Video: ಬ್ಯಾಚುರಲ್ ಪಾರ್ಟಿಯಲ್ಲಿ ಆಪ್ತ ಗೆಳತಿಯ ಸರ್ಪ್ರೈಸ್‌ನಿಂದ ಮುರಿದು ಬಿತ್ತು ಯುವತಿಯ ಮದುವೆ
ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಆಗೋದಿದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಹೌದು, ಬ್ಯಾಚುಲರ್ ಪಾರ್ಟಿಯಲ್ಲಿ ಭಾವಿ ವಧುವಿನ ಎಕ್ಸ್ ಲವರ್ ಗಳನ್ನು ಶುಭ ಹಾರೈಸುವ ವಿಡಿಯೋ ಮಾಡಿ ಆಪ್ತ ಗೆಳತಿ ಆಕೆಗೆ ಸರ್ಪ್ರೈಸ್ ನೀಡಿದ್ದಾಳೆ. ಆದರೆ ಈ ವಿಡಿಯೋ ನೋಡಿದ ವಧುವು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮದುವೆ (marriage), ವೈಯುಕ್ತಿಕ ಜೀವನದ ವಿಷ್ಯದಲ್ಲಿ ಎಷ್ಟು ಜಾಗರೂಕರಾಗಿದ್ರು ಸಾಲಲ್ಲ. ಏಕಾಏಕಿ ತೆಗೆದುಕೊಳ್ಳುವ ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ಇದೀಗ ಇಲ್ಲೊಬ್ಬಳು ಯುವತಿಯದ್ದು ಮದುವೆಯೇ ಕ್ಯಾನ್ಸಲ್ ಆಗಿದೆ. ಇದಕ್ಕೆ ಕಾರಣವಾಗಿದ್ದು ಭಾವಿ ವಧುವಿನ ಬ್ಯಾಚುಲರ್ ಪಾರ್ಟಿಯಲ್ಲಿ ಆಕೆಯ ಸ್ನೇಹಿತೆ ನೀಡಿದ ಸರ್ಪ್ರೈಸ್. ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದ್ದ ಯುವತಿಯ ಮಾಜಿ ಪ್ರೇಮಿಗಳು ಶುಭ ಹಾರೈಸುವ ವಿಡಿಯೋ ಮಾಡಿ ಆಕೆಯ ಸ್ನೇಹಿತೆ ಸರ್ಪ್ರೈಸ್ ನೀಡಿದ್ದಾಳೆ. ಈ ಪಾರ್ಟಿ ವಿಡಿಯೋ ಭಾವಿ ವರ ನೋಡುತ್ತಿದ್ದಂತೆ ಮದುವೆಯೇ ಕ್ಯಾನ್ಸಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ರೀತಿ ಸರ್ಪ್ರೈಸ್ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಅಂತಹದ್ದೇನಿದೆ?
ಭವೇಶ್ ಗುಜರಾತಿ (Bhavesh Gujrati) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿವಾಹ ಪೂರ್ವ ಬ್ಯಾಚುಲರ್ ಪಾರ್ಟಿಯಲ್ಲಿ, ಭಾವಿ ವಧುವಿನ ಆಪ್ತ ಗೆಳತಿ ಆಕೆಗೆ ವಿಶೇಷ ಸರ್ಪ್ರೈಸ್ ನೀಡಿರುವುದನ್ನು ಕಾಣಬಹುದು. ವಧುವಿನ ಮಾಜಿ ಪ್ರೇಮಿಗಳಿಂದ ಮದುವೆಗೆ ಶುಭ ಹಾರೈಸುವ ವಿಡಿಯೋ ಮಾಡಿದ್ದಾಳೆ. ಭಾವಿ ವಧು ಸ್ನೇಹಿತೆಯ ಸರ್ಪ್ರೈಸ್ ನೋಡಿ ಶಾಕ್ ಆಗಿದ್ದಾಳೆ. ಮಾಜಿ ಪ್ರೇಮಿಗಳು ಶುಭ ಹಾರೈಸುವ ವಧುವು ನೀಡಿದ ರಿಯಾಕ್ಷನ್‌ನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಮದುವೆ ಕ್ಯಾನ್ಸಲ್ ಮಾಡಿದ ವರ
ಭಾವಿ ವಧುವಿನ ಬ್ಯಾಚುಲರ್ ಪಾರ್ಟಿ ವಿಡಿಯೋ ನೋಡಿದ ವರ ಹಾಗೂ ಆತನ ಕುಟುಂಬ ಸದಸ್ಯರು ಶಾಕ್ ಆಗಿದ್ದಾರೆ. ಕೊನೆಗೆ ವರ ಈ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ. ಈ ಮದುವೆ ಕ್ಯಾನ್ಸಲ್ ಆದ ವಿಷ್ಯ ತಿಳಿಯುತ್ತಿದ್ದಂತೆ ವಧು ತನ್ನ ಇನ್ಸ್ಟಾಗ್ರಾಮ್ ನಿಂದ ಈ ಸರ್ಪ್ರೈಸ್ ವಿಡಿಯೋ ಡಿಲೀಟ್ ಮಾಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ
This video reportedly reached the groom, and he called off the wedding. She has since deleted the video from her Instagram. https://t.co/30iXcfXdvL
— Bhavesh Gujrati (@Bhaveshlivelife) September 9, 2026
ಇದನ್ನೂ ಓದಿ: ಮಾಜಿ ಪ್ರೇಮಿಗಳ ಭೇಟಿಗಾಗಿಯೇ ಇದೆ ಲವ್ ಮಾರ್ಕೆಟ್, ಏನಿದರ ವಿಶೇಷತೆ?
ಈ ವಿಡಿಯೋ ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಸರ್ಪ್ರೈಸ್ ಬೇಕಾ ಎಂದಿದ್ದಾರೆ. ಇನ್ನೊಬ್ಬರು, ಹುಡುಗಾಟಿಗೆ ಜೀವನವನ್ನೇ ಹಾಳು ಮಾಡಿಕೊಳ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಮ್ಯಾಟರ್ ಇಷ್ಟು ಸೀರಿಯಸ್ ಆಗ್ತದೆ ಎಂದು ಆಕೆಗೆ ಗೊತ್ತಿರಲಿಲ್ಲ ಅನಿಸುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Fri, 11 September 26




