AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕತ್ವದ ಆಫರ್ ತಿರಸ್ಕರಿಸಿ: ರಿಷಭ್ ಪಂತ್​​ಗೆ ಮಾಜಿ ಕ್ರಿಕೆಟಿಗನ ಸಲಹೆ

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-20ರ ಚರ್ಚೆಗಳು ಆರಂಭವಾಗಿರುವ ಬೆನ್ನಲ್ಲೇ, ಫ್ರಾಂಚೈಸಿಗಳ ಒಳಗಿನ ತಂತ್ರಗಾರಿಕೆಗಳು ಕಾವೇರತೊಡಗಿವೆ. ಇತ್ತೀಚಿನ ಬಿಗ್ ಟ್ರೇಡ್ ಡೀಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರುಸೇರ್ಪಡೆಯಾಗಿರುವ ರಿಷಭ್ ಪಂತ್ ಅವರನ್ನು ನಾಯಕತ್ವಕ್ಕೆ ಪರಿಗಣಿಸುವ ಸಾಧ್ಯತೆಯಿದೆ. ಆದರೆ, ಅದಕ್ಕೂ ಮುನ್ನವೇ ಪಂತ್‌ಗೆ ಟೀಮ್ ಇಂಡಿಯಾದ ಮಾಜಿ ಆಟಗಾರರೊಬ್ಬರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.

ನಾಯಕತ್ವದ ಆಫರ್ ತಿರಸ್ಕರಿಸಿ: ರಿಷಭ್ ಪಂತ್​​ಗೆ ಮಾಜಿ ಕ್ರಿಕೆಟಿಗನ ಸಲಹೆ
Rishabh Pant Image Credit source: IPL
ಝಾಹಿರ್ ಯೂಸುಫ್
|

Updated on: Aug 23, 2026 | 10:44 AM

Share

ಐಪಿಎಲ್ 2027ರ ಸೀಸನ್‌ಗೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ. ಈ ಚರ್ಚೆಯ ನಡುವೆ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಿಂದ ಭಾರಿ ಮೊತ್ತದ ಟ್ರೇಡ್ ಡೀಲ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಮರಳಿರುವ ರಿಷಭ್ ಪಂತ್ ಅವರಿಗೆ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಒಂದು ಮಹತ್ವದ ಸಲಹೆ ನೀಡಿದ್ದಾರೆ. “ಡೆಲ್ಲಿ ತಂಡದಲ್ಲಿ ನಾಯಕತ್ವದ ಆಫರ್ ಬಂದರೆ ಅದನ್ನು ನಿರಾಕರಿಸಿ, ಕೇವಲ ಒಬ್ಬ ಬ್ಯಾಟರ್ ಆಗಿ ಆಟದ ಕಡೆ ಗಮನ ಕೊಡಿ” ಎಂದು ಜಾಫರ್ ಹೇಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವಾಸಿಂ ಜಾಫರ್, ರಿಷಭ್ ಪಂತ್ ಸದ್ಯಕ್ಕೆ ಕ್ಯಾಪ್ಟನ್ಸಿ ಹೊರೆಯಿಂದ ದೂರ ಇರಬೇಕಾದ ಅನಿವಾರ್ಯತೆಯನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಂತ್ ಬ್ಯಾಟಿಂಗ್ ಫಾರ್ಮ್ ಕೊಂಚ ಕುಸಿದಿದೆ. ಈ ಸಮಯದಲ್ಲಿ ನಾಯಕತ್ವದ ಒತ್ತಡ ಅವರ ಬ್ಯಾಟಿಂಗ್ ಮೇಲೆ ಮತ್ತಷ್ಟು ನಕಾರಾತ್ಮಕ ಪರಿಣಾಮ ಬೀರಬಹುದು.

ಸದ್ಯ ಪಂತ್ ಭಾರತ ಟಿ20 ಮತ್ತು ಏಕದಿನ ತಂಡದ ಲೀಡರ್‌ಶಿಪ್ ಗ್ರೂಪ್‌ನಲ್ಲಿ ಇಲ್ಲ. ಹೀಗಾಗಿ ಅವರು ರನ್ ಮಳೆ ಹರಿಸುವ ಮೂಲಕ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ವಾಸಿಂ ಜಾಫರ್ ತಿಳಿಸಿದ್ದಾರೆ.

ವಿಕೆಟ್ ಕೀಪಿಂಗ್ ಮಾಡುವುದು, ಬ್ಯಾಟಿಂಗ್‌ನಲ್ಲಿ ಮಿಂಚುವುದು, ಅಭಿಮಾನಿಗಳ ನಿರೀಕ್ಷೆ ತಲುಪುವುದು ಮತ್ತು ಫ್ರಾಂಚೈಸಿ ಮಾಲೀಕರ ಒತ್ತಡ ನಿಭಾಯಿಸುವುದು ಒಬ್ಬ ಆಟಗಾರನಿಗೆ ಅತಿಯಾದ ಆಯಾಸ ತರುತ್ತದೆ ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಲಿಗೆ ಕೆ.ಎಲ್. ರಾಹುಲ್ ಸೂಕ್ತ ನಾಯಕ!

ರಿಷಭ್ ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲು ಕನ್ನಡಿಗ ಕೆ.ಎಲ್. ರಾಹುಲ್ ಅವರ ಹೆಸರು ಅತ್ಯಂತ ಸೂಕ್ತ ಎಂದು ಜಾಫರ್ ಪ್ರತಿಪಾದಿಸಿದ್ದಾರೆ. ರಾಹುಲ್ ಅವರಿಗೆ ಐಪಿಎಲ್‌ನಲ್ಲಿ ಸುದೀರ್ಘ ನಾಯಕತ್ವದ ಅನುಭವವಿದೆ ಮತ್ತು ಅವರು ತಂಡವನ್ನು ಅತ್ಯಂತ ಶಾಂತವಾಗಿ ಮುನ್ನಡೆಸಬಲ್ಲರು ಎಂದು ಜಾಫರ್ ಹೇಳಿದ್ದಾರೆ. ಪಂತ್ ನಾಯಕತ್ವವನ್ನು ಪಕ್ಕಕ್ಕಿಟ್ಟು ಮುಕ್ತವಾಗಿ ಬ್ಯಾಟಿಂಗ್ ಮಾಡಿದರೆ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ ಎಂಬುದು ಅವರ ಆಶಯ.

ಇದನ್ನೂ ಓದಿ: IPL 2027: ಐಪಿಎಲ್ ಟ್ರೇಡ್ ವಿಂಡೋ: ತೆರೆಮರೆಯ ರಣತಂತ್ರಗಳು

ಒಟ್ಟಾರೆಯಾಗಿ ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನವೇ ಈ ಟ್ರೇಡ್‌ಗಳು ಮತ್ತು ನಾಯಕತ್ವದ ಚರ್ಚೆಗಳು ಕ್ರಿಕೆಟ್ ಲೋಕದಲ್ಲಿ ಭಾರಿ ಕುತೂಹಲ ಮೂಡಿಸಿವೆ. ವಾಸಿಂ ಜಾಫರ್ ಅವರ ಈ ಮಹತ್ವದ ಸಲಹೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮತ್ತು ರಿಷಭ್ ಪಂತ್ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us