AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಗಳ ಮಾರ್ಗದರ್ಶನದಲ್ಲಿ ಅಮೆಜಾನ್‌ನಲ್ಲಿ ಆರ್ಡರ್ ಮಾಡುವುದನ್ನು ಕಲಿತ ತಾಯಿ

ಈಗಿನ ಕಾಲದ ಮಕ್ಕಳು ಸ್ಮಾರ್ಟ್ ಫೋನ್ ಬಳಸುವುದರಲ್ಲಿ ನಿಸ್ಸಿಮರು. ವಿಡಿಯೋ ಕಾಲ್ ಯಿಂದ ಹಿಡಿದು ಆನ್ಲೈನ್‌ನಲ್ಲಿ ಪ್ರಾಡಕ್ಟ್ ಆರ್ಡರ್ ಮಾಡುವುದು ಹೀಗೆ ಪ್ರತಿಯೊಂದನ್ನು ಅರೆದು ಕುಡಿದು ಬಿಟ್ಟಿದ್ದಾರೆ. ಇಲ್ಲೊಬ್ಬ ಯುವತಿ ತನ್ನ ತಾಯಿಗೆ ಅಮೆಜಾನ್‌ನಲ್ಲಿ ಆರ್ಡರ್ ಮಾಡುವುದು ಹೇಗೆಂದು ಕಲಿಸಿದ್ದಾಳೆ. ತಾಯಿ ಮಗಳು ಹೇಳಿದ್ದಂತೆ ತನ್ನ ಹಳೆಯ ಡೈರಿಯಲ್ಲಿ ಬರೆದಿಡುವ ಕ್ಲಿಪ್ ಎಲ್ಲರ ಗಮನ ಸೆಳೆದಿದೆ.

Video: ಮಗಳ ಮಾರ್ಗದರ್ಶನದಲ್ಲಿ ಅಮೆಜಾನ್‌ನಲ್ಲಿ ಆರ್ಡರ್ ಮಾಡುವುದನ್ನು ಕಲಿತ ತಾಯಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 05, 2026 | 11:31 AM

Share

ಹೆಚ್ಚಿನ ತಂದೆ ತಾಯಿ, ಅಜ್ಜ ಅಜ್ಜಿಯಂದಿರಿಗೆ ಸ್ಮಾರ್ಟ್ ಫೋನ್ ಬಳಕೆ ಅಷ್ಟೊಂದು ತಿಳಿದಿಲ್ಲ. ಆದರೆ ಈಗಿನ ಮಕ್ಕಳು ಮನೆಯಲ್ಲಿ ತಂದೆ ತಾಯಿ ಅಥವಾ ಅಜ್ಜ ಅಜ್ಜಿಯಂದಿರು ಇದ್ದರೆ ಅವರಿಗೆ ಸ್ಮಾರ್ಟ್ ಫೋನ್ (smart phone) ಹಾಗೂ ಕಂಪ್ಯೂಟರ್ ಬಳಕೆ ಹೀಗೆ ಹತ್ತು ಹಲವು ವಿಷಯಗಳನ್ನು ಹೇಳಿ ಕೊಡುವುದನ್ನು ನೋಡಬಹುದು. ಇದೀಗ ಇಂತಹದ್ದೇ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಅಮೆಜಾನ್‌ನಲ್ಲಿ (amazon) ಆರ್ಡರ್ ಮಾಡುವುದು ಹೇಗೆಂದು ತನ್ನ ತಾಯಿಗೆ ಕಲಿಸುತ್ತಿರುವ ಯುವತಿಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ಕ್ಲಿಪಿಂಗ್‌ಗೆ ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಧಿ ಚೌಧರಿ (nikum_diaries) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ಗೆ ತಂತ್ರಜ್ಞಾನದ ಬಗ್ಗೆ ಸಣ್ಣಪುಟ್ಟ ವಿಷಯಗಳನ್ನು ಅವಳಿಗೆ ಕಲಿಸುವುದು ನನಗೆ ತುಂಬಾ ಇಷ್ಟ. ಇಂದು, ನಾನು ಅವಳಿಗೆ ಅಮೆಜಾನ್ ನಿಂದ ಹೇಗೆ ಆರ್ಡರ್ ಮಾಡಬೇಕೆಂದು ಕಲಿಸಿದೆ. ಅವಳು ತನ್ನ 2002 ರಿಂದ ತನ್ನ ದಿನಚರಿಯಲ್ಲಿ ಪ್ರತಿ ಕೆಲಸವನ್ನು ಎಚ್ಚರಿಕೆಯಿಂದ ಬರೆದಿದ್ದಾಳೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಯುವತಿ ಅಮೆಜಾನ್‌ನಿಂದ ಆರ್ಡರ್ ಮಾಡುವ ಪ್ರಕ್ರಿಯೆಯನ್ನು ಹಂತ ಹಂತವಾಗಿ ವಿವರಿಸುವುದನ್ನು ಕಾಣಬಹುದು. ಯುವತಿಯ ತಾಯಿ ಬಹಳ ಎಚ್ಚರಿಕೆಯಿಂದ ಆಲಿಸುತ್ತಾ, ತನ್ನ 2002ರ ಹಳೆಯ ಡೈರಿಯಲ್ಲಿ ಪ್ರತಿ ಸೂಚನೆಯನ್ನು ಬರೆದಿಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಆರ್ಡರ್‌ನ್ನು ಮನೆಗೆ ತಲುಪಿಸಿದ ಡೆಲಿವರಿ ಬಾಯ್‌ಗೆ 500 ರೂ ಟಿಪ್ಸ್ ಕೊಟ್ಟ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ತಾಯಿಯ ಕೈ ಬರಹ ನನ್ನ ತಾಯಿಯ ಕೈಬರಹವನ್ನು ಹೋಲುತ್ತದೆ. ದಯವಿಟ್ಟು ಇಂದು ನಿಮ್ಮ ತಾಯಿಗೆ ನನ್ನದೊಂದು ಅಪ್ಪುಗೆ ನೀಡಿ ಎಂದಿದ್ದಾರೆ. ಇನ್ನೊಬ್ಬರು, ಈ ವಯಸ್ಸಿನಲ್ಲಿ ಕಲಿಯುವ ಮನಸ್ಸು ಇರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸದ್ದನ್ನು ಕಲಿಯುವ ನಿಮ್ಮ ತಾಯಿಯ ಉತ್ಸಾಹಕ್ಕೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ