PKL 2023: ಇಂದು ಬೆಂಗಳೂರು ಬುಲ್ಸ್​ಗೆ 2ನೇ ಪಂದ್ಯ; ಎದುರಾಳಿ ಯಾರು ಗೊತ್ತಾ?

Pro Kabaddi 2023: ದಿನದ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಪ್ರೊ ಕಬಡ್ಡಿಯಲ್ಲಿ ಇದುವರೆಗೆ 20 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬುಲ್ಸ್ ಮೇಲೆ ಸವಾರಿ ಮಾಡಿರುವ ವಾರಿಯರ್ಸ್​ 11 ಪಂದ್ಯಗಳನ್ನು ಗೆದ್ದು ಬೀಗಿದೆ. ಉಳಿದಂತೆ ಬೆಂಗಳೂರು ತಂಡ 9 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

PKL 2023: ಇಂದು ಬೆಂಗಳೂರು ಬುಲ್ಸ್​ಗೆ 2ನೇ ಪಂದ್ಯ; ಎದುರಾಳಿ ಯಾರು ಗೊತ್ತಾ?
ಬೆಂಗಳೂರು ಬುಲ್ಸ್ ತಂಡ
Follow us
ಪೃಥ್ವಿಶಂಕರ
|

Updated on: Dec 04, 2023 | 1:35 PM

ಪ್ರೊ ಕಬಡ್ಡಿ ಲೀಗ್​ನ (Pro Kabaddi 2023) 10 ಆವೃತ್ತಿಯ ಮೂರನೇ ದಿನದಂದು ಅಂದರೆ ಡಿಸೆಂಬರ್ 4 ರಂದು ಒಟ್ಟು 2 ಪಂದ್ಯಗಳು ನಡೆಯಲ್ಲಿವೆ. ಇಂದಿನ ಐದನೇ ಪಂದ್ಯದಲ್ಲಿ ಅಂದರೆ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹಾಗೆಯೇ ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ (Bengaluru Bulls vs Bengal Warriors) ನಡುವೆ ಫೈಟ್ ನಡೆಯಲ್ಲಿದೆ. ಎರಡೂ ಪಂದ್ಯಗಳು ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ (Transstadia Stadium in Ahmedabad) ನಡೆಯಲಿದ್ದು, ಕ್ರಮವಾಗಿ 8 ಹಾಗೂ 9 ಗಂಟೆಗೆ ಆರಂಭವಾಗಲಿವೆ. ಹಾಗೆಯೇ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿದ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ.

ಫೈನಲಿಸ್ಟ್‌ಗಳ ನಡುವೆ ಪೈಪೋಟಿ

ಕಳೆದ ಆವೃತ್ತಿಯ ಎರಡು ಫೈನಲಿಸ್ಟ್‌ ತಂಡಗಳ ಮುಖಾಮುಖಿ ವರದಿಯನ್ನು ನೋಡುವುದಾದರೆ, ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಪಿಂಕ್ ಪ್ಯಾಂಥರ್ಸ್ ತಂಡ 11 ಪಂದ್ಯಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದರೆ, ಪುಣೇರಿ ಪಲ್ಟನ್ ಕೂಡ ಎಂಟು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವಣ 21 ಪಂದ್ಯಗಳ ಪೈಕಿ ಎರಡು ಪಂದ್ಯಗಳು ಮಾತ್ರ ಫಲಿತಾಂಶವಿಲ್ಲದೆ ಡ್ರಾದಲ್ಲಿ ಅಂತ್ಯಗೊಂಡಿವೆ.

Pro Kabaddi 2023: ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್​ಗೆ ರೋಚಕ ಜಯ

ಬುಲ್ಸ್- ವಾರಿಯರ್ಸ್​ ಮುಖಾಮುಖಿ ವರದಿ

ಇನ್ನು ದಿನದ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಪ್ರೊ ಕಬಡ್ಡಿಯಲ್ಲಿ ಇದುವರೆಗೆ 20 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬುಲ್ಸ್ ಮೇಲೆ ಸವಾರಿ ಮಾಡಿರುವ ವಾರಿಯರ್ಸ್​ 11 ಪಂದ್ಯಗಳನ್ನು ಗೆದ್ದು ಬೀಗಿದೆ. ಉಳಿದಂತೆ ಬೆಂಗಳೂರು ತಂಡ 9 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಉಭಯ ತಂಡಗಳ ಕೊನೆಯ ಮುಖಾಮುಖಿಯಲ್ಲಿ ವಾರಿಯರ್ಸ್​ ತಂಡ 41- 38 ರಿಂದ ಬುಲ್ಸ್ ತಂಡವನ್ನು ಮಣಿಸಿತ್ತು. ಹೀಗಾಗಿ ಹಿಂದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಬುಲ್ಸ್ ತಂಡ ಅಖಾಡಕ್ಕಿಳಿಯಲ್ಲಿದೆ.

ಬುಲ್ಸ್​ಗೆ ಸೋಲಿನ ಆರಂಭ

ಇನ್ನು ಪ್ರೊ ಕಬಡ್ಡಿ ಲೀಗ್​ನ 10ನೇ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯವನ್ನಾಡಿದ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 34- 31 ಅಂತರದಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಲೀಗ್​ನಲ್ಲಿ ಮೊದಲ ಗೆಲುವು ದಾಖಲಿಸುವ ಗುರಿ ಬುಲ್ಸ್ ತಂಡಕ್ಕಿದೆ. ಇತ್ತ ಲೀಗ್​ನಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಬೆಂಗಾಲ್ ವಾರಿಯರ್ಸ್​ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.

ಉಭಯ ತಂಡಗಳು

ಬೆಂಗಳೂರು ಬುಲ್ಸ್: ಭರತ್, ವಿಕಾಸ್ ಕಾಂಡೋಲಾ, ನೀರಜ್ ನರ್ವಾಲ್, ಮೋನು, ಅಭಿಷೇಕ್ ಸಿಂಗ್, ಸುಶೀಲ್, ಬಂಟಿ, ಪಿಯೋಟರ್ ಪಮುಲಕ್, ಅಕ್ಷಿತ್, ಅಮನ್, ಸೌರಭ್ ನಂದಲ್, ಯಶ್ ಹೂಡಾ, ಸುರ್ಜೀತ್ ಸಿಂಗ್, ವಿಶಾಲ್, ಅಂಕಿತ್, ಪಾರ್ತೀಕ್, ಸುಂದರ್, ರಕ್ಷಿತ್, ರೋಹಿತ್ ಕುಮಾರ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಲಿಟನ್ ಅಲಿ, ಅರುಳ್ನಂತಬಾಬು, ಆದಿತ್ಯ ಶಂಕರ್ ಪೊವಾರ್, ಸಚಿನ್ ನರ್ವಾಲ್ ಮತ್ತು ರಾನ್ ಸಿಂಗ್.

ಬೆಂಗಾಲ್ ವಾರಿಯರ್ಸ್: ಮಣಿಂದರ್ ಸಿಂಗ್, ಶ್ರೀಕಾಂತ್ ಜಾಧವ್, ಸುಯೋಗ್ ಬಬನ್ ಗಾಯ್ಕರ್, ಪರ್ಶಾಂತ್ ಕುಮಾರ್, ಅಸ್ಲಾಂ ಸಜಾ ಮೊಹಮ್ಮದ್ ತಂಬಿ, ಅಕ್ಷಯ್, ವಿಶ್ವಾಸ್ ಎಸ್, ಚಾಯ್-ಮಿಂಗ್ ಚಾಂಗ್, ನಿತಿನ್ ಕುಮಾರ್, ಆರ್ ಗುಹಾನ್, ಮಹಾರುದ್ರ ಗರ್ಜೆ, ಶುಭಂ ಶಿಂಧೆ, ವೈಭವ್ ಭೌಸಾಹೇಬ್ ಗರ್ಜೆ. ಆದಿತ್ಯ ಎಸ್. ಶಿಂಧೆ, ಅಕ್ಷಯ್ ಕುಮಾರ್, ಶ್ರೇಯಸ್ ಉಂಬರದಾಂಡ್, ದೀಪಕ್ ಅರ್ಜುನ್ ಶಿಂಧೆ, ದರ್ಪಣ್, ನಿತಿನ್ ರಾವಲ್ ಮತ್ತು ಅಕ್ಷಯ್ ಭರತ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ