AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿವೋರ್ಸ್ ಬಳಿಕ 9 ಕಿ.ಮೀ ದೀಡ ನಮಸ್ಕಾರ ಹಾಕಿ ದೇವರಿಗೆ ಥ್ಯಾಂಕ್ಸ್ ಹೇಳಿದ ಯುವಕ! ವಿಡಿಯೋ ವೈರಲ್‌

ಇತ್ತೀಚೆಗೆ ವಿಚ್ಛೇದನ ಪಡೆದ ನಂತರ ಡಿವೋರ್ಸ್ ಪಾರ್ಟಿ ಮಾಡುವುದು ಹೊಸ ಟ್ರೆಂಡ್ ಆಗುತ್ತಿದೆ. ಆದರೆ, ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ 25 ವರ್ಷದ ಯುವಕ ತನ್ನ ವಿಚ್ಛೇದನವನ್ನು ಬಹಳ ವಿಶಿಷ್ಟವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಭ್ರಮಿಸಿದ್ದಾರೆ. ಕೋರ್ಟ್​​ನಿನಲ್ಲಿ ಪತ್ನಿಯಿಂದ ವಿಚ್ಛೇದನ ಸಿಗುತ್ತಿದ್ದಂತೆಯೇ ಯುವಕ ದೇವರಿಗೆ ಥ್ಯಾಂಕ್ಸ್​ ಹೇಳಿದ್ದಾನೆ. ಅಲ್ಲದೇ ಬರೋಬ್ಬರಿ 9 ಕಿ.ಮೀ. ದೂರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.

ಡಿವೋರ್ಸ್ ಬಳಿಕ 9 ಕಿ.ಮೀ ದೀಡ ನಮಸ್ಕಾರ ಹಾಕಿ ದೇವರಿಗೆ ಥ್ಯಾಂಕ್ಸ್ ಹೇಳಿದ ಯುವಕ! ವಿಡಿಯೋ ವೈರಲ್‌
Basti Youth
ರಮೇಶ್ ಬಿ. ಜವಳಗೇರಾ
|

Updated on: Mar 30, 2026 | 8:08 PM

Share

ಲಕ್ನೋ, (ಮಾರ್ಚ್ 30): ಸಾಮಾನ್ಯವಾಗಿ ದಾಂಪತ್ಯ ಜೀವನದಲ್ಲಿ ವಿಚ್ಛೇದನ (Divorce) ಸಂಭವಿಸಿದರೆ ಅದು ದುಃಖದ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಕೆಲವರು ‘ಡಿವೋರ್ಸ್ ಪಾರ್ಟಿ’ ನೀಡಿ ಸಂಭ್ರಮಿಸುವುದನ್ನೂ ನಾವು ನೋಡಿದ್ದೇವೆ. ಅದರಂತೆ ಉತ್ತರ ಪ್ರದೇಶದ (Uttara Pradesh) ಬಸ್ತಿ ಜಿಲ್ಲೆಯ 25 ವರ್ಷದ ಯುವಕನೋರ್ವ ತನಗೆ ಪತ್ನಿಯಿಂದ ​ಕೋರ್ಟಿನಲ್ಲಿ ವಿಚ್ಛೇದನ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಲು ಬರೋಬ್ಬರಿ 9 ಕಿಲೋಮೀಟರ್‌ಗಳಷ್ಟು ದೂರ ದೀಡ ನಮಸ್ಕಾರ ಹಾಕುವ ಮೂಲಕ ವಿಶಿಷ್ಟವಾಗಿ ಹರಕೆ ತೀರಿಸಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ ಜೋಗೇಶ್ ಎಂಬ ಯುವಕ ಈ ವಿಚಿತ್ರ ಸಾಹಸ ಮಾಡಿದವರು. ನವರಾತ್ರಿಯ ಶುಭ ಸಂದರ್ಭದಲ್ಲಿ ಅವರು ತಮ್ಮ ಗ್ರಾಮದಿಂದ ಸ್ಥಳೀಯ ‘ಬೈದಾ ಸಮಯ ಮಾತಾ’ ದೇವಸ್ಥಾನದವರೆಗೆ ನೆಲದ ಮೇಲೆ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಸಾಗಿದ್ದಾರೆ. ಬೆಳಿಗ್ಗೆ ಆರಂಭವಾದ ಈ ಕಠಿಣ ಯಾತ್ರೆಯು ಸುಮಾರು 12 ಗಂಟೆಗಳ ಕಾಲ ನಡೆದಿದ್ದು, ಇಡೀ ಹಾದಿಯುದ್ದಕ್ಕೂ ಜೋಗೇಶ್ ಅವರು ಉಪವಾಸವಿದ್ದು ‘ಜೈ ಶ್ರೀರಾಮ್’ ಮತ್ತು ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗುತ್ತಾ ದೇವಸ್ಥಾನ ತಲುಪಿದ್ದಾರೆ.

ಇದನ್ನೂ ನೋಡಿ: ಬಿರುಗಾಳಿಗೆ ಮಂಟಪವನ್ನೇ ಹಾರದಂತೆ ತಡೆದವನು, ಇನ್ನು ಪತ್ನಿ ಕೈ ಬಿಡುವನೇ!

ಪ್ರಕರಣದ ಹಿನ್ನೆಲೆ

ಜೋಗೇಶ್ ಅವರಿಗೆ 2022 ರಲ್ಲಿ ಮದುವೆಯಾಗಿತ್ತು. ಆದರೆ ಮದುವೆಯಾದ ಮೊದಲ ದಿನದಿಂದಲೇ ದಂಪತಿಗಳ ನಡುವೆ ತೀವ್ರ ಗಲಾಟೆಗಳು ಶುರುವಾಗಿದ್ದವು. ಇದರಿಂದ ದಾಂಪತ್ಯ ಜೀವನ ನರಕಸದೃಶವಾದಾಗ ಜೋಗೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೇ ನನಗೆ ಈ ಕಿರಿಕಿರಿ ತುಂಬಿದ ದಾಂಪತ್ಯದಿಂದ ಮುಕ್ತಿ ಸಿಕ್ಕರೆ ದೇವಸ್ಥಾನಕ್ಕೆ ದೀಡ‌ ನಮಸ್ಕಾರ ಮಾಡುತ್ತೇನೆ” ಎಂದು ಅವರು ದೇವರಿಗೆ ಹರಕೆ ಹೊತ್ತಿದ್ದರು. 2026 ಜನವರಿಯಲ್ಲಿ ವಿಚ್ಛೇದನ ಪ್ರಕ್ರಿಯೆ ಕಾನೂನುಬದ್ಧವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೋಗೇಶ್ ತಮ್ಮ ಹರಕೆಯನ್ನು ತೀರಿಸಿದ್ದಾರೆ.

ಈ ಯಾತ್ರೆಗಾಗಿ ಜೋಗೇಶ್ ಮುಂಚಿತವಾಗಿಯೇ ಉಪವಿಭಾಗಾಧಿಕಾರಿಗಳಿಂದ (SDM) ಅನುಮತಿ ಪಡೆದಿದ್ದರು. ಯಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ಭದ್ರತೆ ನೀಡಿದ್ದರು. ಜೋಗೇಶ್ ಅವರ ಪೋಷಕರು ಮತ್ತು ಕುಟುಂಬದ ಸದಸ್ಯರು ಕೂಡ ಅವರ ಜೊತೆಗಿದ್ದರು. ದೇವಸ್ಥಾನ ತಲುಪಿದ ನಂತರ ಅವರು ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.

ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ
ಚಕ್ರದ ಅಡಿಯಲ್ಲಿ ಸಿಲುಕಿದ ಕರು
ಚಕ್ರದ ಅಡಿಯಲ್ಲಿ ಸಿಲುಕಿದ ಕರು
ಅರಣ್ಯ ಇಲಾಖೆ ಜೀಪನ್ನೇ ಅಟ್ಟಾಡಿಸಿ ಅಟ್ಯಾಕ್ ಮಾಡಿದ ಕಾಡಾನೆ!
ಅರಣ್ಯ ಇಲಾಖೆ ಜೀಪನ್ನೇ ಅಟ್ಟಾಡಿಸಿ ಅಟ್ಯಾಕ್ ಮಾಡಿದ ಕಾಡಾನೆ!
ಜೈಲಿನಿಂದಲೇ ವಿಡಿಯೋ ಕರೆ ಮಾಡಿ ಅಪ್ರಾಪ್ತ ಬಾಲಕಿಗೆ ಪೋಕ್ಸೊ ಆರೋಪಿ ಬೆದರಿಕೆ!
ಜೈಲಿನಿಂದಲೇ ವಿಡಿಯೋ ಕರೆ ಮಾಡಿ ಅಪ್ರಾಪ್ತ ಬಾಲಕಿಗೆ ಪೋಕ್ಸೊ ಆರೋಪಿ ಬೆದರಿಕೆ!
ವಾಹನ ಸವಾರರೇ ಗಮನಿಸಿ: ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್
ವಾಹನ ಸವಾರರೇ ಗಮನಿಸಿ: ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್