AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಂದು ಕಾಲೇಜ್ ಫೀಸ್ ಕಟ್ಟಲು ದುಡ್ಡಿಗಾಗಿ ಪರದಾಟ, ಇಂದು ಕೋಟಿ ರೂ ಸಂಪಾದನೆ; ಇದು ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್‌ನ ಕಥೆ

ಜೀವನದಲ್ಲಿ ಕಷ್ಟಗಳು ಸರ್ವೇ ಸಾಮಾನ್ಯ. ಆದರೆ ಅದನ್ನು ಮೆಟ್ಟಿ ನಿಲ್ಲಲೇ ಬೇಕು. ಕಷ್ಟದ ದಿನಗಳನ್ನು ಕಂಡ ಯುವಕನೊಬ್ಬ ಇಂದು ಕೋಟಿ ಸಂಪಾದನೆ ಮಾಡುತ್ತಿದ್ದಾನೆ. ಹೌದು, ಬೆಂಗಳೂರಿನ ಯುವಕನೊಬ್ಬ ಮೈಕ್ರೋಸಾಫ್ಟ್‌ನಲ್ಲಿ 1.9 ಕೋಟಿ ರೂ ಸಂಬಳ ಪಡೆಯುತ್ತಿದ್ದಾನೆ. ಆದರೆ ಕಾಲೇಜಿಗೆ ಹೋಗುತ್ತಿದ್ದಾಗ ಟೈಮ್ ಸರಿ ಇರಲಿಲ್ಲ. ಆರ್ಥಿಕವಾಗಿ ಬಹಳ ತೊಂದರೆಯಿತ್ತು . ಇಂದು ಯಶಸ್ಸು ಸಾಧಿಸಿದ್ದು, ತನ್ನ ತಂದೆ ತಾಯಿಯ ತ್ಯಾಗವನ್ನು ನೆನಪಿಸಿಕೊಂಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಅಂದು ಕಾಲೇಜ್ ಫೀಸ್ ಕಟ್ಟಲು ದುಡ್ಡಿಗಾಗಿ ಪರದಾಟ, ಇಂದು ಕೋಟಿ ರೂ ಸಂಪಾದನೆ; ಇದು ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್‌ನ ಕಥೆ
ಮನು ಅಗರ್‌ವಾಲ್‌ Image Credit source: LinkedIn
ಸಾಯಿನಂದಾ
|

Updated on: Jul 07, 2026 | 11:33 AM

Share

ಬೆಂಗಳೂರು, ಜುಲೈ 07: ಬದುಕು ಒಂದೇ ರೀತಿ ಇರಲ್ಲ. ಏನು ಇಲ್ಲದೆ ಒಂದೊಂದು ರೂಪಾಯಿಗೂ ಕಷ್ಟ ಪಡ್ತಾ ಇದ್ದ ವ್ಯಕ್ತಿ ಯಾರು ಊಹೆ ಮಾಡದ ಮಟ್ಟಿಗೆ ಬೆಳೆಯಬಹುದು. ಹೀಗಾಗಿ ಯಶಸ್ಸು ಯಾರಪ್ಪ ಸ್ವತ್ತು ಅಲ್ಲ. ಇದಕ್ಕೆ ಉದಾಹರಣೆಯಂತಿದ್ದಾನೆ ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ (software engineer) . ಒಂದು ಕಾಲದಲ್ಲಿ ಕಾಲೇಜ್ ಫೀಸ್ ಕಟ್ಟಲು ಅಮ್ಮ ತನ್ನ ಬಳೆಯಿದ್ದ ಮಾರಿದ್ದನಂತೆ. ಆದರೆ ಇದೀಗ ಕೋಟಿಗಟ್ಟಲೆ ದುಡಿದು ಅಮ್ಮನಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದಾನೆ. ತನ್ನ ಯಶಸ್ಸಿನ ಹಿಂದಿನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ನೆಟ್ಟಿಗರು ಈ ಯುವಕನ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

ಮನು ಅಗರವಾಲ್ (Manu Agrawal) ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತನ್ನ ಜೀವನದ ಕಥೆ ಹಾಗೂ ತಂದೆ ತಾಯಿಯ ತ್ಯಾಗವನ್ನು ನೆನಪಿಸಿಕೊಂಡಿದ್ದಾನೆ. ಈ ಪೋಸ್ಟ್ ನಲ್ಲಿ ನಾನು ಇಂಜಿನಿಯರ್ ಓದುತ್ತಿದ್ದ ಸಂದರ್ಭದಲ್ಲಿ ಒಂದು ಸೆಮಿಸ್ಟರ್‌ನ ಫೀಸ್ 15,000 ರೂ ಕಟ್ಟಲು ನನ್ನ ಅಪ್ಪ ಅಮ್ಮನ ಒಡವೆಯನ್ನು ಮಾರಿದರು. ನನ್ನ ತಾಯಿ ಹಿಂದೆ ಮುಂದೆ ನೋಡದೆ ಚಿನ್ನದ ಬಳೆಗಳನ್ನು ನೀಡಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅಮ್ಮ ಕಣ್ಣೀರು ಹಾಕಲಿಲ್ಲ. ಅವರು ನನ್ನನ್ನು ನೋಡಿ ಬಳೆ ನೀಡಿದ ದಿನ, ನಾನು ನಿದ್ದೆಯನ್ನು ಮಾಡಲೇ ಇಲ್ಲ ಎಂದು ಹೇಳಿದ್ದಾನೆ.

ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ

ಓದು ಮುಗಿಯುತ್ತಿದ್ದಂತೆ , ಅಮೆರಿಕದ ಮೈಕ್ರೋಸಾಫ್ಟ್‌ನ ಸಿಯಾಟಲ್ ಕಚೇರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದೆ. ನನಗೆ ಈಗ ವಾರ್ಷಿಕ ಸಂಬಳ 1.9 ಕೋಟಿ ರೂ. ಕೆಲಸ ಸಿಕ್ಕೊಡನೆ ತಾಯಿಗೆ ಕರೆ ಮಾಡಿ, ನಿನಗೆ ಇಷ್ಟ ಬಂದಷ್ಟು ಒಡವೆಗಳನ್ನು ಖರೀದಿಸು ಎಂದು ಹೇಳಿದ್ದೆ. ನನ್ನ ಅಮ್ಮ ಮಾತ್ರ, ನನಗೆ  ನಾನು ಎಲ್ಲವನ್ನೂ ಮರಳಿ ಪಡೆದುಕೊಂಡೆ ಎಂದು ಬಿಟ್ಟರು. ಅದರ ಕೆಲವು ಸಾಲಗಳನ್ನು ತೀರಿಸಲು ಸಾಧ್ಯವಿಲ್ಲ ಎಂದು ತಂದೆ ತಾಯಿಯ ನಿಸ್ವಾರ್ಥ ಪ್ರೀತಿಯನ್ನು ವಿವರಿಸಿದ್ದಾನೆ.

ಇದನ್ನೂ ಓದಿ: ‘ಬೆಂಗಳೂರು ಭಾರತದ ಯುರೋಪ್ ಇದ್ದಂತೆ! ಸಿಲಿಕಾನ್ ಸಿಟಿಗೆ ಫಿದಾ ಆದ ಯುವತಿಯ ವಿಡಿಯೋ ವೈರಲ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಂದೆ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಮಗನನ್ನು ಪಡೆದ ನೀವೇ ಧನ್ಯರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ನಿಜಕ್ಕೂ ಸ್ಫೂರ್ತಿದಾಯಕ ಕಥೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ