AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಪಡಿಕ್ಕಲ್​ಗೆ 2 ಜೀವದಾನ ನೀಡಿದ ಶ್ರೀಲಂಕಾಕ್ಕೆ ಬರೋಬ್ಬರಿ 117 ರನ್ ದಂಡ

Devdutt Padikkal dropped catches: ಕ್ರಿಕೆಟ್‌ನಲ್ಲಿ ಕ್ಯಾಚ್ ಕೈಚೆಲ್ಲುವುದು ತಂಡಕ್ಕೆ ಎಷ್ಟು ದುಬಾರಿ ಎಂಬುದಕ್ಕೆ ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯ ಉದಾಹರಣೆ. ದೇವದತ್ ಪಡಿಕ್ಕಲ್ ನೀಡಿದ ಎರಡೆರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ಶ್ರೀಲಂಕಾ 117 ರನ್‌ಗಳ ದಂಡ ತೆರಬೇಕಾಯಿತು. ಇದರಿಂದಾಗಿ ಪಡಿಕ್ಕಲ್ ಶತಕ ಗಳಿಸಿ, ಪ್ರಮುಖ ಜೊತೆಯಾಟಗಳನ್ನು ಕಟ್ಟಿದರು. ಫೀಲ್ಡಿಂಗ್ ತಪ್ಪುಗಳು ಪಂದ್ಯದ ಗತಿಯನ್ನೇ ಹೇಗೆ ಬದಲಿಸುತ್ತವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ.

IND vs SL: ಪಡಿಕ್ಕಲ್​ಗೆ 2 ಜೀವದಾನ ನೀಡಿದ ಶ್ರೀಲಂಕಾಕ್ಕೆ ಬರೋಬ್ಬರಿ 117 ರನ್ ದಂಡ
Devdutt Padikkal
ಪೃಥ್ವಿಶಂಕರ
|

Updated on:Aug 23, 2026 | 5:18 PM

Share

ಕ್ರಿಕೆಟ್‌ನಲ್ಲಿ ಕ್ಯಾಚ್​ ಕೈಚೆಲ್ಲುವುದು ಎಂತಹ ದೊಡ್ಡ ತಪ್ಪು ಎಂಬುದು ಪ್ರಸ್ತುತ ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಒಂದು ಬಾರಿ ಕ್ಯಾಚ್ ಬಿಟ್ಟರೆ ಅದನ್ನು ಆಕಸ್ಮಿಕ ಎನ್ನಬಹುದು. ಆದರೆ ಒಬ್ಬನೇ ಬ್ಯಾಟರ್ ನೀಡಿದ ಎರಡೆರಡು ಕ್ಯಾಚ್​ಗಳನ್ನು ಕೈಚೆಲ್ಲುವುದು ದೊಡ್ಡ ಅಪರಾಧ ಎನ್ನಬಹುದು. ಈ ರೀತಿಯ ತಪ್ಪುಗಳು ತಂಡವನ್ನು ಸೋಲಿನ ದವಡೆಗೆ ತಳ್ಳಬಹುದು. ಎಷ್ಟೋ ತಂಡಗಳು ಕ್ಯಾಚ್​ಗಳನ್ನು ಕೈಚೆಲ್ಲಿ ಪಂದ್ಯವನ್ನು ಸೋತಿರುವ ಸಾಕಷ್ಟು ನಿದರ್ಶನಗಳನ್ನು ನಾವು ನೋಡಿದ್ದವೆ. ಟೀಂ ಇಂಡಿಯಾ ಕೂಡ ಹಲವು ಬಾರಿ ಇಂತಹ ತಪ್ಪುಗಳನ್ನು ಮಾಡಿ ಪಂದ್ಯಗಳನ್ನು ಸೋತಿದೆ. ಇದೀಗ ಶ್ರೀಲಂಕಾ ಕೂಡ ಇದೇ ರೀತಿಯ ತಪ್ಪನ್ನು ಮಾಡಿ ಬರೋಬ್ಬರಿ 117 ರನ್​ಗಳ ದಂಡ ಪಾವತಿಸಿದೆ.

ಎರಡೆರಡು ಕ್ಯಾಚ್ ಡ್ರಾಪ್

ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರನೆಂದರೆ ಅದು ಕನ್ನಡಿಗ ದೇವದತ್ ಪಡಿಕ್ಕಲ್. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 167 ರನ್​ಗಳ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ಎರಡನೇ ಇನ್ನಿಂಗ್ಸ್​ನಲ್ಲಿ 44 ರನ್​ಗಳ ಕಾಣಿಕೆ ನೀಡಿದ್ದರು. ಹೀಗಾಗಿ ಎರಡನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾವನ್ನು ಕಟ್ಟಿಹಾಕಬೇಕೆಂದರೆ ಶ್ರೀಲಂಕಾ ಆದಷ್ಟು ಬೇಗ ದೇವದತ್ ಪಡಿಕ್ಕಲ್ ಅವರ ವಿಕೆಟ್ ಪಡೆಯಬೇಕಿತ್ತು. ಇದಕ್ಕೆ ಪೂರಕವಾಗಿ ಬೌಲರ್​ಗಳು ಕೂಡ ಪಡಿಕ್ಕಲ್ ಅವರನ್ನು ಔಟ್ ಮಾಡುವ ಅವಕಾಶವನ್ನು ಸೃಷ್ಟಿಸಿದರು. ಒಂದಲ್ಲ ಅಂಥಾ ಎರಡು ಬಾರಿ ಪಡಿಕ್ಕಲ್ ಅವರ ವಿಕೆಟ್ ಪಡೆಯುವ ಅವಕಾಶ ಲಂಕಾ ತಂಡಕ್ಕಿತ್ತು. ಆದರೆ ಫಿಲ್ಡರ್​ಗಳು, ಪಡಿಕ್ಕಲ್ ನೀಡಿದ ಎರಡು ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ತಂಡಕ್ಕೆ ಹೊರೆಯಾದರು.

117 ರನ್​ಗಳ ದಂಡ ಕಟ್ಟಿದ ಲಂಕಾ

ಇಲ್ಲಿ ಶ್ರೀಲಂಕಾಕ್ಕೆ ಇನ್ನೊಂದು ನೋವಿನ ಸಂಗತಿಯೆಂದರೆ ದೇವದತ್ ಪಡಿಕ್ಕಲ್ ತಮ್ಮ ರನ್​ಗಳ ಖಾತೆಯನ್ನು ತೆರೆಯುವುದಕ್ಕೂ ಮುನ್ನವೇ ಅಂದರೆ ಶೂನ್ಯಕ್ಕೆ ಕ್ಯಾಚ್ ನೀಡಿದ್ದರು. ಲಂಕಾ ಫಿಲ್ಡರ್ ಆ ಕ್ಯಾಚ್ ಹಿಡಿಯಲಿಲ್ಲ. ನಂತರ 1 ರನ್ ಬಾರಿಸುವ ಮೂಲಕ ಖಾತೆ ತೆರೆದಿದ್ದ ಪಡಿಕ್ಕಲ್ ಮತ್ತೆ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಆ ಕ್ಯಾಚ್ ಅನ್ನು ಸಹ ಶ್ರೀಲಂಕಾ ಫಿಲ್ಡರ್ ತೆಗೆದುಕೊಳ್ಳಲಿಲ್ಲ. ಇದು ತಂಡವನ್ನು ಎಂತಹ ಸಂಕಷ್ಟಕ್ಕೆ ಸಿಲುಕಿಸಿತ್ತೆಂದರೆ ಈ ಎರಡು ಜೀವದಾನಗಳ ಲಾಭ ಪಡೆದ ಪಡಿಕ್ಕಲ್ ಬರೋಬ್ಬರಿ 117 ರನ್​ಗಳ ಇನ್ನಿಂಗ್ಸ್ ಆಡಿದರು.​

IND vs SL: ಸತತ 2ನೇ ಪಂದ್ಯದಲ್ಲಿ ಸ್ಮರಣೀಯ ಶತಕ ಬಾರಿಸಿದ ದೇವದತ್ ಪಡಿಕ್ಕಲ್

ಶತಕ, ಅರ್ಧಶತಕದ ಜೊತೆಯಾಟ

ಅಂದರೆ ಎರಡು ಕ್ಯಾಚ್​​ಗಳನ್ನು ಕೈಚೆಲ್ಲಿದಕ್ಕೆ ದಂಡದ ರೂಪದಲ್ಲಿ ಶ್ರೀಲಂಕಾ ತಂಡ ಬರೋಬ್ಬರಿ 117 ರನ್​ಗಳನ್ನು ಟೀಂ ಇಂಡಿಯಾಕ್ಕೆ ನೀಡಿತು. ಇದು ಸಾಲದೆಂಬಂತೆ ಪಡಿಕ್ಕಲ್, ಮೂರನೇ ವಿಕೆಟ್​ಗೆ ನಾಯಕ ಶುಭ್​ಮನ್ ಗಿಲ್ ಅವರೊಂದಿಗೆ 120 ರನ್​ಗಳ ಶತಕದ ಜೊತೆಯಾಟ ಕಟ್ಟಿದರು. ಹಾಗೆಯೇ ನಾಲ್ಕನೇ ವಿಕೆಟ್​ಗೆ ರವೀಂದ್ರ ಜಡೇಜಾ ಅವರ ಜೊತಗೂಡಿ ಅರ್ಧಶತಕದ ಪಾಲುದಾರಿಕೆಯನ್ನು ರೂಪಿಸಿದರು. ಇದರ ಪರಿಣಾಮವಾಗಿ ಟೀಂ ಇಂಡಿಯಾ 300 ರನ್​ಗಳ ಸನಿಹಕ್ಕೆ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Sun, 23 August 26

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ