ಪಾಕಿಸ್ತಾನ್ ಕೈಯಲ್ಲಿ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಭವಿಷ್ಯ

Womens T20 World Cup 2024: ಮಹಿಳಾ ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಕೇವಲ 82 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು 11 ಓವರ್​ಗಳಲ್ಲಿ ಚೇಸ್ ಮಾಡಿ ಆಸ್ಟ್ರೇಲಿಯಾ ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಪಾಕಿಸ್ತಾನ್ ಕೈಯಲ್ಲಿ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಭವಿಷ್ಯ
IND vs PAK
Follow us
ಝಾಹಿರ್ ಯೂಸುಫ್
|

Updated on: Oct 12, 2024 | 10:25 AM

ಮಹಿಳಾ ಟಿ20 ವಿಶ್ವಕಪ್​ನ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ್ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಪಾಕ್ ತಂಡದ ನೆಟ್ ರನ್ ರೇಟ್ ಮತ್ತಷ್ಟು ಕುಸಿದೆ. ಈ ಕುಸಿತವು ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಎಂಬುದು ವಿಶೇಷ. ಅಂದರೆ ಸೆಮಿಫೈನಲ್ ರೇಸ್​ನಲ್ಲಿದ್ದ ಪಾಕಿಸ್ತಾನ್ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿ ಇದೀಗ -0.488 ನೆಟ್ ರನ್ ರೇಟ್ ಹೊಂದಿದೆ. ಇನ್ನು ಕೊನೆಯ ಪಂದ್ಯದಲ್ಲಿ ಗೆದ್ದರೂ ಸೆಮಿಫೈನಲ್​ಗೇರುವುದು ಕಷ್ಟಸಾಧ್ಯ.

ಆದರೆ ಅತ್ತ ಪಾಕ್ ತಂಡವು ಕೊನೆಯ ಮ್ಯಾಚ್​ನಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್​ಗೇರುವುದು ಬಹುತೇಕ ಖಚಿತವಾಗಲಿದೆ. ಏಕೆಂದರೆ ಪಾಕಿಸ್ತಾನ್ ತಂಡವು ತನ್ನ ಕೊನೆಯ ಪಂದ್ಯವನ್ನು ನ್ಯೂಝಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯವು ನ್ಯೂಝಿಲೆಂಡ್ ತಂಡಕ್ಕೆ ನಿರ್ಣಾಯಕ.

ಏಕೆಂದರೆ ಶ್ರೀಲಂಕಾ ವಿರುದ್ಧ ನ್ಯೂಝಿಲೆಂಡ್ ಗೆದ್ದರೆ ಒಟ್ಟು 4 ಅಂಕಗಳಾಗಲಿವೆ. ಅತ್ತ ನಾಲ್ಕು ಪಾಯಿಂಟ್ಸ್ ಹೊಂದಿರುವ ಟೀಮ್ ಇಂಡಿಯಾವನ್ನು ನೆಟ್ ರನ್ ರೇಟ್ ಮೂಲಕ ಹಿಂದಿಕ್ಕಿ ಕಿವೀಸ್ ಪಡೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಲು ಉತ್ತಮ ಅವಕಾಶವಿದೆ.

ಆದರೆ ಭಾರತ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದರೆ 6 ಅಂಕಗಳೊಂದಿಗೆ ಮತ್ತೆ ದ್ವಿತೀಯ ಸ್ಥಾನಕ್ಕೇರಬಹುದು. ಇದಾಗ್ಯೂ ಟೀಮ್ ಇಂಡಿಯಾದ ಸೆಮಿಫೈನಲ್ ಎಂಟ್ರಿ ಖಚಿತವಾಗುವುದಿಲ್ಲ.

ಏಕೆಂದರೆ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಾಕ್ ತಂಡ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ.  ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಭಾರತ ತಂಡವು ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಫಲಿತಾಂಶವನ್ನು ಎದುರು ನೋಡಲಿದೆ.

ಈ ಮ್ಯಾಚ್​ನಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದರೆ, ಅಥವಾ ಹೀನಾಯ ಸೋಲನ್ನು ತಪ್ಪಿಸಿಕೊಂಡರೆ ಟೀಮ್ ಇಂಡಿಯಾ ನೆಟ್ ರನ್ ರೇಟ್ ಮೂಲಕ ಸೆಮಿಫೈನಲ್​ಗೆ ಪ್ರವೇಶಿಸಬಹುದು. ಹಾಗಾಗಿ ಭಾರತ ತಂಡದ ಸೆಮಿಫೈನಲ್ ಭವಿಷ್ಯ ಈಗ ಪಾಕಿಸ್ತಾನ್ ತಂಡದ ಕೈಯಲ್ಲಿದೆ ಎಂದರೆ ತಪ್ಪಾಗಲಾರದು.

ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ:

  • ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಬೇಕು.
  • ಶ್ರೀಲಂಕಾ ಅಥವಾ ಪಾಕಿಸ್ತಾನ್ ವಿರುದ್ಧ ನ್ಯೂಝಿಲೆಂಡ್ ತಂಡ ಸೋಲಬೇಕು.
  • ನ್ಯೂಝಿಲೆಂಡ್ ತಂಡ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೂ ಭಾರತಕ್ಕಿಂತ ಹೆಚ್ಚಿನ ನೆಟ್ ರನ್ ಹೊಂದಬಾರದು.
  • ಹೀಗಾದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿಫೈನಲ್​ಗೆ ಪ್ರವೇಶಿಸಬಹುದಾಗಿದೆ.

ಮುಂದಿನ ಪಂದ್ಯಗಳ ವೇಳಾಪಟ್ಟಿ:

  • ಅಕ್ಟೋಬರ್ 13: ಭಾರತ vs ಆಸ್ಟ್ರೇಲಿಯಾ
  • ಅಕ್ಟೋಬರ್ 14: ಪಾಕಿಸ್ತಾನ್ vs ನ್ಯೂಝಿಲೆಂಡ್

ಮಹಿಳಾ ಟಿ20 ವಿಶ್ವಕಪ್ ಗ್ರೂಪ್-ಎ ಪಾಯಿಂಟ್ಸ್ ಟೇಬಲ್:

ತಂಡಗಳು ಪಂದ್ಯಗಳು ಗೆಲುವು ಸೋಲು ಎನ್/ಆರ್ ಅಂಕಗಳು ನೆಟ್ ರನ್ ರೇಟ್
ಚಿತ್ರ ಆಸ್ಟ್ರೇಲಿಯಾ
3 3 0 0 6 +2.786
ಚಿತ್ರ ಭಾರತ
3 2 1 0 4 +0.576
ಚಿತ್ರ ನ್ಯೂಝಿಲೆಂಡ್
2 1 1 0 2 -0.050
ಚಿತ್ರ ಪಾಕಿಸ್ತಾನ್
3 1 2 0 2 -0.488
ಚಿತ್ರ ಶ್ರೀಲಂಕಾ
3 0 3 0 0 -2.564