‘ಹಮ್ ಕಿಸೀಸೆ ಕಮ್ ನಹೀಂ’ ಎಂದ ಮೊಹಮ್ಮದ್ ಕೈಫ್
ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಕಂಡಿರುವ ಸರ್ವಶ್ರೇಷ್ಠ ಫೀಲ್ಡರ್ಗಳಲ್ಲಿ ಒಬ್ಬ ಹಾಗೂ ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸಹ ಆಗಿದ್ದ ಮೊಹಮ್ಮದ್ ಕೈಫ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುವ ಫ್ರಾಂಚೈಸಿಗಳ ಮಾಲೀಕರು ಕೇವಲ ವಿದೇಶಿ ಮೂಲದ ಕೋಚ್ಗಳಿಗೆ ಮಣೆ ಹಾಕುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂತರರಾಷ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ವಿವಿಧ ತಂಡಗಳಿಗೆ ಕೋಚ್ ಆಗಿ ಕೆಲಸ ಮಾಡುತ್ತಿರುವ ಕೈಫ್, ಪ್ರಸ್ತುತವಾಗಿ ಐಪಿಎಲ್ನಲ್ಲಾಡುವ ದೆಹಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಕ್ಲಬ್ಗೆ […]
ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಕಂಡಿರುವ ಸರ್ವಶ್ರೇಷ್ಠ ಫೀಲ್ಡರ್ಗಳಲ್ಲಿ ಒಬ್ಬ ಹಾಗೂ ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸಹ ಆಗಿದ್ದ ಮೊಹಮ್ಮದ್ ಕೈಫ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುವ ಫ್ರಾಂಚೈಸಿಗಳ ಮಾಲೀಕರು ಕೇವಲ ವಿದೇಶಿ ಮೂಲದ ಕೋಚ್ಗಳಿಗೆ ಮಣೆ ಹಾಕುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಂತರರಾಷ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ವಿವಿಧ ತಂಡಗಳಿಗೆ ಕೋಚ್ ಆಗಿ ಕೆಲಸ ಮಾಡುತ್ತಿರುವ ಕೈಫ್, ಪ್ರಸ್ತುತವಾಗಿ ಐಪಿಎಲ್ನಲ್ಲಾಡುವ ದೆಹಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಕ್ಲಬ್ಗೆ ಕರ್ನಾಟಕದ ಮತ್ತು ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿರುತ್ತಾರೆ. ಹಾಗೆ ನೋಡಿದರೆ, ಐಪಿಎಲ್ 13ನೇ ಆವೃತ್ತಿಯಲ್ಲಿ ಕೇವಲ ಕುಂಭ್ಳೆ ಮಾತ್ರ ಚೀಫ್ ಅಥವಾ ಹೆಡ್ ಕೋಚ್ ಹುದ್ದೆಗೆ ಪರಿಗಣಿಸಲ್ಪಟ್ಟಿರುವ ಭಾರತೀಯರಾಗಿದ್ದಾರೆ.
ಕೈಫ್ ಇದು ಸರಿಯೆನಿಸುತ್ತಿಲ್ಲ. ಭಾರತದ ಹಲವಾರು ಮಾಜಿ ಆಟಗಾರರು ಅತ್ಯುತ್ತಮ ಕೋಚ್ಗಳಾಗಬಲ್ಲರೆಂದು ಅವರು ಹೇಳುತ್ತಾರೆ.
‘‘ಐಪಿಎಲ್ ಶುರುವಾದಾಗ ಬಹಳಷ್ಟು ಫ್ರಾಂಚೈಸಿಗಳಿಗೆ ವಿದೇಶಿ ಮೂಲದ ಆಟಗಾರರೇ ಕ್ಯಾಪ್ಟನ್ಗಳಾಗಿದ್ದರು. ಆದರೀಗ ರಾಜಸ್ತಾನ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳಿಗೆ ಮಾತ್ರ ಬೇರೆ ದೇಶದ ಸ್ಕಿಪ್ಪರ್ಗಳಿದ್ದಾರೆ. ಎಮ್ ಎಸ್ ಧೋನಿ, ರೋಹಿತ್ ಶರ್ಮ ಮತ್ತು ಗೌತಮ್ ಗಂಭೀರ್ ತಮ್ಮ ತಮ್ಮ ಕ್ಲಬ್ಗಳಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಹಾಗೆಯೇ ಭಾರತೀಯ ಮೂಲದ ಕೋಚ್ಗಳು ಸಹ ಕ್ರಮೇಣವಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಟೂರ್ನಮೆಂಟ್ನಲ್ಲಿ ಅವರ ಪಾತ್ರ ಮಹತ್ವ ಪಡೆದುಕೊಳ್ಳುತ್ತಿದೆ. ನಾನು ಹೇಳುವುದಿಷ್ಟೆ. ನಾವು ಕೂಡ ಆ ಹುದ್ದೆಗಳನ್ನು ಸಮರ್ಥವಾಗಿನಿಭಾಯಿಸಬಲ್ಲೆವು ಆದರೆ ಅವಕಾಶಗಳ ಕೊರತೆಯಿದೆ,’’ ಎಂದು ಕೈಫ್ ಹೇಳಿದ್ದಾರೆ.
ಕೈಫ್ ಅವರಲ್ಲದೆ, ವಾಸಿಮ್ ಜಾಫರ್ (ಕಿಂಗ್ಸ್ X1 ಪಂಜಾಬ್) ಹಾಗೂ ಅಮೋಲ್ ಮುಜುಂದಾರ್ (ರಾಜಸ್ತಾನ ರಾಯಲ್ಸ್) ಕ್ಲಬ್ಗಳಿಗೆ ಸಹಾಯಕ ಕೋಚ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ, ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್ ಮತ್ತು ಸಂಜಯ ಬಂಗಾರ್ (ಕಿಂಗ್ಸ್ X1 ಪಂಜಾಬ್) ತಂಡಕ್ಕೆ ಹೆಡ್ ಕೋಚ್ಗಳಾಗಿ ಕೆಲಸ ಮಾಡಿದ್ದರು.
ಕೈಫ್ ಕೂಗು ಫ್ರಾಂಚೈಸಿಗಳ ಮಾಲೀಕರ ಕಿವಿ ತಲುಪುತ್ತೋ ಇಲ್ಲವೋ ಅಂತ ಕಾದು ನೋಡಬೇಕು.