AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suryakumar Yadav: ನಮ್ಮ ಸೋಲಿಗೆ ಇದುವೇ ಅಸಲಿ ಕಾರಣ..!

Delhi Capitals vs Mumbai Indians: ಐಪಿಎಲ್​​ನ 8ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 18.1 ಓವರ್​​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ.

Suryakumar Yadav: ನಮ್ಮ ಸೋಲಿಗೆ ಇದುವೇ ಅಸಲಿ ಕಾರಣ..!
Suryakumar Yadav
ಝಾಹಿರ್ ಯೂಸುಫ್
|

Updated on: Apr 05, 2026 | 11:04 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.1 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್​ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಬ್ಯಾಟಿಂಗ್ ವೈಫಲ್ಯ ಮತ್ತು ಎದುರಾಳಿ ತಂಡದ ಯುವ ಆಟಗಾರ ಸಮೀರ್ ರಿಝ್ವಿ ಅವರ ಸ್ಫೋಟಕ ಆಟವೇ ಸೋಲಿಗೆ ಪ್ರಮುಖ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

ನಮ್ಮ ಬ್ಯಾಟಿಂಗ್ ದೃಷ್ಟಿಯಿಂದ ನಾವು 15-20 ರನ್ ಕಡಿಮೆ ಗಳಿಸಿದೆವು ಎಂದು ನಾನು ಭಾವಿಸುತ್ತೇನೆ. 180-185 ರನ್ ಇಲ್ಲಿ ಉತ್ತಮ ಮೊತ್ತವಾಗಿತ್ತು, ಆದರೆ ನಾವು ಈ ಸ್ಕೋರ್​ ತಲುಪಲು ವಿಫಲರಾದೆವು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದಾಗ್ಯೂ ನಮ್ಮ ಬೌಲರ್​ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು. ಡೆಲ್ಲಿ ತಂಡ ಕೇವಲ 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಸಮೀರ್ ರಿಝ್ವಿ (90 ರನ್, 51 ಎಸೆತ) ಆಡಿದ ರೀತಿ ಅದ್ಭುತವಾಗಿತ್ತು. ರಿಝ್ವಿ ಪಂದ್ಯದ ಮೇಲೆ ನಮಗೆ ಹಿಡಿತ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ.

ಒಂದು ವೇಳೆ ಸಮೀರ್ ರಿಝ್ವಿ ಅವರ ವಿಕೆಟ್ ಬೇಗನೆ ಸಿಕ್ಕಿದ್ದರೆ ನಮಗೆ ಕಂಬ್ಯಾಕ್ ಮಾಡಲು ಅವಕಾಶ ದೊರೆಯುತ್ತಿತ್ತು. ಆದರೆ ರಿಝ್ವಿ ಅವರ ಬ್ಯಾಟಿಂಗ್ ವೈಖರಿ ಮುಂದೆ ನಮ್ಮ ಬೌಲರ್​ಗಳು ಮಂಕಾದರು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ತಂದೆ-ಮಗನನ್ನು ಔಟ್ ಮಾಡಿ ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್

ಈ ಸೋಲಿನ ಹೊರತಾಗಿಯೂ ಮುಂದಿನ ಪಂದ್ಯಕ್ಕೆ ಬಲವಾಗಿ ಮರಳಲು ತಂಡವು ಮತ್ತೆ ತರಬೇತಿ ಮೈದಾನಕ್ಕೆ ತೆರಳಲಿದೆ. ಈ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಲಿದ್ದೇವೆ ಎಂದು ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಪಂದ್ಯದ ಸ್ಕೋರ್ ವಿವರ:

  • ಮುಂಬೈ ಇಂಡಿಯನ್ಸ್: 162/6 (20 ಓವರ್) – ಸೂರ್ಯಕುಮಾರ್ ಯಾದವ್ 51 (36).
  • ಡೆಲ್ಲಿ ಕ್ಯಾಪಿಟಲ್ಸ್: 164/4 (18.1 ಓವರ್) – ಸಮೀರ್ ರಿಝ್ವಿ 90 (51).
  • ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 6 ವಿಕೆಟ್ ಜಯ.
Follow Us
ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಆತುರಪಡಬೇಡಿ!
ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಆತುರಪಡಬೇಡಿ!
ಖರ್ಗೆ ಭೇಟಿ ಬಳಿಕ ಅಚ್ಚರಿಯ ಹೇಳಿಕೆ ಕೊಟ್ಟ ಡಿಸಿಎಂ ಡಿಕೆಶಿ
ಖರ್ಗೆ ಭೇಟಿ ಬಳಿಕ ಅಚ್ಚರಿಯ ಹೇಳಿಕೆ ಕೊಟ್ಟ ಡಿಸಿಎಂ ಡಿಕೆಶಿ
ಕಾಶ್ಮೀರದ ಝೋಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತ
ಕಾಶ್ಮೀರದ ಝೋಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತ
ಕ್ಷಮೆ ಕೇಳಿದ ಬಳಿಕವೂ ಚೇತನ್ ವಿರುದ್ಧ ಹರಿಹಾಯ್ದ ಸಾರಾ ಗೋವಿಂದು
ಕ್ಷಮೆ ಕೇಳಿದ ಬಳಿಕವೂ ಚೇತನ್ ವಿರುದ್ಧ ಹರಿಹಾಯ್ದ ಸಾರಾ ಗೋವಿಂದು
ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು: ಪರಿಹಾರ ನೀಡುವವರೆಗೂ ಡ್ಯೂಟಿ ಮಾಡಲ್ಲ
ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು: ಪರಿಹಾರ ನೀಡುವವರೆಗೂ ಡ್ಯೂಟಿ ಮಾಡಲ್ಲ
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ