Gadag: ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟ; ಆಯೋಜಕರ ಅವ್ಯವಸ್ಥೆಗೆ ಮಹಿಳಾ ಹಾಕಿ ಪಟ್ಟುಗಳು ಹೈರಾಣ

Gadag: ರಾತ್ರಿಯಿಡೀ ಜರ್ನಿ ಮಾಡಿ ಗದಗ ನಗರಕ್ಕೆ ಆಗಮಿಸಿದ ಮಂಡ್ಯ, ಮೈಸೂರು, ಬೆಂಗಳೂರು, ಮಡಿಕೇರಿ, ದಾವಣಗೇರೆ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳ ಕ್ರೀಡಾಪಟುಗಳಿಗೆ ಸರಿಯಾಗಿ ಗದಗ ಪದವಿಪೂರ್ವ ಶಿಕ್ಷಣ ಇಲಾಖೆ ಯಾವುದೇ ವ್ಯವಸ್ಥೆ ಮಾಡಿಲ್ಲ.

Gadag: ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟ; ಆಯೋಜಕರ ಅವ್ಯವಸ್ಥೆಗೆ ಮಹಿಳಾ ಹಾಕಿ ಪಟ್ಟುಗಳು ಹೈರಾಣ
ಮಹಿಳಾ ಹಾಕಿ ಪಟ್ಟುಗಳ ನರಳಾಟ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಪೃಥ್ವಿಶಂಕರ

Updated on:Dec 08, 2023 | 12:02 PM

ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟದಲ್ಲಿ (State Level Hockey Tournament) ಭಾಗಿಯಾಗಲು ದೂರದ ಊರುಗಳಿಂದ ಆಗಮಿಸಿದ್ದ ಮಹಿಳಾ ಹಾಕಿ ಪಟ್ಟುಗಳು (Women’s Hockey Players) ಆಯೋಜಕರ ಅವ್ಯವಸ್ಥೆಯಿಂದ ಹೈರಾಣಾಗಿರುವ ಘಟನೆ ಗದಗದಲ್ಲಿ ನಡೆದಿದೆ. ವಾಸ್ತವವಾಗಿ ಗದಗ (Gadag) ನಗರದಲ್ಲಿ ನಾಳೆಯಿಂದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟ ಆಯೋಜನೆ ಗದಗ ಪದವಿ ಪೂರ್ವ ಶಿಕ್ಷಣ ಇಲಾಖೆ ವಹಿಸಿಕೊಂಡಿದೆ. ಗದಗ ಜಿಲ್ಲೆಗೆ ಆಗಮಿಸಲಿರೋ 30 ಜಿಲ್ಲೆಯ ಹಾಕಿ ಕ್ರೀಡಾಪಟುಗಳಿಗೆ ವಸತಿ, ಉಪಹಾರ, ಊಟ, ನೀರು, ವಾಹನ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡುವುದಾಗಿ ಗದಗ ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳಿತ್ತು. ಆದರೆ ನಾಳೆಯಿಂದ ನಡೆಯಲಿರೋ ಕ್ರೀಡಾಕೂಟಕ್ಕೆ ರಾಜ್ಯ 30 ಜಿಲ್ಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಗದಗ ನಗರದಕ್ಕೆ ಬಂದಿಳಿದ ಕ್ರೀಡಾಪಟಗಳು ಇಲ್ಲಿನ ವ್ಯವಸ್ಥೆಗೆ ವಿಲವಿಲ ಅಂತಿದ್ದಾರೆ.

ಬಿಸಿಲಲ್ಲಿ ಕಾಯುವ ಸ್ಥಿತಿ

ರಾತ್ರಿಯಿಡೀ ಜರ್ನಿ ಮಾಡಿ ಗದಗ ನಗರಕ್ಕೆ ಆಗಮಿಸಿದ ಮಂಡ್ಯ, ಮೈಸೂರು, ಬೆಂಗಳೂರು, ಮಡಿಕೇರಿ, ದಾವಣಗೇರೆ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳ ಕ್ರೀಡಾಪಟುಗಳಿಗೆ ಸರಿಯಾಗಿ ಗದಗ ಪದವಿಪೂರ್ವ ಶಿಕ್ಷಣ ಇಲಾಖೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ರಾತ್ರಿಯಿಡೀ ಜರ್ನಿ ಮಾಡಿ ಬೆಳಗ್ಗೆ 7 ಗಂಟೆಗೆ ಆಗಮಿಸಿದ ಕ್ರೀಡಾಪಟುಗಳು ಮೂರ್ನಾಲ್ಕು ಗಂಟೆ ಬಿಸಿಲಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.

ಅಲ್ಲದೆ 12 ಗಂಟೆಯಾದರೂ ಶಿಕ್ಷಣ ಇಲಾಖೆ ಯಾವ ಅಧಿಕಾರಿಗಳು ಎಪಿಎಂಸಿ ಆವರಣದಲ್ಲಿರುವ ಕೆ ಎಚ್ ಪಾಟೀಲ್ ಸಭಾಭವನದತ್ತ ಸುಳಿದಿಲ್ಲ. ಹೀಗಾಗಿ ಗದಗ ಪಿಯು ಶಿಕ್ಷಣ ಇಲಾಖೆ ವಿರುದ್ಧ ಮಹಿಳಾ ಹಾಕಿ ಪಟುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಬಂದಿಳಿದ ಮಹಿಳಾ ಹಾಕಿ ಕ್ರೀಡಾಪಟುಗಳಿಗೆ ಕೊಠಡಿ ವ್ಯವಸ್ಥೆ ಮಾಡಿಲ್ಲ. ಮಕ್ಕಳಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿಲ್ಲ. ಕೊಠಡಿಗಳು ಸರಿಯಿಲ್ಲ ಸರ್ ಗಬ್ಬು ನಾರುತ್ತಿವೆ. ಯಾವುದೇ ವ್ಯವಸ್ಥೆ ಸರಿ‌ ಇಲ್ಲ ಅಂತ‌ ಯುವತಿಯರು ಆಕ್ರೋಶ ಹೊರಹಾಕಿದ್ದಾರೆ.

ಗದಗ: ನಿರ್ವಹಣೆ ಇಲ್ಲದೇ ಹಳ್ಳಹಿಡಿದ ಕೋಟಿ ವೆಚ್ಚದ ಸಿಂಥೆಟಿಕ್ ಟ್ರ್ಯಾಕ್; ಕ್ರೀಡಾ ಇಲಾಖೆ ನಿರ್ಲಕ್ಷ್ಯಕ್ಕೆ ಅಥ್ಲೀಟ್​ಗಳ ಆಕ್ರೋಶ

ಊಟದ ವ್ಯವಸ್ಥೆ ಕೂಡ ಆಗಿರಲಿಲ್ಲ

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಹಿಳಾ ಹಾಕಿ ಕ್ರೀಡಾಪಟುಗಳಿಗೆ ಗದಗ ನಗರದ ಕೆ ಎಚ್ ಪಾಟೀಲ್ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ ಅಂತ ಕಳಿಸಿದ್ದಾರೆ. ಇಲ್ಲಿಗೆ ಬಂದ ವಿದ್ಯಾರ್ಥಿನಿಯರಿಗೆ ಕಂಡಿದ್ದು, ಕಸದತೊಟ್ಟಿಯಂತ ಗಬ್ಬು ನಾರುವ ಕೊಠಡಿಗಳು. ಯಾವುದೇ ವ್ಯವಸ್ಥೆ ಇಲ್ಲದೇ ನೂರಾರು ಹಾಕಿಪಟುಗಳು ಸಭಾಭವನದ ಎದುರಲ್ಲೇ ಬಿಸಿಲಿಲ್ಲಿ ಕಾಯಬೇಕಾಯಿತು. ಅಲ್ಲದೆ ಹಾಕಿಪಟುಗಳುಗಳಿಗೆ ಊಟದ ವ್ಯವಸ್ಥೆ ಕೂಡ ಆಗಿರಲಿಲ್ಲ. ಹೀಗಾಗಿ ಹಾಕಿಪಟುಗಳು ತಮ್ಮ ಸ್ವಂತ ಖರ್ಚಿನಿಂದಲೇ ಹೊರಗಡೆಯಿಂದ ಇಡ್ಲಿ, ವಡೆ ತಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಯಿತು.

ಆದರೆ ಕುಡಿಯುವ ನೀರು ಕೊಡುವಷ್ಟು ಸೌಜನ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಮಾಡದಿರುವುದು ವಿದ್ಯರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇಂಥ ರೂಂನಲ್ಲಿ ಇರೋದು ಹೇಗೆ ಸರ್. ಗಬ್ಬು ವಾಸನೆಯಿರುವ ಇಂಥ ಕೊಠಡಿಯಲ್ಲಿ ಮಲಗೋದು ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಶೌಚಕ್ಕೆ ಹೋಗಬೇಕಾದ್ರೆ ನೀರು ಇಲ್ಲ. ಬಕೇಟ್, ಚೆಂಬುಗಳು ಇಲ್ಲದೇ ಸುಮಾರ ನಾಲ್ಕೈದು ಗಂಟೆ ಯುವತಿಯರು ಪರದಾಡಿದ್ದಾರೆ.

ಉಪನಿರ್ದೇಶಕರ ಹಾರಿಕೆ ಉತ್ತರ

ಸುಮಾರು 3-4 ತಾಸಿಗೂ ಹೆಚ್ಚು ಕಾಲ ಕೆ ಎಚ್ ಪಾಟೀಲ ಸಭಾಭವನದ ಹೊರಗೆ ಕುಳಿತಿರುವ ಆಟಗಾರ್ತಿಯರು ಬಳಿಕ ಪದವಿ ಪೂರ್ವ ಉಪನಿರ್ದೇಶಕರಿಗೆ ಕರೆ ಮಾಡಿ ವಿಚಾರಿಸಿದರೂ ಡೋಂಟ್ ಕೇರ್ ಎಂದಿದ್ದಾರೆ. ಇದು ಕ್ರೀಡಾಪಟುಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ವ್ಯವಸ್ಥೆ ಮಾಡೋಕೆ ಆಗದಿದ್ದರೆ ಯಾಕೇ ಆಯೋಜನೆ ಮಾಡಬೇಕು ಅಂತ ಕಿಡಿಕಾರಿದ್ದಾರೆ. ಕ್ರೀಡಾಪಟುಗಳ ಕಾಲ್ ಮಾಡಿದ್ರೆ ಗದಗ ಪದವಿ ಪೂರ್ವ ಉಪನಿರ್ದೇಶಕ ಎಂ ಕೃಷ್ಣಪ್ಪ ಹಾರಿಕೆ ಉತ್ತರ ನೀಡಿದ್ದಾರಂತೆ ಅಂತ ಡಿಡಿ ಪಿಯು ವಿರುದ್ಧ ಕ್ರೀಡಾಪಟುಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಸಭಾಭವನಕ್ಕೆ ಲಗ್ಗೆ ಇಟ್ಟ ಸುದ್ದಿ ತಿಳಿಯುತ್ತಿದ್ದಂತೆ ಓಡೋಡಿ ಬಂದ ಅಧಿಕಾರಿಗಳು ಆಗ ಸಭಾಭವನ ಸ್ವಚ್ಛತೆಗೆ ಮುಂದಾಗಿದ್ದಾರೆ. ಬಕೇಟ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ನಿರ್ಲಕ್ಷ್ಯ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಒಟ್ಟಾರೆಯಾಗಿ ಅಧಿಕಾರಿಗಳ ಮಾಡಿದ ನಿರ್ಲಕ್ಷ್ಯ ಗದಗ ಜಿಲ್ಲೆಗೆ ಕಪ್ಪುಮಸಿ ಬಳಿದಂತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 am, Fri, 8 December 23