ಗೂಗಲ್ ಮ್ಯಾಪ್ನಲ್ಲಿ ಕೇಳುವ ಹೆಣ್ಣು ದನಿ ಯಾರದ್ದು ಎಂಬುದು ಗೊತ್ತಾ?
ಎಲ್ಲರಿಗೂ ದಾರಿ ತೋರಿಸುವ ಹೆಣ್ಣೊಬ್ಬಳಿದ್ದಾಳೆ ಎಂದು ಗೂಗಲ್ ಮ್ಯಾಪ್ನ ಹೆಣ್ಣು ದನಿ ಬಗ್ಗೆ ತಮಾಷೆಯಾಗಿ ಹೇಳುವುದುಂಟು. ನೀವು ಎಡಕ್ಕೆ ತಿರುಗಿ, ಬಲಕ್ಕೆ ತಿರುಗಿ, ನೀವು ಗಮ್ಯ ತಲುಪಿದ್ದೀರಿ ಹೀಗೆ ಗೂಗಲ್ ಮ್ಯಾಪ್ನಲ್ಲಿ ನಮಗೆ ದಾರಿ ತೋರಿಸುವ ಹೆಣ್ಣು ದನಿ ಯಾರದ್ದು ಎಂಬುದು ಗೊತ್ತಾ? ಆಕೆಯ ಹೆಸರು ಕರೆನ್ ಜಾಕೋಬ್ಸೆನ್. ಆಸ್ಟ್ರೇಲಿಯಾದ ದನಿ ಕಲಾವಿದೆ, ಗಾಯಕಿ. ಆಕೆಗೆ ಗೂಗಲ್ ಮ್ಯಾಪ್ಗೆ ದನಿ ನೀಡುವ ಕೆಲಸ ಸಿಕ್ಕಿದ್ದು ಹೇಗೆ? ಅವರ ಮಾತುಗಳಲ್ಲೇ ಕೇಳಿ...

ಗೂಗಲ್ ಮ್ಯಾಪ್ನಲ್ಲಿ (Google Map) ನಿಮಗೆ ದಾರಿ ಹೇಳಿಕೊಡುವ ಹೆಣ್ಣು ದನಿಯೊಂದಿದೆ. ಈ ದನಿ ಯಾರದ್ದು ಅಂತ ಗೊತ್ತಾ? ಆಕೆಯ ಹೆಸರು ಕರೆನ್ ಜಾಕೋಬ್ಸೆನ್. ಈಕೆ ಆಸ್ಟ್ರೇಲಿಯನ್ ವಾಯ್ಸ್‌ಓವರ್ ಕಲಾವಿದೆ. ಆಕೆಯ ಧ್ವನಿಯನ್ನು Google ಮ್ಯಾಪ್ ಮತ್ತು ಇತರ GPS ಅಪ್ಲಿಕೇಶನ್‌ಗಳಲ್ಲಿ ಬಳಸಲಾಗಿದ್ದು, ವಾಹನ ಚಾಲಕರಿಗೆ ಪರಿಚಯವಿಲ್ಲದ ಮಾರ್ಗಗಳನ್ನು ಹುಡುಕಲು ಈ ದನಿ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ಒಂದು ಬಿಲಿಯನ್‌ಗಿಂತಲೂ ಹೆಚ್ಚು Google ಡಿವೈಸ್ ಗೂಗಲ್ ಮ್ಯಾಪ್ ವೈಶಿಷ್ಟ್ಯವನ್ನು ಹೊಂದಿವೆ. ಮರು ಪ್ರಶ್ನೆ ಮಾಡದೆಯೇ ಪುರುಷರೆಲ್ಲರೂ ನಾನು ಹೇಳಿದಂತೆ ಕೇಳುತ್ತಾರೆ ಎಂದು ಜಾಕೋಬ್ಸೆನ್ ತಮಾಷೆಯಾಗಿ ಹೇಳುತ್ತಾರೆ. ಜಾಕೋಬ್ಸೆನ್ ಲಂಡನ್ ಮೂಲದ ಸಾಕ್ಷ್ಯಚಿತ್ರಗಳ ಕಂಪನಿಯಾದ ಗ್ರೇಟ್ ಬಿಗ್ ಸ್ಟೋರಿಗೆ ಜತೆ ಮಾತನಾಡಿದ್ದು ಜಗತ್ತಿನಲ್ಲಿ ಪುರುಷರು ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಮಾಡಿದ ಏಕೈಕ ಮಹಿಳೆ ನಾನು ಎಂದು ಹೇಳಿದ್ದಾರೆ. ನಡೆದು ಬಂದ ದಾರಿ 2000 ರ ದಶಕದ ಆರಂಭದಲ್ಲಿ GPS ತಯಾರಕ ಗಾರ್ಮಿನ್ ಅವರು ಗೂಗಲ್ ಮ್ಯಾಪ್ ವೈಶಿಷ್ಟ್ಯಕ್ಕಾಗಿ ಧ್ವನಿ ಕಲಾವಿದರನ್ನು ಸಂಪರ್ಕಿಸಿದರು. ಆಸ್ಟ್ರೇಲಿಯನ್ ಉಚ್ಚಾರಣೆ ಕೇಳಲು ತುಂಬಾ ಆಹ್ಲಾದಕರವಾಗಿರುತ್ತದೆ ಎಂಬ ಕಾರಣಕ್ಕೆ ಅವರು ನನ್ನ ದನಿ ಆಯ್ಕೆ ಮಾಡಿದರು. ನನ್ನ ಧ್ವನಿಯು ಒಂದು ಶತಕೋಟಿ GPS ಮತ್ತು ಸ್ಮಾರ್ಟ್‌ಫೋನ್ ಸಾಧನಗಳಲ್ಲಿ ಪ್ರಪಂಚದಾದ್ಯಂತ ಜನರಿಗೆ ನಿರ್ದೇಶನವನ್ನು ನೀಡುತ್ತಿದೆ. ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪಿದ್ದೀರಿ ಎಂದು ನಾನು ಹೇಳುತ್ತೇನೆ ಎಂದು ಜಾಕೋಬ್ಸೆನ್ ನಗುತ್ತಾ ಹೇಳುತ್ತಾರೆ. ಆಕೆಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ ಜಾಕೋಬ್‌ಸೆನ್ ಮೂಲತಃ ಮ್ಯಾಕೆಯಿಂದ ಬಂದವರು. ಇದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಬಳಿಯ ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಪಟ್ಟಣ. ನಾನು...
Published On - 4:22 pm, Thu, 22 August 24



