AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ವಾಟ್ಸ್ಆ್ಯಪ್​ನಲ್ಲಿ ಗೊತ್ತು: ಆದ್ರೆ ಇನ್​ಸ್ಟಾದಲ್ಲಿ ಕೆಲವರಿಗೆ ಮಾತ್ರ ಸ್ಟೇಟಸ್ ಕಾಣುವಂತೆ ಮಾಡೋದು ಹೇಗೆ?

Instagram Tricks: ಇನ್ಸ್ಟಾಗ್ರಾಮ್ನಲ್ಲಿ ನೀವು ಅನೇಕ ಸ್ನೇಹಿತರನ್ನು ಒಳಗೊಂಡಿದ್ದರೆ ಇದರಲ್ಲಿ ಆಯ್ದ ಫಾಲೋವರ್ಸ್ಗೆ ಮಾತ್ರ ಇನ್ಸ್ಟಾಗ್ರಾಮ್ ಸ್ಟೋರಿಗಳನ್ನು ಅಥವಾ ಸ್ಟೇಟಸ್ ಅನ್ನು ಹಂಚಿಕೊಳ್ಳಬಹುದು. ಹಾಗೆಯೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ನೀವು ಚಾಟ್‌ ಮಾಡುವಾಗ ಅವರು ಯಾವಾಗ ಆನ್ಲೈನ್ನಲ್ಲಿದ್ದರು ಎಂಬುದನ್ನು ಸಹ ತಿಳಿಯಲು ಅವಕಾಶ ನೀಡಲಿದೆ. ಅದು ಹೇಗೆ?, ಇಲ್ಲಿದೆ ನೋಡಿ ಟ್ರಿಕ್

Tech Tips: ವಾಟ್ಸ್ಆ್ಯಪ್​ನಲ್ಲಿ ಗೊತ್ತು: ಆದ್ರೆ ಇನ್​ಸ್ಟಾದಲ್ಲಿ ಕೆಲವರಿಗೆ ಮಾತ್ರ ಸ್ಟೇಟಸ್ ಕಾಣುವಂತೆ ಮಾಡೋದು ಹೇಗೆ?
Instagram Tricks
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 09, 2025 | 8:34 AM

Share

ಇನ್​ಸ್ಟಾಗ್ರಾಮ್ ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ತನ್ನ ಆಕರ್ಷಕ ಫೀಚರ್ಸ್‌ನಿಂದ ಬಳಕೆದಾರರ ನೆಚ್ಚಿನ ವಿಡಿಯೋ ಶೇರಿಂಗ್‌, ಚಾಟಿಂಗ್ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿರುವ ಇನ್‌ಸ್ಟಾಗ್ರಾಮ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಪ್ರೈವೆಸಿ ಆಯ್ಕೆಯನ್ನು ಕೂಡ ನೀಡಿದೆ. ಇದರಲ್ಲಿ ಕೆಲವೇ ಜನರೊಂದಿಗೆ ಅಂದರೆ ನಿಮಗೆ ಇಷ್ಟವಿರುವ ಜನರೊಂದಿಗೆ ಮಾತ್ರ ನಿಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಗಳನ್ನು ಹಂಚಿಕೊಳ್ಳುವ ಆಯ್ಕೆ ಕೂಡ ಇದೆ. ಹಾಗಾದರೆ, ಇನ್​ಸ್ಟಾಗ್ರಾಮ್​ನಲ್ಲಿ ನೀವು ಅನೇಕ ಸ್ನೇಹಿತರನ್ನು ಒಳಗೊಂಡಿದ್ದರೆ ಇದರಲ್ಲಿ ಆಯ್ದ ಫಾಲೋವರ್ಸ್​ಗೆ ಮಾತ್ರ ಇನ್​ಸ್ಟಾಗ್ರಾಮ್​ ಸ್ಟೋರಿಗಳನ್ನು ಅಥವಾ ಸ್ಟೇಟಸ್ ಅನ್ನು ಹಂಚಿಕೊಳ್ಳುವುದು ಹೇಗೆ?.

ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ಇನ್​ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ. ಈಗ ಸ್ಕ್ರೀನ್​ನ ಕೆಳಗಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ. ಪ್ರೊಫೈಲ್ ಪುಟದಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಅಡ್ಡ ಸಾಲುಗಳು ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣಿಸಿಕೊಳ್ಳುವ ಆಯ್ಕೆಗಳ ಪಟ್ಟಿಯಿಂದ, ನಿಕಟ ಸ್ನೇಹಿತರ ಮೇಲೆ ಟ್ಯಾಪ್ ಮಾಡಿ. ನಂತರ ಕ್ಲೋಸ್ ಫ್ರೆಂಡ್ಸ್ ಪುಟದಲ್ಲಿ, ಆಪ್ತ ಸ್ನೇಹಿತರ ಲಿಸ್ಟ್​ನಲ್ಲಿ ನಿಮಗೆ ಬೇಕಾದ ಸ್ನೇಹಿತರನ್ನು ಮಾತ್ರ ಆಯ್ಕೆ ಮಾಡಿ.

ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ನೀವು ಚಾಟ್‌ ಮಾಡುವಾಗ ಅವರು ಯಾವಾಗ ಆನ್​ಲೈನ್​ನಲ್ಲಿದ್ದರು ಎಂಬುದನ್ನು ಸಹ ತಿಳಿಯಲು ಅವಕಾಶ ನೀಡಲಿದೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಇದೆ. ನೀವು ಸ್ಟೇಟಸ್‌ ನೋಡುವುದಕ್ಕೆ ಇಬ್ಬರೂ ಒಬ್ಬರನ್ನೊಬ್ಬರು ಅನುಸರಿಸುತ್ತಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ. ಆದರೆ ಎರಡೂ ಕಡೆಯವರು ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವಾಗ ಮಾತ್ರ ಲಾಸ್ಟ್‌ ಸೀನ್‌ ನೋಡುವುದಕ್ಕೆ ಸಾದ್ಯವಾಗಲಿದೆ.

Tech Tips: ಕಾಲ್ ಮಾಡುವಾಗ ಬೇರೆಯವರಿಗೆ ಬ್ಯಾಕ್​ಗ್ರೌಂಡ್ ಸೌಂಡ್ ಕೇಳದಾಗೆ ಮಾಡೋದು ಹೇಗೆ?

ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ಇನ್​ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ. ನಂತರ ಮೇಲಿನ ಬಲ ಮೂಲೆಯಲ್ಲಿರುವ ಪೇಪರ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇದು ಇನ್‌ಸ್ಟಾಗ್ರಾಮ್‌ನ ಡಿಎಂ ವಿಭಾಗವಾಗಿದ್ದು, ಇದರಲ್ಲಿ ನೀವು ಚಾಟ್‌ ಮಾಡಿದವರ ಲಾಸ್ಟ್‌ ಸೀನ್‌ ಅನ್ನು ನೋಡಬಹುದು. ಹಾಗೆಯೇ ಒಂದು ವೇಳೆ ನೀವು ನಿಮ್ಮ ಲಾಸ್ಟ್‌ ಸೀನ್‌ ಆಕ್ಟಿವಿಟಿಯನ್ನು ಬೇರೆಯವರು ನೋಡದಂತೆ ಮಾಡುವ ಅವಕಾಶ ಕೂಡ ಇದೆ. ಇದಕ್ಕಾಗಿ ನೀವು ನಿಮ್ಮ ಪ್ರೊಫೈಲ್ ಟ್ಯಾಬ್‌ಗೆ ಹೋಗಬೇಕು, ಇದರಲ್ಲಿ ಕಾಗ್ವೀಲ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಆಯ್ಕೆಗಳ ಸ್ಕ್ರೀನ್‌ಗೆ ಹೋಗಬೇಕಾಗುತ್ತದೆ. ಈ ಟ್ಯಾಬ್ ಒಳಗೆ, ಸೆಟ್ಟಿಂಗ್‌ಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಶೋ ಆಕ್ಟಿವಿಟಿ ಸ್ಟೇಟಸ್‌” ಆಯ್ಕೆಯನ್ನು ಆಫ್ ಮಾಡಿದರೆ ನಿಮ್ಮ ಲಾಸ್ಟ್ ಸೀನ್ ಯಾರಿಗೂ ಕಾಣಿಸುವುದಿಲ್ಲ.

ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರು ಟಿಕ್‌ಟಾಕ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ನಂತಹ ದೀರ್ಘ ಕಿರು ವಿಡಿಯೋಗಳನ್ನು ಹಂಚಿಕೊಳ್ಳುವ ಆಯ್ಕೆ ನೀಡಿದೆ. ಇದು ಕಂಟೆಂಟ್ ಕ್ರಿಯೇಟರ್ಸ್​ಗೆ ತುಂಬಾ ಸಹಕಾರಿ ಆಗಲಿದೆ. ಇನ್‌ಸ್ಟಾಗ್ರಾಮ್ ರಚನೆಕಾರರು ಈಗ 180 ಸೆಕೆಂಡುಗಳ ರೀಲ್‌ಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ, ಅಂದರೆ 90 ಸೆಕೆಂಡುಗಳ ಬದಲು ಮೂರು ನಿಮಿಷಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೆ ಈ ಹಿಂದೆ ಬಳಕೆದಾರರು 1:1 ಅನುಪಾತದಲ್ಲಿ ಲಂಬ ಗ್ರಿಡ್ ಅನ್ನು ಪೋಸ್ಟ್ ಮಾಡಬಹುದಿತ್ತು, ಅದನ್ನು ಈಗ 4:3 ಕ್ಕೆ ಅಪ್‌ಗ್ರೇಡ್ ಮಾಡಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ