ರೂಪಿಂದರ್ ಪಾಲ್ ಸಿಂಗ್ ಬಳಿಕ ಭಾರತೀಯ ಹಾಕಿಗೆ ವಿದಾಯ ಹೇಳಿದ ಬೀರೇಂದರ್ ಲಾಕ್ರಾ
Birendra Lakra: ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ನಾಲ್ಕು ದಶಕಗಳ ನಂತರ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಆಟಗಾರ ಬೀರೇಂದ್ರ ಲಕ್ರಾ ಹಾಕಿಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ನಾಲ್ಕು ದಶಕಗಳ ನಂತರ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಆಟಗಾರ ಬೀರೇಂದ್ರ ಲಕ್ರಾ ಹಾಕಿಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಬೀರೇಂದರ್ ಅವರಿಗೂ ಮೊದಲು, ಈ ದಿನ ಅಂದರೆ ಗುರುವಾರ, ದೇಶದ ಅತ್ಯುತ್ತಮ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಕೂಡ ನಿವೃತ್ತಿ ಘೋಷಿಸಿದರು. ಲಕ್ರಾ ಭಾರತ ತಂಡಕ್ಕಾಗಿ 201 ಪಂದ್ಯಗಳನ್ನು ಆಡಿದ್ದಾರೆ. ಹಾಕಿ ಇಂಡಿಯಾ ಅವರ ನಿವೃತ್ತಿಯ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಒಡಿಶಾದ ರೂರ್ಕೆಲಾದಿಂದ ಬಂದ ಲಕ್ರಾ ತನ್ನ ಹಾಕಿ ವೃತ್ತಿಜೀವನವನ್ನು SAIL ಹಾಕಿ ಅಕಾಡೆಮಿಯಿಂದ ಆರಂಭಿಸಿದರು. ತನ್ನದೇ ರಾಜ್ಯದ ದಿಲೀಪ್ ಟರ್ಕಿಯನ್ನು ತನ್ನ ಆದರ್ಶವೆಂದು ಪರಿಗಣಿಸಿದ ಲಕ್ರಾ, ದಿಲೀಪ್ರನ್ನು ನೋಡಿದ ನಂತರವೇ ಹಾಕಿ ಕೌಶಲ್ಯಗಳನ್ನು ಕಲಿತರಂತೆ. ಅವರು 2009 ರಲ್ಲಿ ಎಫ್‌ಐಎಚ್ ಜೂನಿಯರ್ ವಿಶ್ವಕಪ್‌ಗಾಗಿ ಸಿಂಗಾಪುರಕ್ಕೆ ಹೋದ ಭಾರತೀಯ ತಂಡದ ಭಾಗವಾಗಿದ್ದರು. ಜೊತೆಗೆ 2007 ರಲ್ಲಿ ಮೊದಲ ಬಾರಿಗೆ ಜೂನಿಯರ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಜೂನಿಯರ್ ಮಟ್ಟದಲ್ಲಿ ತಮ್ಮ ಪ್ರದರ್ಶನದಿಂದ ನಿರಂತರವಾಗಿ ಪ್ರಭಾವಶಾಲಿಯಾಗಿದ್ದ ಲಕ್ರಾ ಅಂತಿಮವಾಗಿ ಹಿರಿಯ ತಂಡದಲ್ಲಿ ಸ್ಥಾನ ಪಡೆದುಕೊಂಡರು.
ವೃತ್ತಿ ಜೀವನ ಭಾರತೀಯ ಪುರುಷರ ಹಾಕಿ ತಂಡ 2012 ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ -2013 ರಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು. ಈ ಎರಡೂ ಪಂದ್ಯಾವಳಿಗಳಲ್ಲಿ ಲಕ್ರಾ ತಂಡದ ಭಾಗವಾಗಿದ್ದರು. 2014 ರಲ್ಲಿ, ಭಾರತವು ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಇಲ್ಲಿಯೂ ಲಕ್ರಾ ತಂಡದ ಭಾಗವಾಗಿದ್ದರು. ಇದರ ಹೊರತಾಗಿ, ಅವರು ಜಕಾರ್ತ ಏಷ್ಯನ್ ಗೇಮ್ಸ್‌ನಲ್ಲಿ ತಂಡದೊಂದಿಗಿದ್ದರು. ತಂಡವು ಇಲ್ಲಿ ಕಂಚಿನ ಪದಕ ಗೆದ್ದಿತು. ಲಕ್ರಾ ಇಲ್ಲಿಯವರೆಗೆ ಒಲಿಂಪಿಕ್ ಪದಕವನ್ನು ಹೊಂದಿರಲಿಲ್ಲ, ಆದರೆ ಈ ವರ್ಷ ಅವರ ಕನಸನ್ನು ಜಪಾನ್ ರಾಜಧಾನಿಯಲ್ಲಿ ಆಡಿದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಈಡೇರಿಸಲಾಯಿತು. ಈ ಹಿಂದೆ ಅವರು ರಿಯೋ ಒಲಿಂಪಿಕ್ಸ್ -2016 ರಲ್ಲಿ ತಂಡದ ಭಾಗವಾಗಿರಲಿಲ್ಲ ಏಕೆಂದರೆ ಆ ಸಮಯದಲ್ಲಿ ಅವರು ಗಾಯದಿಂದ ಬಳಲುತ್ತಿದ್ದರು. ಅವರು 2016 ರಲ್ಲಿಯೇ ಮೊಣಕಾಲಿನ ಗಾಯಕ್ಕೆ ತುತ್ತಾದರು. ಅದಕ್ಕಾಗಿಯೇ ಅವನಿಗೆ ಒಲಿಂಪಿಕ್ಸ್ ಆಡಲು ಸಾಧ್ಯವಾಗಲಿಲ್ಲ. ಈ ಗಾಯವು ಅವರನ್ನು ಎಂಟು ತಿಂಗಳ ಕಾಲ ಮೈದಾನದಿಂದ ದೂರ ಇಟ್ಟಿತು.
2️⃣0️⃣1️⃣ Caps? Olympic Bronze Medallist
A solid defender and one of the most influential Indian Men's Hockey Team figures, the Odisha star has announced his retirement from the Indian national team.
Happy Retirement, Birendra Lakra. ?#IndiaKaGame pic.twitter.com/p8m8KkWDb4
— Hockey India (@TheHockeyIndia) September 30, 2021