AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್ ಸೇನೆಯ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿ; ಶರಣಾದರೂ ಕಾರಿನ ಮೇಲೆ ಶೂಟಿಂಗ್

ಆಕ್ರಮಿತ ವೆಸ್ಟ್ ಬ್ಯಾಂಕ್‌ನ ದಕ್ಷಿಣ ಭಾಗದಲ್ಲಿರುವ ಹೆಬ್ರಾನ್ ನಗರದ ಬಳಿ ಇಸ್ರೇಲ್ ರಕ್ಷಣಾ ಪಡೆಗಳು (IDF) ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯ ನಡುವೆ, ಕೇವಲ 7 ತಿಂಗಳ ಪ್ಯಾಲೆಸ್ತೀನ್ ಹೆಣ್ಣು ಮಗುವಿಗೆ ನೇರವಾಗಿ ಗುಂಡು ತಗುಲಿದೆ. ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಈ ಘಟನೆಯ ನಂತರ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಇಸ್ರೇಲ್ ಸೇನೆಯು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇಸ್ರೇಲ್ ಸೇನೆಯ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿ; ಶರಣಾದರೂ ಕಾರಿನ ಮೇಲೆ ಶೂಟಿಂಗ್
Israel AttackImage Credit source: TV9
ಸುಷ್ಮಾ ಚಕ್ರೆ
|

Updated on: Jun 06, 2026 | 11:08 PM

Share

ಜೆರುಸಲೇಂ, ಜೂನ್ 6: ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ (Israel) ಸೇನೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ ಸೇನೆಯು ಕುಟುಂಬವೊಂದು ಚಲಾಯಿಸುತ್ತಿದ್ದ ವಾಹನದ ಮೇಲೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿದೆ ಎಂದು ಮಗುವಿನ ಕುಟುಂಬಸ್ಥರು ಮತ್ತು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಶಿಶುವನ್ನು ಸ್ಯಾಮ್ ಫಹದ್ ಅಬು ಹೈಕಲ್ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಈ ಘಟನೆಯಲ್ಲಿ ಮಗುವಿನ ಪೋಷಕರಿಗೂ ಗಾಯಗಳಾಗಿವೆ.

ಆ ಪ್ರದೇಶದಲ್ಲಿದ್ದ ಶಸ್ತ್ರಸಜ್ಜಿತ ಉಗ್ರಗಾಮಿಗಳನ್ನು ಗುರಿಯಾಗಿಸಿ ಸೇನೆ ಗುಂಡು ಹಾರಿಸಿತ್ತು. ಆದರೆ, ಮಗುವಿನ ಮೇಲಿನ ದಾಳಿಯು ಉದ್ದೇಶಪೂರ್ವಕವಾಗಿರಲಿಲ್ಲ, ಅದು ಆಕಸ್ಮಿಕವಾಗಿ ನಡೆದಿದೆ ಎಂದು ಸೇನೆ ಸಮರ್ಥಿಸಿಕೊಂಡಿದೆ. ಮಗುವಿನ ಸಾವಿಗೆ ಕಾರಣವಾದ ನಿಖರವಾದ ಸನ್ನಿವೇಶಗಳನ್ನು ಮತ್ತು ಸೇನಾ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಮಿಲಿಟರಿ ಪೊಲೀಸರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ ಎಂದು ಐಡಿಎಫ್ ತಿಳಿಸಿದೆ.

ಇದನ್ನೂ ಓದಿ: ವಿಶ್ವ ಶಾಂತಿಗೆ ಬಿಗ್ ಬೂಸ್ಟ್: ಇಸ್ರೇಲ್-ಲೆಬನಾನ್ ಕದನ ವಿರಾಮಕ್ಕೆ ಒಪ್ಪಿಗೆ, ಇರಾನ್ ಮಾತುಕತೆಗೂ ಮುಕ್ತವಾದ ಹಾದಿ

ಮಗುವಿನ ಕುಟುಂಬದ ಸದಸ್ಯರ ಪ್ರಕಾರ, ಹೆಬ್ರಾನ್‌ನ ‘ಟೆಲ್ ರುಮೇಡಾ’ ಎಂಬ ಪ್ರದೇಶದಲ್ಲಿ ಇಸ್ರೇಲ್ ಸೈನಿಕರು ಇವರ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಈ ಘಟನೆ ನಡೆದಿದೆ. ಬೆತ್ಲೆಹೆಮ್ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿರುವ ಮಗುವಿನ ತಂದೆ ಫಹದ್ ಅಬು ಹೈಕಲ್ ಅವರು ಇಸ್ರೇಲಿ ಪತ್ರಿಕೆ ‘ಹಾ ರೆಟ್ಜ್’ ಜೊತೆ ಮಾತನಾಡಿ, ತಾವು ಸೈನಿಕರ ಎಲ್ಲಾ ಸೂಚನೆಗಳನ್ನು ಪಾಲಿಸಿದ್ದರೂ ತಮ್ಮ ಮೇಲೆ ಗುಂಡು ಹಾರಿಸಲಾಯಿತು ಎಂದು ಆರೋಪಿಸಿದ್ದಾರೆ.

“ಸೈನಿಕರು ಕಾರನ್ನು ನಿಲ್ಲಿಸುವಂತೆ ನನಗೆ ಸನ್ನೆ ಮಾಡಿದರು. ನಾನು ಕಾರನ್ನು ಸಂಪೂರ್ಣವಾಗಿ ನಿಲ್ಲಿಸಿ, ನನ್ನ ಎರಡೂ ಕೈಗಳನ್ನು ಸ್ಟೀರಿಂಗ್ ವೀಲ್ ಮೇಲೆ ಎತ್ತಿಟ್ಟೆ. ಆದರೆ ಅದರ ಬೆನ್ನಲ್ಲೇ ಅವರು ತಕ್ಷಣವೇ ವಾಹನದ ಮೇಲೆ ಗುಂಡಿನ ಮಳೆಗರೆದರು. ಗುಂಡು ಮೊದಲು ತಮ್ಮ ಕೈಗೆ ತಗುಲಿ, ನಂತರ ಕಾರಿನ ಹಿಂಬದಿಯ ಸೀಟಿನಲ್ಲಿ ತಾಯಿಯೊಂದಿಗೆ ಕುಳಿತಿದ್ದ ತಮ್ಮ 7 ತಿಂಗಳ ಮಗುವಿಗೆ ತಗುಲಿತು ಎಂದು ಅಬು ಹೈಕಲ್ ಹೇಳಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್, ಲೆಬನಾನ್ 10 ದಿನಗಳ ಕದನವಿರಾಮಕ್ಕೆ ಒಪ್ಪಿಕೊಂಡಿವೆ; ಟ್ರಂಪ್ ಘೋಷಣೆ

ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಮತ್ತು ಸ್ಥಳೀಯ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿರಪರಾಧಿ ಮಕ್ಕಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ನಡೆಸುತ್ತಿರುವ ಅಮಾನವೀಯ ದಾಳಿಗಳಿಗೆ ಇದು ಮತ್ತೊಂದು ಸಾಕ್ಷಿ ಎಂದು ಅವರು ಆಪಾದಿಸಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಮಧ್ಯಪ್ರವೇಶಿಸಿ ವೆಸ್ಟ್ ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ನೂರಾರು ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ