AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ

ಈಗಿನ ಪುಟಾಣಿಗಳು ತುಂಬಾನೇ ಜಾಣರು. ಅಷ್ಟೇ ಅಲ್ಲ, ಹೆತ್ತವರ ಮಾತನ್ನು ಸ್ವಲ್ಪ ಕೂಡ ಕೇಳುವುದೇ ಇಲ್ಲ ಎನ್ನುವುದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಸ್ನಾನ ಮಾಡಿಸ್ತೀನಿ ಎನ್ನುತ್ತಿದ್ದಂತೆ ಪುಟ್ಟ ಮಗುವೊಂದು ತನ್ನ ತಾಯಿಗೆ ವಾರ್ನಿಂಗ್ ಕೊಟ್ಟಿದೆ. ಪುಟ್ಟ ಕಂದಮ್ಮನ ಪ್ರತಿಕ್ರಿಯೆ ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ
ವೈರಲ್‌ ವಿಡಿಯೋImage Credit source: Facebook
ಸಾಯಿನಂದಾ
|

Updated on:Mar 26, 2026 | 8:47 PM

Share

ಈಗಿನ ಮಕ್ಕಳು (children) ಎಷ್ಟು ಜಾಣರೋ, ಅಷ್ಟೇ ತುಂಟರು ಕೂಡ. ಮಕ್ಕಳ ಮುಂದೆ ಏನಾದರೂ ಹೇಳಿದರೆ ಸಾಕು, ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾರೆ. ಒಂದೇ ಒಂದು ಮಾತಿನಲ್ಲಿ ಹೆತ್ತವರ ಬಾಯಿ ಮುಚ್ಚಿಸಿ ಬಿಡುತ್ತಾರೆ. ಆದರೆ ಇಲ್ಲೊಂದು ಪುಟಾಣಿಯೂ (little kid) ಅದೇ ರೀತಿ ಮಾಡಿದೆ. ನಾನು ಸ್ನಾನ ಮಾಡಿಸ್ತೀನಿ ಎಂದು ತಾಯಿ ಹೇಳುತ್ತಿದ್ದಂತೆ ತನ್ನದೇ ಭಾಷೆಯಲ್ಲಿ ಬೈಯಲು ಶುರು ಮಾಡಿದ್ದು ವಾರ್ನಿಂಗ್ ಕೊಟ್ಟಿದೆ. ಈ ಪುಟ್ಟ ಕಂದಮ್ಮ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪೂಜಾ ಶೆಟ್ಟಿ (Pooja Shetty) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟ್ಟ ಮಗುವೊಂದು ಬಾತ್ ರೂಮ್‌ನಲ್ಲಿ ನೀರಿನಲ್ಲಿ ಆಟ ಆಡುತ್ತಿದೆ. ಇತ್ತ ತಾಯಿ ಬಿಟ್ಟು ಬಾರೆ ಸಾಕು, ನಾನು ಸ್ನಾನ ಮಾಡಿಸ್ತೀನಿ ಎನ್ನುತ್ತಿದ್ದಂತೆ ತಾಯಿಗೆ ತನ್ನ ಭಾಷೆಯಲ್ಲಿ ಬೈಯಲು ಶುರು ಮಾಡಿರುವುದನ್ನು ಕಾಣಬಹುದು. ಆ ಬಳಿಕ ಅಮ್ಮ ನೀನು ಸುಮ್ನೆ ಇರ್ತಿಯಾ ಎನ್ನುವಂತೆ ವಾರ್ನಿಂಗ್ ನೀಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸ್ಕೂಲ್ ಅಸೆಂಬ್ಲಿಯಲ್ಲಿ ಕಣ್ಣು ಮುಚ್ಚಿಕೊಂಡೇ ಲಾಲಿ ಪಾಪ್ ಸವಿಯುತ್ತಾ ನಿಂತ ಪುಟಾಣಿ

ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಪ್ಪಾ ಇಷ್ಟೊಂದು ಕೆಟ್ಟ ಮಾತು ಎಂದಿದ್ದಾರೆ. ಇನ್ನೊಬ್ಬರು, ಮತ್ತೆ ನನ್ನ ಸೊಸೆ ಅಂದ್ಮೇಲೆ ಗಾಂರ್ಭಿಯ ಬೇಡ್ವಾ. ನೀನು ಮಾಡು ಕಂದಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಣ್ಮಕ್ಕಳೇ ಹಾಗೆ, ಸಾಧ್ಯನೇ ಇಲ್ಲ ವಾದ ಮಾಡೋಕೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 pm, Thu, 26 March 26

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More