Tech Tips: ಕರ್ವ್ಡ್ ಅಥವಾ ಫ್ಲಾಟ್ ಡಿಸ್​ಪ್ಲೇ: ಯಾವ ಸ್ಮಾರ್ಟ್​ಫೋನ್ ಖರೀದಿಸಲು ಉತ್ತಮ ಮತ್ತು ಏಕೆ?

ಹೊಸ ಫೋನ್ ಖರೀದಿಸಬೇಕಾದರೆ ಫ್ಲಾಟ್ ಸ್ಕ್ರೀನ್ ಫೋನ್ ಖರೀದಿಸಬೇಕೇ ಅಥವಾ ಬಾಗಿದ ಡಿಸ್​ಪ್ಲೇಯ ಫೋನ್ ಖರೀದಿಸಬೇಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವೆರಡರಲ್ಲಿ ಯಾವುದು ಸ್ಟೈಲಿಶ್ ಆಗಿ ಕಾಣಿಸುತ್ತದೆ, ಯಾವ ಫೋನ್ ಅನ್ನು ಖರೀದಿಸುವುದು ಲಾಭದಾಯಕ ಎಂಬ ಗೊಂದಲ ನಿಮ್ಮಲ್ಲಿದ್ದರೆ, ಇದಕ್ಕೆ ಉತ್ತರ ಇಲ್ಲಿದೆ.

Tech Tips: ಕರ್ವ್ಡ್ ಅಥವಾ ಫ್ಲಾಟ್ ಡಿಸ್​ಪ್ಲೇ: ಯಾವ ಸ್ಮಾರ್ಟ್​ಫೋನ್ ಖರೀದಿಸಲು ಉತ್ತಮ ಮತ್ತು ಏಕೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 06, 2024 | 12:55 PM

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಮೊಬೈಲ್ ಕಂಪನಿಗಳು ದಿನದಿಂದ ದಿನಕ್ಕೆ ಗ್ರಾಹಕರಿಗೆ ಸೊಗಸಾದ ಫೋನ್‌ಗಳನ್ನು ತಯಾರಿಸಿ ಬಿಡುಗಡೆ ಮಾಡುತ್ತಿವೆ. ಮುಖ್ಯವಾಗಿ ಇಂದು ಸ್ಟೈಲಿಶ್ ಸ್ಮಾರ್ಟ್​ಫೋನ್​ಗೆ ಭರ್ಜರಿ ಡಿಮ್ಯಾಂಡ್ ಇದೆ. ಇವು ನೋಡಲು ಸೊಗಸಾದ ಮತ್ತು ಉತ್ತಮ ವೈಶಿಷ್ಟ್ಯಗಳಿದ್ದರೆ ಎಗ್ಗಿಲ್ಲದಂತೆ ಸೇಲ್ ಆಗುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಬಾಗಿದ ಡಿಸ್​ಪ್ಲೇ ಫೋನ್ ಮತ್ತು ಫ್ಲಾಟ್ ಸ್ಕ್ರೀನ್ ಮೊಬೈಲ್ ಫೋನ್ ಲಭ್ಯವಿದೆ.

ಈಗ ಫ್ಲಾಟ್ ಸ್ಕ್ರೀನ್ ಫೋನ್ ಖರೀದಿಸಬೇಕೇ ಅಥವಾ ಬಾಗಿದ ಡಿಸ್​ಪ್ಲೇಯ ಫೋನ್ ಖರೀದಿಸಬೇಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವೆರಡರಲ್ಲಿ ಯಾವುದು ಸ್ಟೈಲಿಶ್ ಆಗಿ ಕಾಣಿಸುತ್ತದೆ, ಯಾವ ಫೋನ್ ಅನ್ನು ಖರೀದಿಸುವುದು ಲಾಭದಾಯಕ ಎಂಬ ಗೊಂದಲ ನಿಮ್ಮಲ್ಲಿದ್ದರೆ, ಇದಕ್ಕೆ ಉತ್ತರ ಇಲ್ಲಿದೆ.

ನೀವು ಹೊಸ ಫೋನ್ ಖರೀದಿಸುವ ಮೊದಲು ಈ ಎರಡೂ ಫೋನ್‌ಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳಬೇಕು. ಫ್ಲಾಟ್ ಮತ್ತು ಬಾಗಿದ ಎರಡೂ ಡಿಸ್ ಪ್ಲೇಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ, ನಿಮ್ಮ ಅಗತ್ಯತೆಗಳು ಮತ್ತು ಬಜೆಟ್​ಗೆ ಅನುಗುಣವಾಗಿ ನಿಮಗೆ ಸರಿ ಹೊಂದುವ ಡಿಸ್ ಪ್ಲೇಯ ಫೋನ್ ಅನ್ನು ಆಯ್ಕೆ ಮಾಡಬಹುದು.

ಫ್ಲಾಟ್ ಸ್ಕ್ರೀನ್ ಫೋನಿನ ಅನುಕೂಲಗಳು ಮತ್ತು ಅನಾನುಕೂಲಗಳು:

ಮೊದಲ ಪ್ರಯೋಜನ: ಫ್ಲಾಟ್ ಡಿಸ್ ಪ್ಲೇನಲ್ಲಿ ಟೆಂಪರ್ಡ್ ಗ್ಲಾಸ್ ಅನ್ನು ಸ್ಥಾಪಿಸುವುದು ಸುಲಭ ಮತ್ತು ಇದು ಸುರಕ್ಷಿತವಾಗಿದೆ. ಏಕೆಂದರೆ ಈ ಡಿಸ್ ಪ್ಲೇ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಎರಡನೇ ಪ್ರಯೋಜನ: ಸಾಮಾನ್ಯವಾಗಿ, ಫ್ಲಾಟ್ ಡಿಸ್ ಪ್ಲೇ ಹೊಂದಿರುವ ಫೋನ್ ಗಳು ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳಿಗಿಂತ ಕಡಿಮೆ ವೆಚ್ಚದಲ್ಲಿರುತ್ತವೆ.

ಮೊದಲ ಅನಾನುಕೂಲತೆ: ಬಾಗಿದ ಡಿಸ್ ಪ್ಲೇಗೆ ಹೋಲಿಸಿದರೆ ಫ್ಲಾಟ್ ಡಿಸ್ ಪ್ಲೇ ಹೊಂದಿರುವ ಫೋನುಗಳು ಕಡಿಮೆ ಆಕರ್ಷಕವಾಗಿ ಕಾಣಿಸಬಹುದು.

ಎರಡನೇ ಅನನುಕೂಲವೆಂದರೆ: ಬಾಗಿದ ಡಿಸ್ ಪ್ಲೇಗೆ ಹೋಲಿಸಿದರೆ ಫ್ಲಾಟ್ ಡಿಸ್ ಪ್ಲೇ ಯಲ್ಲಿ ವಿಡಿಯೋಗಳನ್ನು ನೋಡುವಾಗ ವಾವ್ ಎಂಬಂತಹ ಅನುಭವ ನೀಡುವುದಿಲ್ಲ.

ಕರ್ವ್ಡ್ ಸ್ಕ್ರೀನ್ ಡಿಸ್‌ಪ್ಲೇ ಫೋನ್‌ನ ಅನುಕೂಲಗಳು ಮತ್ತು ಅನಾನುಕೂಲಗಳು:

ಮೊದಲ ಪ್ರಯೋಜನ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳು ನೋಟದಲ್ಲಿ ಸಾಕಷ್ಟು ಆಕರ್ಷಕವಾಗಿವೆ.

ಎರಡನೇ ಪ್ರಯೋಜನ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ನಲ್ಲಿ ವಿಡಿಯೋಗಳನ್ನು ನೋಡುವ ಅನುಭವ ಅದ್ಭುತವಾಗಿದೆ.

ಮೊದಲ ಅನನುಕೂಲವೆಂದರೆ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳು ಸಾಮಾನ್ಯವಾಗಿ ಫ್ಲಾಟ್ ಡಿಸ್ ಪ್ಲೇಗಳೊಂದಿಗಿನ ಫೋನುಗಳಿಗಿಂತ ಹೆಚ್ಚು ದುಬಾರಿಯಾಗಿದೆ.

ಎರಡನೇ ಅನನುಕೂಲವೆಂದರೆ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳಲ್ಲಿ ಟೆಂಪರ್ಡ್ ಗ್ಲಾಸ್ ಅನ್ನು ಸ್ಥಾಪಿಸುವುದು ಕಷ್ಟ ಮತ್ತು ಅದು ಬೇಗನೆ ಹಾಳಾಗುತ್ತದೆ. ಇದನ್ನು ಹಾಕುವುದ ಕೂಡ ಕಷ್ಟ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ