಕು.

ರಾಜಸ್ಥಾನ್ ರಾಯಲ್ಸ್ ತಂಡದ ಖರೀದಿಗೆ ಕಾಲ್ ಸೊಮಾನಿ ಮಾತ್ರವಲ್ಲ, ಇನ್ನೂ ಕೆಲ ದಿಗ್ಗಜರು ಪೈಪೋಟಿ ನಡೆಸಿದದ್ದರು. ಟೈಮ್ಸ್ ಗ್ರೂಪ್, ಆದಿತ್ಯ ಬಿರ್ಲಾ ಗ್ರೂಪ್, ಮಿಟ್ಟಲ್ ಕುಟುಂಬ ಮೊದಲಾದವರು ಪ್ರಯತ್ನ ಪಟ್ಟಿದ್ದರೆನ್ನಲಾಗಿದೆ.

ಇದನ್ನೂ ಓದಿ: ಎರಡು ಬಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ ಭಾರತದ ಕ್ರೀಡಾ ಆರ್ಥಿಕತೆ

ಕಾಲ್ ಸೊಮಾನಿ ಯಾರು?

ಅಮೆರಿಕದ ಎರಿಝೋನಾದ ಸ್ಕಾಟ್ಸ್​ಡೇಲ್​ನಲ್ಲಿರುವ ಕಾಲ್ ಸೊಮಾನಿ ಅವರು ವಿವಿಧ ಉದ್ದಿಮೆಗಳ ಸ್ಥಾಪಕರೆನಿಸಿದ್ದಾರೆ. ಎಜುಟೆಕ್, ಎಐ, ಸ್ಪೋರ್ಟ್ಸ್ ಟೆಕ್, ಡಾಟಾ ಪ್ರೈವೆಸಿ ಇತ್ಯಾದಿ ಸೆಕ್ಟರ್​ಗಳಲ್ಲಿ ಇವರ ಉದ್ದಿಮೆಗಳಿಗೆ. ಅನೇಕ ಸ್ಪೋರ್ಟ್ಸ್ ತಂಡಗಳಲ್ಲಿ ಹೂಡಿಕೆ ಮಾಡಿದ್ದಾರೆ, ಭಾಗಿಯಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us