Salman Khan
ನಟ ಸಲ್ಮಾನ್ ಖಾನ್ ಅವರು ಹಿಂದಿ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿದ್ದಾರೆ. ಭಾರತದ ಶ್ರೀಮಂತ ನಟರಲ್ಲಿ ಅವರು ಕೂಡ ಇದ್ದಾರೆ. ಅಬ್ದಲ್ ರಶೀದ್ ಸಲೀಂ ಸಲ್ಮಾನ್ ಖಾನ್ ಎಂಬುದು ಅವರ ಪೂರ್ಣ ಹೆಸರು. 1988ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು.
ಆರಂಭದಲ್ಲೇ ಅವರಿಗೆ ಯಶಸ್ಸು ಸಿಕ್ಕಿತು. ವೃತ್ತಿಜೀವನದಲ್ಲಿ ಅವರು ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ಹಿಂದಿ ಚಿತ್ರರಂಗದ ಮಾಸ್ ಹೀರೋ ಆಗಿ ಅವರು ಗುರುತಿಸಿಕೊಂಡಿದ್ದಾರೆ. ‘ಮೈ ನೇ ಪ್ಯಾರ್ ಕಿಯಾ’, ‘ಸಾಜನ್’, ‘ಹಮ್ ಆಪ್ಕೆ ಹೈ ಕೌನ್’, ‘ದಬಂಗ್’, ‘ಬಜರಂಗಿ ಭಾಯಿಜಾನ್’, ‘ಏಕ್ ಥಾ ಟೈಗರ್’ ಮುಂತಾದವು ಸಲ್ಮಾನ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾಗಳು.
ಬಿಗ್ ಬಾಸ್ ನಿರೂಪಕನಾಗಿಯೂ ಅವರು ಫೇಮಸ್ ಆಗಿದ್ದಾರೆ. ನಿರ್ಮಾಪಕನಾಗಿ ಹಲವು ಸಿನಿಮಾಗಳಿಗೆ ಸಲ್ಮಾನ್ ಖಾನ್ ಬಂಡವಾಳ ಹೂಡಿದ್ದಾರೆ. ವೃತ್ತಿಜೀವನದ ರೀತಿಯ ಅವರ ಖಾಸಗಿ ಬದುಕು ಕೂಡ ಸುದ್ದಿ ಆಗುತ್ತದೆ. ಹಲವರನ್ನು ಸಲ್ಮಾನ್ ಖಾನ್ ಪ್ರೀತಿಸಿದ್ದರು. ಆದರೆ ಯಾರನ್ನೂ ಅವರು ಮದುವೆ ಆಗಲಿಲ್ಲ. ಅವರ ಜೀವನದಲ್ಲಿ ಸಾಕಷ್ಟು ವಿವಾದಗಳು ಕೂಡ ಆಗಿವೆ. ಗ್ಯಾಂಗ್ಸ್ಟರ್ಗಳಿಂದ ಅವರಿಗೆ ಜೀವ ಬೆದರಿಕೆಯೂ ಬಂದಿದೆ.
370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್
370 Rupees Biryani Controversy: ಪ್ರಣೀತ್ ಮೋರೆ ಕಾಮಿಡಿ ಶೋನಲ್ಲಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಲಾಗಿದೆ. ಆ ವಿಡಿಯೋಗಳು ವೈರಲ್ ಆದ ಬಳಿಕ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ ಅವರು ಒಂದು ವರ್ಷದ ಹಿಂದೆಯೇ ಪ್ರಣೀತ್ ಮೋರೆಗೆ ಖಡಕ್ ಎಚ್ಚರಿಕೆ ನೀಡಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Jun 10, 2026
- 5:25 pm
ಗೆಳತಿ ಸಾವಿನ ನೋವಲ್ಲಿ ಸಲ್ಮಾನ್ ಖಾನ್; ಅಂತಿಮ ನಮನ ಸಲ್ಲಿಸಿದ ನಟ
ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಆಪ್ತ ಸ್ನೇಹಿತೆ ಹಾಗೂ ಕೇಶ ವಿನ್ಯಾಸಕಿ ಕುಮುದ್ ರಾಣೆ ನಿಧನದಿಂದ ತೀವ್ರ ದುಃಖಿತರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಮುದ್‌ಗೆ ಸಲ್ಮಾನ್ ಖಾನ್ ಕುಟುಂಬದವರು ಅಂತಿಮ ನಮನ ಸಲ್ಲಿಸಿದ್ದಾರೆ. ಸಲ್ಮಾನ್ ಮತ್ತು ಸೊಹೈಲ್ ಪುತ್ರ ನಿರ್ವಾಣ ಭಾವುಕರಾಗಿ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ಸಲ್ಮಾನ್ ಅವರ ದುಃಖ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಘಟನೆ ಸಲ್ಮಾನ್ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ.
- Shreelaxmi H
- Updated on: Jun 10, 2026
- 8:02 am
ಕ್ಯಾಮೆರಾ ಎದುರಲ್ಲೇ ನೋಟಿಸ್ ಹರಿದು ಸಲ್ಮಾನ್ ಖಾನ್ಗೆ ಸವಾಲು ಹಾಕಿದ ನಿರ್ಮಾಪಕ
‘ಕಾಲಾ ಹಿರನ್’ ಸಿನಿಮಾ ತಂಡ ಮತ್ತು ಸಲ್ಮಾನ್ ಖಾನ್ ನಡುವಿನ ಕಿರಿಕ್ ಮತ್ತೊಂದು ಹಂತಕ್ಕೆ ಹೋಗಿದೆ. ಸಲ್ಮಾನ್ ಖಾನ್ ಅಭಿಮಾನಿಗಳು ತಮಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಅಮಿತ್ ಜಾನಿ ಹೇಳಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಅವರ ಟೀಮ್ ಕಳಿಸಿದ ಲೀಗಲ್ ನೋಟಿಸ್ ಅನ್ನು ಅಮಿತ್ ಜಾನಿ ಅವರು ಹರಿದು ಹಾಕಿದ್ದಾರೆ.
- Madan Kumar
- Updated on: Jun 4, 2026
- 10:33 pm
ಕೃಷ್ಣಮೃಗ ಬೇಟೆ ಕುರಿತ ‘ಕಾಲಾ ಹಿರನ್’ ಸಿನಿಮಾ ಸಲ್ಮಾನ್ ಖಾನ್ ಬಯೋಪಿಕ್ ಅಲ್ಲ: ನಿರ್ಮಾಪಕರ ಸ್ಪಷ್ಟನೆ
‘ಕಾಲಾ ಹಿರನ್’ ಸಿನಿಮಾ ಮೇಲೆ ಸಲ್ಮಾನ್ ಖಾನ್ ಅವರಿಗೆ ಅಸಮಾಧಾನ ಇದೆ. ಈ ಚಿತ್ರದ ಟೀಸರ್ ಬಿಡುಗಡೆಯನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಈಗಾಗಲೇ ಬಿಡುಗಡೆ ಮಾಡಲಾಗಿರುವ ಪೋಸ್ಟರ್‌ಗಳನ್ನು ಹಿಂಪಡೆಯಬೇಕು ಎಂದು ಸಲ್ಮಾನ್ ಖಾನ್ ಅವರ ತಂಡವು ನೋಟಿಸ್ ಕಳಿಸಿದೆ. ಅದಕ್ಕೆ ಚಿತ್ರದ ನಿರ್ಮಾಪಕ ಅಮಿತ್ ಜಾನಿ ಪ್ರತಿಕ್ರಿಯಿಸಿದ್ದಾರೆ.
- Madan Kumar
- Updated on: Jun 2, 2026
- 7:36 pm
ಕೃಷ್ಣಮೃಗ ಬೇಟೆ ಕೇಸ್ ಕುರಿತು ಸಿನಿಮಾ: ಚಿತ್ರತಂಡಕ್ಕೆ ನೋಟಿಸ್ ಕಳಿಸಿದ ಸಲ್ಮಾನ್ ಖಾನ್
‘ಕಾಲಾ ಹಿರನ್’ ಚಿತ್ರವು ಸಲ್ಮಾನ್ ಖಾನ್ ಅವರ ವರ್ಚಸ್ಸು ಮತ್ತು ವೃತ್ತಿಪರ ಗೌರವಕ್ಕೆ ಧಕ್ಕೆ ತರುವಂತಹ ಸುಳ್ಳು ಹಾಗೂ ತಪ್ಪುದಾರಿಗೆಳೆಯುವ ಅಂಶಗಳನ್ನು ಒಳಗೊಂಡಿದೆ. ಇದು ಸಂಪೂರ್ಣವಾಗಿ ಮಾನಹಾನಿಕರವಾಗಿದೆ ಮತ್ತು ನಟನ ಇಮೇಜ್ ಬಳಸಿಕೊಂಡು ವಿವಾದ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
- Madan Kumar
- Updated on: Jun 2, 2026
- 4:02 pm
ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ
ಇತ್ತೀಚಿನ ಸೋಲುಗಳ ನಂತರ, ಸಲ್ಮಾನ್ ಖಾನ್ 'ಮಾತೃಭೂಮಿ' ಚಿತ್ರದ ಮೂಲಕ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾವನ್ನು ಸುಭಾಷ್ ಘಾಯ್, ಕಬೀರ್ ಖಾನ್ ಸೇರಿದಂತೆ ಅನೇಕ ಗಣ್ಯರು ವೀಕ್ಷಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಭಾರತ-ಚೀನಾ ಸೈನಿಕರ ಶಾಂತಿ-ಗೌರವದ ಕಥಾಹಂದರ ಹೊಂದಿರುವ ಈ ಚಿತ್ರ ಸಲ್ಮಾನ್ ಖಾನ್ ಕಮ್‌ಬ್ಯಾಕ್‌ಗೆ ಭರವಸೆ ಮೂಡಿಸಿದೆ.
- Web contact
- Updated on: May 29, 2026
- 3:11 pm
ರಣವೀರ್ ಸಿಂಗ್, ಫರ್ಹಾನ್ ಅಖ್ತರ್ ನಡುವಿನ ಜಗಳ ಬಿಡಿಸಲು ಸಲ್ಮಾನ್ ಖಾನ್ ಎಂಟ್ರಿ?
‘ಡಾನ್ 3’ ಸಿನಿಮಾಗೆ ಸಂಬಂಧಿಸಿದ ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ನಡುವಿನ ವಿವಾದ ಬಗೆಹರಿಸಲು ಸಲ್ಮಾನ್ ಖಾನ್ ಅವರು ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗಿದೆ. ವಿವಾದದ ಬಿಸಿ ತಣ್ಣಗಾದ ಮೇಲೆ, ಇಬ್ಬರೂ ಒಂದೇ ಚಿತ್ರರಂಗದ ಭಾಗ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಒಟ್ಟಿಗೆ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವಂತೆ ಸಲ್ಲು ಸಲಹೆ ನೀಡಿದ್ದಾರಂತೆ.
- Madan Kumar
- Updated on: May 28, 2026
- 10:41 pm
ಸಲ್ಮಾನ್ ಖಾನ್ ಖಾಸಗಿ ವಿಡಿಯೋ ವೈರಲ್; ‘ಇದಕ್ಕಿಂತ ಕೆಟ್ಟದ್ದು ಬೇರೇನೂ ಇಲ್ಲ’ ಎಂದ ಫ್ಯಾನ್ಸ್
ವೈರಲ್ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಸಲ್ಮಾನ್ ಖಾನ್ ಅಥವಾ ಅವರ ತಂಡ ಯಾವುದೇ ಹೇಳಿಕೆ ನೀಡಿಲ್ಲ. ಈ ಕ್ಲಿಪ್ ನಿಜವಾದದ್ದೇ ಅಥವಾ ಎಐ ಬಳಸಿ ಸೃಷ್ಟಿಸಲಾದ ವಿಡಿಯೋವೇ ಎಂಬ ಪ್ರಶ್ನೆ ಇದೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ, ಇದು ಒಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಗಡಿ ಮೀರಿದಂತೆ ಆಗುತ್ತದೆ.
- Madan Kumar
- Updated on: May 26, 2026
- 3:10 pm
ಮಾಯವಾಯ್ತು ಸಲ್ಮಾನ್ ಖಾನ್ ಇನ್‌ಸ್ಟಾಗ್ರಾಮ್ ಖಾತೆ; ಕಾರಣ ಏನು?
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಇನ್‌ಸ್ಟಾಗ್ರಾಮ್ ಖಾತೆ ಇತ್ತೀಚೆಗೆ ಅರ್ಧ ಗಂಟೆಗಳ ಕಾಲ ದಿಢೀರ್ ಕಣ್ಮರೆಯಾಗಿ, ಅಭಿಮಾನಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. 72 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಖಾತೆ 'ಮಾಯವಾದ' ನಂತರ, ಅಭಿಮಾನಿಗಳು ಆತಂಕಗೊಂಡಿದ್ದರು. ನಂತರ ಅದು ಯಥಾಸ್ಥಿತಿಗೆ ಮರಳಿದರೂ, ಈ ಕುರಿತು ಸಲ್ಮಾನ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.
- Shreelaxmi H
- Updated on: May 26, 2026
- 7:58 am
Tv9 Kannada News Live: ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ; ರಾಜ್ಯದಲ್ಲಿ ಭಾರಿ ಮಳೆ; ಈ ಹೊತ್ತಿನ ಪ್ರಮುಖ ಸುದ್ದಿಗಳು
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಏರ್‌ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್‌ವೇಗೆ ಅಪ್ಪಳಿಸಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಡಿಜಿಸಿಎ ತನಿಖೆಗೆ ಆದೇಶಿಸಿದೆ. ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.
- Gangadhar Saboji
- Updated on: May 21, 2026
- 6:08 pm
ಆಸ್ಪತ್ರೆ ಎದುರು ಗಲಾಟೆ; ಮರುದಿನವೇ ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಂಡ ಪಾಪರಾಜಿಗಳು
ನಟ ಸಲ್ಮಾನ್ ಖಾನ್ ಅವರ ಆಸ್ಪತ್ರೆಗೆ ಬಂದಿದ್ದಾಗ ಪಾಪರಾಜಿಗಳು ಕಿರುಚಾಡಿದ್ದರು. ಅವರ ವರ್ತನೆಗೆ ಸಲ್ಲು ಗರಂ ಆಗಿದ್ದರು. ಆದರೆ ಈಗ ಪಾಪರಾಜಿಗಳಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಕ್ಷಮೆ ಕೇಳಿದ್ದಾರೆ. ಇದರಿಂದ ಸಲ್ಮಾನ್ ಖಾನ್ ಕೂಡ ಎಲ್ಲವನ್ನೂ ಮರೆತು ಎಂದಿನಂತೆ ನಗುತ್ತಾ ಪೋಸ್ ನೀಡಿದ್ದಾರೆ.
- Madan Kumar
- Updated on: May 21, 2026
- 3:26 pm
ಸಲ್ಮಾನ್ ಖಾನ್ ಮನೆಯಲ್ಲಿ ಹಾವು ರಕ್ಷಣಾ ಕಾರ್ಯ ಹೇಗಿತ್ತು? ಇಲ್ಲಿದೆ ವೈರಲ್ ವಿಡಿಯೋ
ಸಲ್ಮಾನ್ ಖಾನ್ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಹಿಡಿದಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುರಕ್ಷಿತವಾಗಿ ಹಾವನ್ನು ಹಿಡಿದು ಸಾಗಿಸಲಾಗಿದೆ. ಈ ವೇಳೆ ಹಾವು ಹಿಡಿಯುವವರ ಜೊತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಜೊತೆಗಿದ್ದರು. ವೈರ್ ಆಗಿರುವ ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: May 19, 2026
- 11:50 am