AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತನ್ನ ಮೇಲೆ ಅಟ್ಯಾಕ್‌ ಮಾಡಲು ಬಂದ ಕಿಂಗ್ ಕೋಬ್ರಾವನ್ನೇ ಹಿಮ್ಮೆಟ್ಟಿಸಿದ ಬೆಕ್ಕು

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ದೃಶ್ಯ ವೈರಲ್‌ ಆಗಿದೆ. ಬೆಕ್ಕು ಹಾಗೂ ಕಿಂಗ್ ಕೋಬ್ರಾ ಮುಖಾಮುಖಿಯಾಗಿದೆ. ತನ್ನ ಮೇಲೆ ಅಟ್ಯಾಕ್ ಮಾಡಲು ಬಂದ ಕಿಂಗ್ ಕೋಬ್ರಾವನ್ನೇ ಹಿಮ್ಮೆಟ್ಟಿಸಿದ ದೃಶ್ಯ ಇದಾಗಿದೆ. ಈ ದೃಶ್ಯ ನೋಡಿದ ನೆಟ್ಟಿಗರ ಎದೆ ನಡುಗಿದೆ.

Video: ತನ್ನ ಮೇಲೆ ಅಟ್ಯಾಕ್‌ ಮಾಡಲು ಬಂದ ಕಿಂಗ್ ಕೋಬ್ರಾವನ್ನೇ ಹಿಮ್ಮೆಟ್ಟಿಸಿದ ಬೆಕ್ಕು
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on:Jul 23, 2026 | 12:53 PM

Share

ನೀವು ಹಾವು ಮುಂಗುಸಿಯ ಕಾದಾಟದ ವಿಡಿಯೋ ನೋಡಿರುತ್ತೀರಿ. ಆದರೆ ಇಲ್ಲೊಂದು ಬೆಕ್ಕು ಹಾಗೂ ಕಿಂಗ್ ಕೋಬ್ರಾದೊಂದಿಗೆ ಕಾದಾಟಕ್ಕೆ ಇಳಿದಿದೆ. ಬೆಕ್ಕೊಂದು ತನ್ನನ್ನು ಕೆಣಕಲು ಬಂದ ಕಿಂಗ್ ಕೋಬ್ರಾವನ್ನೇ (King Cobra) ಒಂದು ಕ್ಷಣ ಬೆದರಿಸಿದೆ. ಈ ಬಿಗ್ ಫೈಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಘರ್ ಕೆ ಕಲೇಶ್ (gharkekalesh) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಕ್ಕು ಹಾಗೂ ಕಿಂಗ್ ಕೋಬ್ರಾದ ಕಾದಾಟದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಬಯಲು ಪ್ರದೇಶವೊಂದರಲ್ಲಿ ಬೆಕ್ಕು ಹಾಗೂ ಕಿಂಗ್ ಕೋಬ್ರಾ ಮುಖಾಮುಖಿಯಾಗುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಪ್ರಾರಂಭದಲ್ಲಿ ಕೋಬ್ರಾವು ತನ್ನ ಹೆಡೆಯನ್ನು ಬಿಚ್ಚಿ ಬೆಕ್ಕನ್ನು ಹೆದರಿಸುತ್ತವೆ. ಆದರೆ ಬೆಕ್ಕು ಮಾತ್ರ ಏನೇ ಮಾಡಿದ್ರೂ ಭಯ ಪಡದೇ ಈ ವಿಷಕಾರಿ ಹಾವಿನ ಎದುರೇ ಸುಮ್ಮನೆ ಕುಳಿತುಕೊಳ್ಳುತ್ತದೆ. ಬೆಕ್ಕಿನ ಮೇಲೆ ಕಿಂಗ್ ಕೋಬ್ರಾ ದಾಳಿಗೆ ಮುಂದಾಗುತ್ತದೆ. ಬೆಕ್ಕು ತನ್ನ ಚತುರತೆಯಿಂದ ತಪ್ಪಿಸಿಕೊಳ್ಳುತ್ತದೆ. ತದನಂತರದಲ್ಲಿ ಬೆಕ್ಕಿಗೆ ತನ್ನ ಪಂಜದಿಂದ ಪಂಜದಿಂದ ಹಾವನ್ನು ಹೆದರಿಸಿ, ಎಚ್ಚರಿಕೆ ನೀಡುವಂತಿದೆ. ಕೊನೆಗೆ ಕಿಂಗ್‌ ಕೋಬ್ರಾ ಅಲ್ಲಿಂದ ಹೊರಟು ಹೋಗಿದೆ.

ಇದನ್ನೂ ಓದಿ: ಹಠಾತ್ತನೆ ಯುವಕನ ಮೇಲೆ ದಾಳಿಗೆ ಬಂದ ನಾಯಿಗಳ ಹಿಂಡು, ಆಮೇಲಾಗಿದ್ದೇನು ನೋಡಿ?

ಈ ವಿಡಿಯೋ ನಲವತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹಾವಿಗೆ ಬೆಕ್ಕಿನ ವೇಗವನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಬೆಕ್ಕನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಕಿಂಗ್ ಕೋಬ್ರಾದ ಎದುರಿಗೆ ಕಾದಾಡಲು ಧೈರ್ಯ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Thu, 23 July 26

Follow Us