AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವ ದಾಖಲೆ: ಅಂತರರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಅತಿ ಹೆಚ್ಚು ಗೋಲು

ರೊನಾಲ್ಡೋಗೆ ಇದು 110ನೇ ಅಂತರರಾಷ್ಟ್ರೀಯ ಗೋಲ್ ಆಗಿತ್ತು. 36 ವರ್ಷದ ರೊನಾಲ್ಡೋ ಜಾವೋ ಮಾರಿಯೋ ಪಾಸ್ ಮಾಡಿದ ಚೆಂಡನ್ನು ಬಲವಾಗಿ ಹೆಡ್ ಮಾಡುವ ಮೂಲಕ ಗೋಲ್ ಗಳಿಸಿದರು.

Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವ ದಾಖಲೆ: ಅಂತರರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಅತಿ ಹೆಚ್ಚು ಗೋಲು
cristiano ronaldo
TV9 Web
| Edited By: |

Updated on:Sep 02, 2021 | 2:13 PM

Share

ಫುಟ್ ಬಾಲ್ ಮಾಂತ್ರಿಕ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಮತ್ತೊಂದು ಸರ್ವಕಾಲಿಕ ವಿಶ್ವದಾಖಲೆ ನಿರ್ಮಿಸಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಗೋಲ್ ಭಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸೆಪ್ಟೆಂಬರ್ 1 ರ ಬುಧವಾರದಂದು ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ  ಈ ನೂತನ ಸಾಧನೆ ಮಾಡಿದ್ದು, ಇರಾನಿನ ಮಾಜಿ ದಿಗ್ಗಜ ಅಲಿ ದಾಯಿ (109 ಗೋಲು) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ವಿಶ್ವಕಪ್ ಫುಟ್ ಬಾಲ್ ಟೂರ್ನಿಯ ಕ್ವಾಲಿಫೈಯಿಂಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪೋರ್ಚುಗಲ್ ತಂಡ 2-1 ಅಂತರದ ಗೋಲುಗಳ ಜಯಭೇರಿ ಭಾರಿಸಿದ್ದು, ಈ ಪಂದ್ಯದಲ್ಲಿ ಗೋಲು ಭಾರಿಸಿ ರೊನಾಲ್ಡೋ ನೂತನ ಸಾಧನೆ ಮಾಡಿದರು. ರೊನಾಲ್ಡೋಗೆ ಇದು 110ನೇ ಅಂತರರಾಷ್ಟ್ರೀಯ ಗೋಲ್ ಆಗಿತ್ತು. 36 ವರ್ಷದ ರೊನಾಲ್ಡೋ ಜಾವೋ ಮಾರಿಯೋ ಪಾಸ್ ಮಾಡಿದ ಚೆಂಡನ್ನು ಬಲವಾಗಿ ಹೆಡ್ ಮಾಡುವ ಮೂಲಕ ಗೋಲ್ ಗಳಿಸಿದರು.

ಕ್ರಿಸ್ಟಿಯಾನೋ ರೊನಾಲ್ಡೋ ಈ ವಿಶ್ವದಾಖಲೆಯನ್ನು ನಿರ್ಮಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಹಾಗೂ ಫುಟ್ ಬಾಲ್ ಪ್ರಿಯರು ರೊನಾಲ್ಡೋ ವಿಶ್ವದಾಖಲೆಯನ್ನು ಕೊಂಡಾಡುತ್ತಿದ್ದಾರೆ. ಫಿಫಾ ವರ್ಲ್ಡ್ಕಪ್ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕ್ರಿಕ್ರಿಸ್ಟಿಯಾನೋ ರೊನಾಲ್ಡೋ ಸಾಧಿಸಿರುವ ವಿಶ್ವ ದಾಖಲೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದೆ.

ಇನ್ನೂ ಕ್ರಿಸ್ಟಿಯಾನೋ ರೊನಾಲ್ಡೋ ಈ ಗೋಲು ದಾಖಲೆಯನ್ನು ಮಾಡಲು 180 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಅತ್ತ ಇರಾನ್ ದೇಶದ ಫುಟ್ಬಾಲ್ ಆಟಗಾರ ಅಲಿ ದಾಯಿ 109 ಗೋಲ್ ದಾಖಲೆಯನ್ನು ಮಾಡಲು ಕೇವಲ 140 ಪಂದ್ಯಗಳನ್ನು ಮಾತ್ರ ತೆಗೆದುಕೊಂಡಿದ್ದರು.

ಫುಟ್ಬಾಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲ್ ಬಾರಿಸಿರುವ ಟಾಪ್ 10 ಫುಟ್ ಬಾಲ್ ಆಟಗಾರರು:

1 ಕ್ರಿಸ್ಟಿಯಾನೋ ರೊನಾಲ್ಡೋ (ಪೋರ್ಚುಗಲ್) 111 ಗೋಲ್

2 ಅಲಿ ದಾಯಿ (ಇರಾನ್) 109 ಗೋಲ್

3 ಮೊಖ್ತರ್ ದಹರಿ (ಮಲೇಷಿಯಾ) 89 ಗೋಲ್

4 ಫೆರೆನ್ಸ್ ಪುಸ್ಕಾಸ್ (ಹಂಗೇರಿ) 84 ಗೋಲ್

5 ಗಾಡ್ಫ್ರೇ ಚಿಟಾಲು (ಜಾಂಬಿಯಾ) 79 ಗೋಲ್

6 ಹುಸೇನ್ ಸಯೀದ್ (ಇರಾಗ್) 78 ಗೋಲ್

7 ಪೀಲೆ (ಬ್ರೆಜಿಲ್) 77 ಗೋಲ್

8 ಅಲಿ ಮಾಬ್ಖೌಟ್ (ಯುಎಇ) * 76 ಗೋಲ್

9 ಸ್ಯಾಂಡರ್ ಕೋಸ್ಕಿಸ್ (ಹಂಗೇರಿ) 75 ಗೋಲ್

10 ಕುನಿಶಿಗೆ ಕಾಮಮೊಟೊ (ಜಪಾನ್) 75 ಗೋಲ್

CPL 2021: 12 ಸಿಕ್ಸರ್, 8 ಫೋರ್: ರುಥೆರ್​ಫಾರ್ಡ್ ಸ್ಫೋಟಕ ಆಟ: ಪೇಟ್ರಿಯಟ್ಸ್​ಗೆ ಊಹಿಸಲಾಗದ ಜಯ

India vs England: 50 ವರ್ಷಗಳಿಂದ ಕಾಯುತ್ತಿದೆ ಭಾರತ: ಓವಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಕಿಂಗ್ ಕೊಹ್ಲಿ ಸೈನ್ಯ?

(Cristiano Ronaldo Breaks Ali Daeis Record For Most International Goals In Mens Football)

Published On - 2:11 pm, Thu, 2 September 21

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?