AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 500 ಅರ್ಜಿ ಹಾಕಿದ್ರು ಸಿಗದ ಕೆಲಸ, ರ‍್ಯಾಪಿಡೋ ಚಾಲಕನಾಗಿ ವೃತ್ತಿ ಜೀವನ ಆರಂಭಿಸಿದ ಯುವಕ

ಒಳ್ಳೆಯ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳಬೇಕೆನ್ನುವುದು ಎಲ್ಲರ ಕನಸು. ಆದರೆ ಎಷ್ಟೇ ಓದಿದರೂ ಉದ್ಯೋಗಕ್ಕಾಗಿ ಅಲೆಯುವ ಅದೆಷ್ಟೋ ಯುವಕ ಯುವತಿಯರು ನಮ್ಮ ಸುತ್ತಮುತ್ತಲಿನಲ್ಲಿದ್ದಾರೆ. ಆದರೆ ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ರು, ಈ ಯುವಕ ಈಗ ರ‍್ಯಾಪಿಡೋ ರೈಡರ್‌ನಾಗಿ ಕೆಲಸ ಮಾಡುತ್ತಿದ್ದಾನೆ. ಸದ್ಯ ಈ ಪೋಸ್ಟ್ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: 500 ಅರ್ಜಿ ಹಾಕಿದ್ರು ಸಿಗದ ಕೆಲಸ, ರ‍್ಯಾಪಿಡೋ ಚಾಲಕನಾಗಿ ವೃತ್ತಿ ಜೀವನ ಆರಂಭಿಸಿದ ಯುವಕ
ಸಾಂದರ್ಭಿಕ ಚಿತ್ರImage Credit source: DailyExpertNews
ಸಾಯಿನಂದಾ
|

Updated on: Jul 06, 2026 | 11:02 AM

Share

ಉದ್ಯೋಗ (job)ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಒಂದು ಕೆಲಸವಿದ್ದರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ ಎನ್ನುವಂತಾಗಿದೆ. ದಿನಬೆಳಗಾದರೆ ಅದೆಷ್ಟೋ ಯುವಕ ಯುವತಿಯರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಎಷ್ಟೋ ಯುವಕರು ಓದಿದ್ದೆ ಬೇರೆ ಈಗ ಮಾಡುತ್ತಿರುವ ಕೆಲಸವೇ ಬೇರೆಯಾಗಿದೆ. ಆದರೆ ಅನಿವಾರ್ಯಕ್ಕೆ ಕಟ್ಟುಬಿದ್ದು ಜೀವನ ನಿರ್ವಹಣೆಗಾಗಿ ಇನ್ಯಾವುದೋ ಕೆಲಸ ನೆಚ್ಚಿಕೊಂಡಿದ್ದಾರೆ. ಆದರೆ ಯುವಕನೊಬ್ಬ 500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಹಾಕಿದ್ರು ಕೆಲಸ ಸಿಗಲೇ ಇಲ್ಲ. ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ರು ಯಾವುದಕ್ಕೂ ಹಿಂದೆ ಸರಿಯದೇ ರ‍್ಯಾಪಿಡೋ ಚಾಲಕನಾಗಿ (Rapido driver) ಕೆಲಸ ಮಾಡುತ್ತಿದ್ದಾನೆ. ಈ ಯುವಕನ ವೃತ್ತಿ ಜೀವನದ ಬಹುದೊಡ್ಡ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀರಜ್ (Niraj) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ನಾನು ರ‍್ಯಾಪಿಡೋ ರೈಡರ್ ನ ಹೆಲ್ಮೆಟ್‌ನಲ್ಲಿ ಕಾಲೇಜು ಸ್ಟಿಕ್ಕರ್ ಗಮನಿಸಿದೆ. ಟ್ರಾಫಿಕ್‌ ನಡುವೆ ಸಿಲುಕಿಕೊಂಡಾಗ ಈ ಯುವಕನ ಜತೆಗೆ ಸಂಭಾಷಣೆಗೆ ಇಳಿದೆ. ಈ ವೇಳೆ ಯುವಕ ಕಳೆದ ಎರಡು ತಿಂಗಳಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದೇನೆ. ಆದರೆ ಒಂದೇ ಒಂದು ಕಂಪನಿನಿಂದ ಸಂದರ್ಶನಕ್ಕಾಗಿ ಕಾಲ್ ಬಂದಿಲ್ಲ. ಕೊನೆಗೆ ಜೀವನ ನಿರ್ವಹಣೆಗಾಗಿ ರ‍್ಯಾಪಿಡೋ ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾನೆ.

ಎಕ್ಸ್ ಪೋಸ್ಟ್ ಇಲ್ಲಿದೆ

ನಾನು ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ದು, ಚಾಲಕನಾಗಿ ಕೆಲಸ ಮಾಡುವುದು ನನ್ನ ಹೆತ್ತವರಿಗೆ ತಿಳಿದಿಲ್ಲ. ನನ್ನ ಮನೆಯವರು ಸಾಫ್ಟ್‌ವೇರ್ ಕೆಲಸದ ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದೇನೆ ಎಂದುಕೊಂಡಿದ್ದು, ನನ್ನ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೇಗೆ ವಿವರಿಸಬೇಕೆಂದು ತಿಳಿದಿಲ್ಲ ಎಂದು ಹೇಳಿಕೊಂಡಿರುವುದನ್ನು ಈ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗಾಗಿ 32 ಲಕ್ಷ ರೂ ವಾರ್ಷಿಕ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಐಐಟಿ ಪದವೀಧರೆ

ಈ ಪೋಸ್ಟ್ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶಿಕ್ಷಣ ಪಡೆದ್ರು ಕಷ್ಟ ಪಡೆಯದೇ ಇದ್ರೂ ಕಷ್ಟ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಇಂದಿನ ಯುವಕ ಪರಿಸ್ಥಿತಿ ಎಂದಿದ್ದಾರೆ. ಮತ್ತೊಬ್ಬರು, ಒಂದೆರಡು ವರ್ಷಗಳಲ್ಲಿ ಉದ್ಯೋಗ ಮಾರುಕಟ್ಟೆ ತುಂಬಾ ಸ್ಪರ್ಧಾತ್ಮಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ