Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Recharge: ವಾಟ್ಸಾಪ್ ಮೂಲಕವೂ ಜಿಯೋ ಗ್ರಾಹಕರು ರೀಚಾರ್ಜ್ ಮಾಡಬಹುದು; ಇಲ್ಲಿದೆ ಮಾಹಿತಿ

Reliance Jio Recharge Through WhatsApp: ರಿಲಯನ್ಸ್ ಜಿಯೋ ಬಳಕೆದಾರರು ವಾಟ್ಸಾಪ್ ಮೂಲಕ ರೀಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ. ಅಷ್ಟೇ ಅಲ್ಲ, ಇನ್ನೂ ಹಲವು ಸೇವೆಗಳನ್ನು ವಾಟ್ಸಾಪ್ ಮೂಲಕವಾಗಿ ಪಡೆಯಬಹುದು.

Jio Recharge: ವಾಟ್ಸಾಪ್ ಮೂಲಕವೂ ಜಿಯೋ ಗ್ರಾಹಕರು ರೀಚಾರ್ಜ್ ಮಾಡಬಹುದು; ಇಲ್ಲಿದೆ ಮಾಹಿತಿ
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
Follow us
TV9 Web
| Updated By: Digi Tech Desk

Updated on:Jun 09, 2021 | 8:51 PM

ರಿಲಯನ್ಸ್​ ಜಿಯೋದ ವಾಟ್ಸಾಪ್ ಚಾಟ್​ಬಾಟ್ ‘ಜಿಯೋಕೇರ್’ನೊಂದಿಗೆ ಪ್ಲಾಟ್​ಫಾರ್ಮ್ ಮೂಲಕ ನೇರವಾಗಿ ರೀಚಾರ್ಜ್​ ಸೇವೆ ಸೇರ್ಪಡೆ ಮಾಡಿದೆ. ಜಿಯೋ ಸಿಮ್ ಕಾರ್ಡ್​ ಇರುವಂಥವರು ಜಿಯೋಕೇರ್ ಸಂಖ್ಯೆ 7000770007ಗೆ ವಾಟ್ಸಾಪ್​ನಲ್ಲಿ hi ಎಂದು ಕಳುಹಿಸಬೇಕು. ಮತ್ತು ಆ ನಂತರ ‘Jio SIM Recharge’ ಅನ್ನು ಮುಖ್ಯ ಮೆನು ಆಯ್ಕೆಯಲ್ಲಿ ಹುಡುಕಬೇಕು. ಪಾವತಿ ಮಾಡುವುದಕ್ಕೆ ಬಳಕೆದಾರರು ವಿವಿಧ ರೀಚಾರ್ಜ್ ಹೋಸ್ಟ್​ಗಳನ್ನು ಆರಿಸಿಕೊಳ್ಳಬಹುದು. ಅಂದರೆ Gpay, PhonePe, Amazon Pay, ಪೇಟಿಎಂ ಮತ್ತು ಇತರ ಇ- ವ್ಯಾಲೆಟ್​ಗಳ ಮೂಲಕ ಪಾವತಿಸುವುದಕ್ಕೆ ಆಯ್ಕೆಗಳಿರುತ್ತವೆ. ಅಂದಹಾಗೆ ಜಿಯೋಕೇರ್ ವಾಟ್ಸಾಪ್ ಚಾಟ್​ಬಾಟ್ ಮೂಲಕ ಇತರ ಜಿಯೋ ಬಳಕೆದಾರರ ಸಂಖ್ಯೆಗೂ ರೀಚಾರ್ಜ್ ಮಾಡಬಹುದು. ಜಿಯೋ ಸಿಮ್ ರೀಚಾರ್ಜ್ ಹೊರತುಪಡಿಸಿ ಬಳಕೆದಾರರು ರಿಲಯನ್ಸ್ ಜಿಯೋದ ಹೊಸ ಸಿಮ್​ಗೆ ಅಥವಾ ಸಿಮ್ ಪೋರ್ಟಬಿಲಿಟಿಗೂ (MNP) ಅಪ್ಲೈ ಮಾಡಲು ಇಲ್ಲಿ ಸಂಪರ್ಕಿಸಬಹುದು.

ಇನ್ನು ಇತರ ಸೇವೆಗಳಾದ ಜಿಯೋ ಸಿಮ್ ಸಪೋರ್ಟ್, ಜಿಯೋಫೈಬರ್ ಇಂಟರ್​ನೆಟ್, ಜಿಯೋಮಾರ್ಟ್, ಮತ್ತು ಅಂತರರಾಷ್ಟ್ರೀಯ ರೋಮಿಂಗ್ ಕೂಡ ದೊರೆಯುತ್ತವೆ. ಒಂದು ವೇಳೆ ಬಳಕೆದಾರರು ಚಾಟ್​ಬಾಟ್ ಭಾಷೆಯನ್ನು ಬದಲಿಸುವುದಕ್ಕೆ ಬಯಸಿದಲ್ಲಿ change chat language ಆಯ್ಕೆ ಮಾಡಿಕೊಳ್ಳಬಹುದು. ಹಿಂದಿ ಮತ್ತು ಇಂಗ್ಲಿಷ್ ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಭವಿಷ್ಯದಲ್ಲಿ ಇನ್ನಷ್ಟು ಭಾಷೆಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಗಮನಿಸಬೇಕಾದ ಇನ್ನೊಂದು ಅಂಶ ಏನೆಂದರೆ, ಚಾಟ್​ಬಾಟ್ ಮೂಲಕವಾಗಿ ಕೋವಿಡ್-19ಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಬಹುದು.

ಕೊವಿಡ್ ಲಸಿಕೆ ಕೇಂದ್ರದ ಮಾಹಿತಿ ಬೇಕೆಂದರೆ, covid vaccine and info ಇದನ್ನು ಮುಖ್ಯ ಮೆನುವಿನಿಂದ ಆರಿಸಬೇಕು ಮತ್ತು ಅಲ್ಲಿ vaccine info ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಬಳಕೆದಾರರಿಗೆ ಹತ್ತಿರದ ಲಸಿಲೆ ಕೇಂದ್ರ ಅಥವಾ ಲಸಿಕೆಗೆ ಸಂಬಂಧಿಸಿದ ಮಾಹಿತಿ ದೊರೆಯುತ್ತದೆ. ಈ ಸೇವೆ ಮೂಲಕ ರಿಲಯನ್ಸ್ ಜಿಯೋ ಬಳಕೆದಾರರು ತಮ್ಮ ಪಿನ್​ಕೋಡ್ ಒದಗಿಸಿದರೆ ಅಗತ್ಯ ಇರುವ ಮಾಹಿತಿ ಸಿಗುತ್ತದೆ. ಇದರ ಪರ್ಯಾಯವಾಗಿ ಗ್ರಾಹಕರು MyJio ಆ್ಯಪ್ ಡೌನ್​ಲೋಡ್ ಮಾಡಿಕೊಂಡು, ಜಿಯೋಫೈಬರ್ ಅಥವಾ ನಿಮ್ಮ ಮೊಬೈಲ್ ನಂಬರ್ ರೀಚಾರ್ಜ್ ಮಾಡಬಹುದು. ಈ ಆ್ಯಪ್ ಬಳಕೆದಾರರ ಖಾತೆ ನಿರ್ವಹಣೆ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: Jio Recharge Plan: ಮತ್ತೆ ಬಂತು ಜಿಯೋದಿಂದ ಅಗ್ಗದ 98 ರೂ. ಪ್ರೀಪೇಯ್ಡ್ ಪ್ಲಾನ್; ಏನೆಲ್ಲ ವೈಶಿಷ್ಟ್ಯ?

ಇದನ್ನೂ ಓದಿ: Jio 5G: ಜಿಯೋದಿಂದ 1Gbps ವೇಗದ 5G ಪರೀಕ್ಷೆ ಯಶಸ್ವಿ; ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿ ಎಂದ ಕಂಪೆನಿ

(How to recharge Reliance Jio SIM card through WhatsApp. Here is the step by step details)

Published On - 8:36 pm, Wed, 9 June 21

ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ