AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಲ್ ಜ್ಯಾಕ್ಸ್ ಬಿರುಗಾಳಿ ಬ್ಯಾಟಿಂಗ್: 57 ಎಸೆತಗಳಲ್ಲಿ ಮುಗಿದ ಪಂದ್ಯ

Oval Invincibles vs Manchester Originals: ತವಾಂಡಾ ಮುಯೆಯೆ 28 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 59 ರನ್ ಬಾರಿಸಿದರು. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡವು ಕೇವಲ 57 ಎಸೆತಗಳಲ್ಲಿ 129 ರನ್ ಬಾರಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಓವಲ್ ಇನ್ವಿನ್ಸಿಬಲ್ಸ್ ತಂಡವು 8 ಪಾಯಿಂಟ್ಸ್​ನೊಂದಿಗೆ ದಿ ಹಂಡ್ರೆಡ್ ಲೀಗ್​ ಅಂಕ ಪಟ್ಟಿಯಲ್ಲಿ​ ಅಗ್ರಸ್ಥಾನಕ್ಕೇರಿದೆ.

ವಿಲ್ ಜ್ಯಾಕ್ಸ್ ಬಿರುಗಾಳಿ ಬ್ಯಾಟಿಂಗ್: 57 ಎಸೆತಗಳಲ್ಲಿ ಮುಗಿದ ಪಂದ್ಯ
Will Jacks
ಝಾಹಿರ್ ಯೂಸುಫ್
| Edited By: |

Updated on:Aug 24, 2026 | 5:23 PM

Share

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ವಿಲ್ ಜ್ಯಾಕ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು 100 ಎಸೆತಗಳಲ್ಲಿ 128 ರನ್​ಗಳಿಸಿ ಆಲೌಟ್ ಆಯಿತು.

129 ರನ್​ಗಳ ಗುರಿ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ಪರ ವಿಲ್ ಜ್ಯಾಕ್ಸ್​ ಹಾಗೂ ತವಾಂಡಾ ಮುಯೆಯೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ವಿಲ್ ಜ್ಯಾಕ್ಸ್​ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 26 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 61 ರನ್ ಬಾರಿಸಿ ಔಟಾದರು.

ಮತ್ತೊಂದೆಡೆ ತವಾಂಡಾ ಮುಯೆಯೆ 28 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 59 ರನ್ ಬಾರಿಸಿದರು. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡವು ಕೇವಲ 57 ಎಸೆತಗಳಲ್ಲಿ 129 ರನ್ ಬಾರಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಓವಲ್ ಇನ್ವಿನ್ಸಿಬಲ್ಸ್ ತಂಡವು 8 ಪಾಯಿಂಟ್ಸ್​ನೊಂದಿಗೆ ದಿ ಹಂಡ್ರೆಡ್ ಲೀಗ್​ ಅಂಕ ಪಟ್ಟಿಯಲ್ಲಿ​ ಅಗ್ರಸ್ಥಾನಕ್ಕೇರಿದೆ.

Published On - 12:54 pm, Sun, 10 August 25

Follow Us
ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ
ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ