Tech Tips: ಲ್ಯಾಪ್‌ಟಾಪ್ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದೆಯೇ?: ಹೀಗೆ ಮಾಡಿದ್ರೆ ದೀರ್ಘಕಾಲ ಉಳಿಯುತ್ತದೆ

ಅನೇಕ ಜನರಂತೆ ನಿಮಗುಕೂಡ ಚಾರ್ಜರ್ ಇಲ್ಲದೆ ಲ್ಯಾಪ್​ಟಾಪ್ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲವೇ?. ಹಾಗಾದರೆ ಲ್ಯಾಪ್‌ಟಾಪ್‌ನ ಬ್ಯಾಟರಿ ಹೆಚ್ಚು ಕಾಲ ಉಳಿಯುವಂತೆ ಮಾಡುವುದು ಹೇಗೆ?, ಇದಕ್ಕೆ ಏನು ಮಾಡಬೇಕು?. ಇಲ್ಲಿದೆ ನೋಡಿ ಕೆಲ ಸಲಹೆಗಳು.

Tech Tips: ಲ್ಯಾಪ್‌ಟಾಪ್ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದೆಯೇ?: ಹೀಗೆ ಮಾಡಿದ್ರೆ ದೀರ್ಘಕಾಲ ಉಳಿಯುತ್ತದೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 5:52 PM

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ಕೆಲಸಗಳಿಗೆ ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಾರೆ. ಕಚೇರಿ ಕೆಲಸ ಅಥವಾ ಅಧ್ಯಯನಕ್ಕಾಗಿ ಲ್ಯಾಪ್‌ಟಾಪ್‌ಗಳನ್ನು ಹೆಚ್ಚು ಬಳಸಲಾಗುತ್ತದೆ. ಆದಾಗ್ಯೂ, ನೀವು ಪ್ರತಿದಿನ 9-10 ಗಂಟೆಗಳ ಕಾಲ ನಿರಂತರವಾಗಿ ಲ್ಯಾಪ್‌ಟಾಪ್ ಅನ್ನು ಬಳಸಿದರೆ, ಸ್ವಲ್ಪ ಸಮಯದ ನಂತರ ಬ್ಯಾಟರಿ ಸಮಸ್ಯೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಚಾರ್ಜರ್ ಇಲ್ಲದೆ ಲ್ಯಾಪ್​ಟಾಪ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಲ್ಯಾಪ್‌ಟಾಪ್‌ನ ಬ್ಯಾಟರಿ ಹೆಚ್ಚು ಕಾಲ ಉಳಿಯುವಂತೆ ಮಾಡುವುದು ಹೇಗೆ?, ಇದಕ್ಕೆ ಏನು ಮಾಡಬೇಕು?.

ಲ್ಯಾಪ್‌ಟಾಪ್ ಬ್ಯಾಟರಿ ಬೇಗನೆ ಖಾಲಿಯಾಗಲು ಏನು ಕಾರಣ?:

ಅನೇಕ ಬಾರಿ ಲ್ಯಾಪ್‌ಟಾಪ್ ಬ್ಯಾಟರಿ ಹಳೆಯದಾದ ನಂತರ ಅದರ ಸರಾಸರಿ ಜೀವನವು ಕೇವಲ 3-4 ವರ್ಷಗಳು ಮಾತ್ರ ಉಳಿಯುತ್ತದೆ. ಬ್ಯಾಟರಿಯ ಸಾಮರ್ಥ್ಯವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಸೆಟ್ಟಿಂಗ್ಸ್ ಸರಿಯಾಗಿಲ್ಲದಿರುವ ಸಾಧ್ಯತೆಯಿದೆ, ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಸೆಟ್ಟಿಂಗ್‌ಗಳಲ್ಲಿನ ದೋಷವನ್ನು ಸರಿಪಡಿಸಿದ ನಂತರ, ಬ್ಯಾಟರಿ ಬಾಳಿಕೆ ಉತ್ತಮವಾಗಬಹುದು.

ಲ್ಯಾಪ್‌ಟಾಪ್ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಏನು ಮಾಡಬೇಕು?:

ಲ್ಯಾಪ್‌ಟಾಪ್ ಬ್ಯಾಟರಿಯು 0 ಪ್ರತಿಶತದ ವರೆಗೆ ತಲುಪುವುದು ನಿಲ್ಲಿಸಿ. ಬ್ಯಾಟರಿಯು ನಿಲ್ ಆದರೆ ಅದರ ಪವರ್ ಕಡಿಮೆಯಾಗುತ್ತದೆ. ಬ್ಯಾಟರಿ ಮಟ್ಟವು 20 ಪ್ರತಿಶತವನ್ನು ತಲುಪಿದಾಗ, ಅದನ್ನು ಚಾರ್ಜ್ ಮಾಡಬೇಕು.

ಹಾಗೆಯೆ ನಿಮ್ಮ ಲ್ಯಾಪ್‌ಟಾಪ್ ಅನ್ನು ನೀವು 100 ಪ್ರತಿಶತದಷ್ಟು ಚಾರ್ಜ್ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಬ್ಯಾಟರಿ ಮಟ್ಟವು 80 ಪ್ರತಿಶತದಷ್ಟು ಆದಾರ ಚಾರ್ಜ್ ಮಾಡುವುದನ್ನು ನಿಲ್ಲಿಸಿ. ಇದು ನಮ್ಮ ಸ್ಮಾರ್ಟ್​ಫೋನ್​ಗಳಿಗೂ ಅನುಭವಿಸುತ್ತದೆ. 20:80 ಸೂತ್ರ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಲ್ಯಾಪ್‌ಟಾಪ್ ಅನ್ನು ಸರಿಯಾದ ತಾಪಮಾನದಲ್ಲಿ ಇರಿಸಿ, ಅಂದರೆ ಅದನ್ನು ತುಂಬಾ ಬಿಸಿಯಾದ ಸ್ಥಳದಲ್ಲಿ ಇಡಬೇಡಿ. ಶಾಖದಿಂದಾಗಿ ಬ್ಯಾಟರಿ ಶಕ್ತಿ ಕಡಿಮೆಯಾಗುತ್ತದೆ. ಲ್ಯಾಪ್‌ಟಾಪ್ ಅನ್ನು ನಿರಂತರವಾಗಿ ಬಳಸುವ ಬದಲು ಸ್ವಲ್ಪ ವಿಶ್ರಾಂತಿ ನೀಡಿ. ನಿರಂತರ ಬಳಕೆಯಿಂದಾಗಿ, ಬ್ಯಾಟರಿಯು ಬಿಸಿಯಾಗುತ್ತದೆ, ಇದರಿಂದಾಗಿ ಅದು ಬೇಗನೆ ಬರಿದಾಗಲು ಪ್ರಾರಂಭಿಸುತ್ತದೆ.

ಲ್ಯಾಪ್‌ಟಾಪ್‌ನ ಬ್ಯಾಕ್​ಗ್ರೌಂಡ್​ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಮುಚ್ಚುತ್ತಲೇ ಇರಿ, ಕೆಲವೊಮ್ಮೆ ಹಿನ್ನೆಲೆಯಲ್ಲಿ ಸಕ್ರಿಯವಾಗಿರುವ ಅಪ್ಲಿಕೇಶನ್‌ಗಳು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಆದ್ದರಿಂದ, ಅನಗತ್ಯ ಅಪ್ಲಿಕೇಶನ್​ಗಳನ್ನು ಕ್ಲೋಸ್ ಮಾಡಿ.

ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ, ಸೆಟ್ಟಿಂಗ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನೀವು ಮೊದಲಿಗಿಂತ ಹೆಚ್ಚು ಬ್ಯಾಟರಿ ಅವಧಿಯನ್ನು ಸುಧಾರಿಸಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ