ಬೆಂಗಳೂರಿನಲ್ಲಿ ಮೊದಲ ಬಾರಿಗೆ SFA ಚಾಂಪಿಯನ್‌ಶಿಪ್; ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಹೇಗೆ? ಇಲ್ಲಿದೆ ಪೂರ್ಣ ವಿವರ

SFA Championships: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸ್ಪೋರ್ಟ್ಸ್ ಫಾರ್ ಆಲ್ ಚಾಂಪಿಯನ್‌ಶಿಪ್‌ ನಡೆಯುತ್ತಿದ್ದು, ಬೆಂಗಳೂರಿನ ಕಂಠೀರವ ಸ್ಟೇಡಿಯಂ ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಈ ಕ್ರೀಡಾಕೂಟ ನಡೆಯಲ್ಲಿದೆ. 2024 ರ ಜನವರಿಯಿಂದ ಆರಂಭವಾಗಲಿರುವ ಈ ಚಾಂಪಿಯನ್​ಶಿಪ್​ನಲ್ಲಿ ಬೆಂಗಳೂರಿನ ಶಾಲೆಗಳು 30 ಕ್ಕೂ ಅಧಿಕ ವಿವಿದ ಕ್ರೀಡೆಗಳಲ್ಲಿ ಸ್ಪರ್ಧಿಸಬಹುದಾಗಿದೆ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ SFA ಚಾಂಪಿಯನ್‌ಶಿಪ್; ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಹೇಗೆ? ಇಲ್ಲಿದೆ ಪೂರ್ಣ ವಿವರ
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on:Sep 20, 2023 | 2:19 PM

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸ್ಪೋರ್ಟ್ಸ್ ಫಾರ್ ಆಲ್ ಚಾಂಪಿಯನ್‌ಶಿಪ್‌ (SFA Championship) ನಡೆಯುತ್ತಿದ್ದು, ಬೆಂಗಳೂರಿನ ಕಂಠೀರವ ಸ್ಟೇಡಿಯಂ ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ (Kanteerava stadium and Koramangala Indoor stadium, w) ಈ ಕ್ರೀಡಾಕೂಟ ನಡೆಯಲ್ಲಿದೆ. 2024 ರ ಜನವರಿಯಿಂದ ಆರಂಭವಾಗಲಿರುವ ಈ ಚಾಂಪಿಯನ್​ಶಿಪ್​ನಲ್ಲಿ ಬೆಂಗಳೂರಿನ ಶಾಲೆಗಳು 30 ಕ್ಕೂ ಅಧಿಕ ವಿವಿದ ಕ್ರೀಡೆಗಳಲ್ಲಿ ಸ್ಪರ್ಧಿಸಬಹುದಾಗಿದೆ. ನಗರದಲ್ಲಿ ಇದೇ ಮೊದಲ ಬಾರಿಗೆ ಈ ಈವೆಂಟ್ ಆಯೋಜನೆಗೊಳ್ಳುತ್ತಿದ್ದು, ಕ್ರೀಡಾ ವಿಭಾಗದಲ್ಲಿ ಯಾವ ಶಾಲೆ ಬಲಿಷ್ಠವಾಗಿದೆ ಹಾಗೂ ನಗರದ ಕ್ರೀಡಾ ಸಾಮರ್ಥ್ಯವನ್ನು ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ.

ಇನ್ನು ಈ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಬೇಕೆನ್ನುವ ಶಾಲೆಗಳು www.sfaplay.com ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೆ ಪ್ರತಿ ಶಾಲೆಯು 30 ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಸ್ಪರ್ಧಿಸಲು ತಮ್ಮ ಶಾಲೆಗಳಿಂದ ಅಥ್ಲೀಟ್‌ಗಳ ತಂಡವನ್ನು ಕಳುಹಿಸಬಹುದಾಗಿದೆ.

ಕ್ರೀಡಾಕೂಟದ ಸೌಲಭ್ಯಗಳು

ಈ ಚಾಂಪಿಯನ್‌ಶಿಪ್​ನಲ್ಲಿ ಪಾಲ್ಗೊಳ್ಳುವ ಯುವ ಅಥ್ಲೀಟ್‌ಗಳಿಗೆ ವೃತ್ತಿಪರ ಮೂಲಸೌಕರ್ಯ, ಸಲಕರಣೆಗಳು, ಪ್ರಮಾಣೀಕೃತ ಪಂದ್ಯದ ಅಧಿಕಾರಿಗಳು, ರೆಫರಿಗಳು, ಸಂಪೂರ್ಣ ಸುಸಜ್ಜಿತ ವೈದ್ಯಕೀಯ ಕೇಂದ್ರಗಳು, ಫಿಸಿಯೋಥೆರಪಿಸ್ಟ್‌ಗಳು, ಕ್ಲಿನಿಕ್‌ಗಳ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಸ್ಪರ್ಧಿಗಳಿಗೆ ವಿಶೇಷ ಕಾರ್ಯಾಗಾರ, ತಮ್ಮ ಪ್ರದರ್ಶನದ ವಿಶ್ಲೇಷಣೆ ಮತ್ತು ಪಂದ್ಯದ ವೀಡಿಯೋಗ್ರಫಿಗಾಗಿ ಡಿಜಿಟಲ್ ಸಂಯೋಜಿತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಕ್ರೀಡೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ

ಮೊದಲ ಆವೃತ್ತಿಯ ಚಾಂಪಿಯನ್​ಶಿಪ್ ಆಯೋಜನೆಯ ಬಗ್ಗೆ ಮಾತನಾಡಿದ ಸ್ಪೋರ್ಟ್ಸ್ ಫಾರ್ ಆಲ್ (ಎಸ್‌ಎಫ್‌ಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಾಸ್ ಜೋಶಿ, ‘ಚಿಕ್ಕ ವಯಸ್ಸಿನಲ್ಲೇ ಬಹು-ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಅವರ ಬೆಳವಣಿಗೆಗೆ ಸಹಕಾರಿಯಾಗಲಿದೆ. ತನ್ನ ತ್ವರಿತ ಬೆಳವಣಿಗೆಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿರುವ ಬೆಂಗಳೂರು ಭವಿಷ್ಯದ ಕ್ರೀಡಾ ಚಾಂಪಿಯನ್‌ಗಳನ್ನು ಸೃಷ್ಟಿಸುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಅಲ್ಲದೆ ಅಕಾಡೆಮಿ ಮತ್ತು ತರಬೇತಿ ಕೇಂದ್ರಗಳನ್ನು ತೆರೆಯುವ ಮೂಲಕ ಪ್ರತಿಯೊಂದು ಕ್ರೀಡೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದುವೆ ನಾವು ಎಸ್‌ಎಫ್‌ಎ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯನ್ನು ಬೆಂಗಳೂರಿನಲ್ಲಿ ನಡೆಸಲು ಪ್ರೇರಿಪಿಸಿದೆ ಎಂದಿದ್ದಾರೆ.

ಈ ಸ್ಪರ್ಧೆಯಲ್ಲಿ 3 ರಿಂದ 18 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ತಮಗಿಷ್ಟದ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ. ಚಾಂಪಿಯನ್​ಶಿಪ್ ಆರಂಭಕ್ಕೆ ಉಳಿದಿರುವ 4 ತಿಂಗಳ ಸಮಯದಲ್ಲಿ ನಗರದ 2 ಲಕ್ಷ ಕ್ರೀಡಾಪಟುಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವುದು ಆಯೋಜಕರ ಗುರಿಯಾಗಿದೆ.

28 ಕ್ರೀಡಾ ವಿಭಾಗಗಳಲ್ಲಿ 200,000 ಕ್ರೀಡಾಪಟುಗಳು

ಇನ್ನು ಸ್ಪೋರ್ಟ್ಸ್ ಫಾರ್ ಆಲ್ ಸಂಸ್ಥೆಯ ಬಗ್ಗೆ ಹೇಳಬೇಕೆಂದರೆ.. ಇದು ಭಾರತದ ಬಹು-ಕ್ರೀಡಾ ತಳಮಟ್ಟದ ಸ್ಪರ್ಧೆಯ ವೇದಿಕೆಯಾಗಿದೆ. ಸ್ಪೂರ್ತಿದಾಯಕ ಮತ್ತು ಸಂತೋಷದಾಯಕ ಕ್ರೀಡಾ ಅನುಭವಗಳ ಮೂಲಕ ಯುವಕರನ್ನು ಕ್ರೀಡೆಗಳತ್ತ ವಾಲುವಂತೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. 2015 ರಲ್ಲಿ ಮೊದಲ ಬಾರಿಗೆ ಈ ಸಂಸ್ಥೆ ಸ್ಪೋರ್ಟ್ಸ್ ಫಾರ್ ಆಲ್ ಚಾಂಪಿಯನ್​ಶಿಪ್ ಆರಂಭಿಸಿತ್ತು. ಅಂದಿನಿಂದ ಈ ಕ್ರೀಡಾಕೂಟ ಮುಂಬೈ, ಪುಣೆ, ಹೈದರಾಬಾದ್ ಮತ್ತು ಉತ್ತರಾಖಂಡ ಸೇರಿದಂತೆ ದೇಶದ ವಿವಿದ ನಗರಗಳಲ್ಲಿ ನಡೆದಿದೆ. ಇಲ್ಲಿಯವರೆಗೆ 12 ಚಾಂಪಿಯನ್‌ಶಿಪ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದರಲ್ಲಿ 28 ಕ್ರೀಡಾ ವಿಭಾಗಗಳಲ್ಲಿ 200,000 ಕ್ರೀಡಾಪಟುಗಳು ಮತ್ತು 4000 ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿವೆ.

ಇನ್ನು 2023 ರಲ್ಲಿ, ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ಇಂದೋರ್, ಜೈಪುರ, ಡೆಹ್ರಾಡೂನ್, ಪುಣೆ ಮತ್ತು ನಾಗ್ಪುರ ನಗರಗಳು ಸೇರಿದಂತೆ ಒಟ್ಟು 10 ಸ್ಥಳಗಳಲ್ಲಿ ಈ ಚಾಂಪಿಯನ್‌ಶಿಪ್‌ ನಡೆಸಲು ತೀರ್ಮಾನಿಸಲಾಗಿದ್ದು, 2 ಲಕ್ಷ ಕ್ರೀಡಾಪಟುಗಳು ಈ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Wed, 20 September 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ