AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲಿಫ್ಟ್‌ನಲ್ಲಿ ಕನ್ನಡಿಗಳು ಇರುವುದು ಏಕೆ? ಇದೇ ನೋಡಿ ಕಾರಣ

ನೀವು ಸಾಕಷ್ಟು ಬಾರಿ ಲಿಫ್ಟ್‌ನಲ್ಲಿ ಹೋಗಿರುತ್ತೀರಿ. ಇದೇ ವೇಳೆ ಪ್ರತಿ ಲಿಫ್ಟ್‌ನಲ್ಲಿ ಕನ್ನಡಿ ಇರುವುದನ್ನು ನೀವು ಗಮನಿಸಿರುತ್ತೀರಿ. ಈ ಲಿಫ್ಟ್‌ನಲ್ಲಿ ಕನ್ನಡಿ ಇರುವುದರ ಹಿಂದಿನ ಕಾರಣ ಎಷ್ಟೋ ಜನರಿಗೆ ತಿಳಿದೇ ಇಲ್ಲ. ಆದರೆ ಈ ಮಿರರ್‌ ಅಳವಡಿಸಿಕೊಂಡಿರುವುದರ ಹಿಂದೆ ಹಲವು ಕಾರಣಗಳಿವೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Viral: ಲಿಫ್ಟ್‌ನಲ್ಲಿ ಕನ್ನಡಿಗಳು ಇರುವುದು ಏಕೆ? ಇದೇ ನೋಡಿ ಕಾರಣ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jul 05, 2026 | 5:47 PM

Share

ನೀವು ಆಫೀಸ್, ಮಾಲ್, ರೆಸ್ಟೋರೆಂಟ್ ಗೆ ಹೋದಾಗ ಯಾರಪ್ಪ ಮೆಟ್ಟಿಲು ಹತ್ತುತ್ತಾರೆಂದು ಲಿಫ್ಟ್‌ನಲ್ಲಿ (elevators) ಹೋಗಿರುತ್ತೀರಿ. ಲಿಫ್ಟ್ ನಲ್ಲಿರುವ ಕನ್ನಡಿಯಲ್ಲಿ(mirror) ಮುಖ ನೋಡಿರುತ್ತೀರಿ. ಈ ಲಿಫ್ಟ್ ಇರುವುದು ನಮ್ಮ ಅಲಂಕಾರಕ್ಕಾಗಿ, ಮುಖ ನೋಡಿಕೊಳ್ಳಲು ಎಂದೇ ಅನೇಕರು ಅಂದುಕೊಂಡಿದ್ದಾರೆ. ಆದರೆ ಎಷ್ಟೋ ಜನರಿಗೆ ಲಿಫ್ಟ್‌ನಲ್ಲಿ ಕನ್ನಡಿ ಅಳವಡಿಕೆ ಮಾಡಿರುವುದರ ಹಿಂದಿನ ಕಾರಣ ಗೊತ್ತಿಲ್ಲ. ನೀವು ಲಿಫ್ಟ್ ಬಳಕೆ ಮಾಡುವ ಮುನ್ನ ಕನ್ನಡಿಗಳನ್ನು ಅಳವಡಿಕೆ ಮಾಡಿರುವುದರ ಹಿಂದಿನ ಇಂಟರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳೋದು ಒಳ್ಳೆಯದು.

ಲಿಫ್ಟ್‌ನಲ್ಲಿ ಕನ್ನಡಿ ಜೋಡಿಸುವುದು ಕೇವಲ ಮುಖ ನೋಡಿಕೊಳ್ಳಲು ಮಾತ್ರವಲ್ಲ. ಸುರಕ್ಷತೆಯನ್ನು ಒಳಗೊಂಡಿದೆ. ಇದು ಮಾನಸಿಕ ಆರೋಗ್ಯಕ್ಕೂ ಅನುಕೂಲಕರವಾಗಿದೆ. ಕೆಲವರು ಸಣ್ಣ ಕೊಠಡಿಗಳು ಅಥವಾ ಇಕ್ಕಟಾದ ಸ್ಥಳಗಳಲ್ಲಿರುವಾಗ ಉಸಿರುಗಟ್ಟಿದಂತಾಗುತ್ತದೆ.

ಇನ್ನು ಕೆಲವರು ಆತಂಕದಲ್ಲಿರುತ್ತಾರೆ. ಕ್ಲಾಸ್ಟ್ರೋಫೋಬಿಯಾ ಅಂದರೆ ಗಾಬರಿಯಾಗುತ್ತಾರೆ. ಕನ್ನಡಿ ಅಳವಡಿಕೆ ಮಾಡಿಕೊಳ್ಳುವುದರಿಂದ ಇದು ಲಿಫ್ಟ್ ನ ಸ್ಥಳಾವಕಾಶವನ್ನು ದೊಡ್ಡದಾಗಿ ಬಿಂಬಿಸುತ್ತದೆ. ಜತೆಗೆ ಆತಂಕ ಮತ್ತು ಒತ್ತಡವು ಕಡಿಮೆ ಮಾಡಿ ಸುರಕ್ಷತೆ ಭಾವನೆ ಮೂಡಿಸುತ್ತದೆ.

ಇದನ್ನೂ ಓದಿ: ಚಿನ್ನ ಹಳದಿ ಬಣ್ಣದಲ್ಲಿ ಇರೋದು ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ

ಲಿಫ್ಟ್ ನಲ್ಲಿ ಕನ್ನಡಿ ಅಳವಡಿಕೆ ವಿಕಲಚೇತನರಿಗೆ ಬಹಳ ಅನುಕೂಲವಾಗಿದೆ. ಹೌದು, ವ್ಹೀಲ್ ಚೇರ್ ಬಳಸುವವರು ಲಿಫ್ಟ್ ನಲ್ಲಿ ತಿರುಗುವಾಗ ಈ ಕನ್ನಡಿ ನೋಡಿ ತಮ್ಮ ಚಲನವಲನಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಲಿಫ್ಟ್‌ನಲ್ಲಿ ಇರುವಾಗ ನಮ್ಮ ಜತೆಗೆ ಅಪರಿಚಿತ ವ್ಯಕ್ತಿಗಳು ಇರುತ್ತಾರೆ. ನಮ್ಮ ಜತೆಗಿರುವ ಜನರ ಚಲನವಲನಗಳನ್ನು ಗಮನಿಸಲು ಕನ್ನಡಿ ಸಹಾಯಕವಾಗಿದೆ. ಸುರಕ್ಷತೆ ದೃಷ್ಟಿಯಿಂದಲೂ ಈ ಕನ್ನಡಿಗಳು ಸಹಾಯಕ್ಕೆ ಬರುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us