Paris Olympics 2024: ಕೂದಲೆಳೆಯ ಅಂತರದಲ್ಲಿ ಮನು ಭಾಕರ್ಗೆ ಕೈ ತಪ್ಪಿದ ಪದಕ
Manu Bhaker: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಯಂಗ್ ಶೂಟರ್ ಮನು ಭಾಕರ್ ಅವರ ಅಭಿಯಾನ ಅಂತ್ಯವಾಗಿದೆ. ಈ ಹಿಂದೆ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದ ಮನು, ಈ ಬಾರಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತಕ್ಕಾಗಿ ಮೂರನೇ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನ ಶೂಟಿಂಗ್ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಪದಕ ಗೆಲ್ಲುವ ಮನು ಭಾಕರ್ ಅವರ ಕನಸು ಕಮರಿದೆ. ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆರಂಭದಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕಕ್ಕೆ ಕೊರೊಳೊಡ್ಡುವ ಅವಕಾಶವನ್ನು ತಪ್ಪಿಸಿಕೊಂಡರು. ಫೈನಲ್ ಸುತ್ತಿನ ಆರಂಭದಲ್ಲಿ ಮುನ್ನಡೆ ಪಡೆದಿದ್ದ ಮನು, ಎಲಿಮಿನೇಷನ್ ಸುತ್ತಿನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಮೂರನೇ ಪದಕ ಗೆಲ್ಲುವ ಅವರ ಕನಸು ನುಚ್ಚು ನೂರಾಯಿತು.
ಫೈನಲ್ನಲ್ಲಿ ಮನು ಭಾಕರ್ 28 ಅಂಕಗಳೊಂದಿಗೆ 4ನೇ ಸ್ಥಾನ ಪಡೆದರೆ, ಕಂಚಿನ ಪದಕ ಗೆದ್ದ ಹಂಗೇರಿಯಾದ ಮೇಜರ್ ವೆರೋನಿಕಾ 31 ಪಾಯಿಂಟ್ಸ್ ಕಲೆಹಾಕಿದ್ದರು. ಅಂದರೆ ಕೇವಲ ಮೂರು ಅಂಕಗಳ ಅಂತರದಿಂದ ಮೂರನೇ ಪದಕ ಗೆಲ್ಲುವ ಅವಕಾಶವನ್ನು ಮನು ಭಾಕರ್ ಕೈಚೆಲ್ಲಿಕೊಂಡರು.
ಮಹಿಳಾ 25 ಮೀಟರ್ ಪಿಸ್ತೂಲ್ ಫೈನಲ್ ಸ್ಪರ್ಧೆಯ ಫಲಿತಾಂಶ:
- ಜಿ ಯಾಂಗ್ (ಸೌತ್ ಕೊರಿಯ)- 37 ಅಂಕಗಳು
- ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ (ಫ್ರಾನ್ಸ್)- 37 ಅಂಕಗಳು
- ಮೇಜರ್ ವೆರೋನಿಕಾ (ಹಂಗೇರಿ)- 31 ಅಂಕಗಳು
- ಮನು ಭಾಕರ್ (ಭಾರತ)- 28 ಅಂಕಗಳು
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದ ಪದಕಗಳು:
- ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ಗೆ ಕಂಚಿನ ಪದಕ.
- 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮನು ಭಾಕರ್ಗೆ ಕಂಚಿನ ಪದಕ.
- ಪುರುಷರ 50 ಮೀ ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆಗೆ ಕಂಚಿನ ಪದಕ.
ಮನು ಭಾಕರ್ ಅವರ ಸಾಧನೆಗಳು:
ಕ್ರೀಡಾಕೂಟ | ಸಾಧನೆ |
ಪ್ಯಾರಿಸ್ ಒಲಿಂಪಿಕ್ಸ್ 2024 | 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಕಂಚಿನ ಪದಕ |
ವಿಶ್ವ ಚಾಂಪಿಯನ್‌ಶಿಪ್ಸ್ 2023 | 25 ಮೀಟರ್ ಪಿಸ್ತೂಲ್ ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕ (2023)
25 ಮೀಟರ್ ಪಿಸ್ತೂಲ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ (2022) |
ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್ 2019 | 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕ |
ಕಾಮನ್‌ವೆಲ್ತ್ ಗೇಮ್ಸ್ 2018 | 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ |
ಯೂತ್ ಒಲಿಂಪಿಕ್ ಗೇಮ್ಸ್ 2018 | 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ
10 ಮೀ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ |
Published On - 1:23 pm, Sat, 3 August 24